ಬೆಂಗಳೂರು,ಡಿ.02:
ವಿಪರೀತ ಬುದ್ದಿ ವಿನಾಶ ಕಾಲೇ ಎಂಬಂತೆ ಎಲ್ಲರಿಗೂ ಹದ್ದುಮೀರಿ ಮಾತನಾಡುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜಕೀಯದಲ್ಲಿ ಖಂಡಿತವಾಗಿಯೂ ವಿನಾಶ ಆಗಿಯೇ ತೀರುತ್ತಾರೆಂದು ಶಾಸಕ ಹಾಗೂ ಅಖಿಲ ಭಾರತ ಪಂಚಮಸಾಲಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಎಚ್ಚರಿಕೆ ಕೊಟ್ಟಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಯತ್ನಾಳ್ ಎಲ್ಲರ ಬಗ್ಗೆಯೂ ಮಾತನಾಡುತ್ತಾರೆ. ಮಠಾಧೀಶರು, ಸ್ವಾಮೀಜಿಗಳು, ರಾಜಕಾರಣಿಗಳು ಸೇರಿದಂತೆ ನನಗೆ ಯಾರೊಬ್ಬರು ಸರಿಸಾಟಿ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ. ಇದು ವಿಪರೀತ ಬುದ್ದಿ ವಿನಾಶ ಕಾಲೇ ಎಂಬಂತಾಗಿದೆ. ನಾನು ಸುಮ್ಮನೆ ಹೇಳುವುದಿಲ್ಲ. ಅವರು ಕಂಡಿವಾಗಿ ವಿನಾಶವಾಗುತ್ತಾರೆ ಎಂದು ಭವಿಷ್ಯ ನುಡಿದರು.
ಸಮಾನತೆ ಸಾರಿದ ಬಸವಣ್ಣನವರ ಬಗ್ಗೆಯೂ ನಾಲಿಗೆ ಹರಿಬಿಟ್ಟು ತಮ್ಮ ಕೀಳು ಅಭಿರುಚಿಯನ್ನು ತೋರಿಸಿದ್ದಾರೆ. ವಿಭೂತಿ ಹಚ್ಚುವವರ ಬಗ್ಗೆಯೂ ಅವಹೇಳನ ಮಾಡುತ್ತಾರೆ ಯಾವ ಪಕ್ಷದಲ್ಲೂ ಇವರಿಗೆ ನಿಯತ್ತು ಎಂಬುದಿಲ್ಲ. ತಾನೊಬ್ಬನೇ ಹರಿಶ್ಚಂದ್ರ ಇಲ್ಲದವರೆಲ್ಲರೂ ಅಪ್ರಮಾಣಿಕರು ಎಂದುಕೊಂಡಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ಬಿಜೆಪಿಯಲ್ಲಿದ್ದಾಗಲೂ ಅಲ್ಲಿಯೂ ನಿಷ್ಠೆಯಿಂದ ಇರಲಿಲ್ಲ. ಹೀಗಾಗಿಯೇ ಅವರನ್ನು ಕಿತ್ತು ಹಾಕಲಾಗಿತ್ತು. ಬಳಿಕ ಜೆಡಿಎಸ್ ಸೇರಿದಾಗ ಮಸೀದಿಗೆ ಹೋಗಿ ನಮಾಜ್ ಮಾಡಿ ಬಂದಿದ್ದಾರೆ.ಇದರ ಬಗ್ಗೆ ನಮ್ಮ ಬಳಿ ದಾಖಲೆಗಳಿವೆ. ಟಿಪ್ಪು ಸುಲ್ತಾನ್ ಮತಾಂಧ ಎನ್ನುವ ಯತ್ನಾಳ್ ಹಿಂದೆ ಟೋಪಿ ಹಾಕಿಕೊಂಡು ಏನು ಗುಣಗಾನ ಮಾಡಿದ್ದಾರೆ ಎಂಬುದು ಅರಿವಿಲ್ಲವೇ ಎಂದು ಪ್ರಶ್ನಿಸಿದರು
ಬಸವನಗೌಡ ಪಾಟೀಲ್ ಯತ್ನಾಳ್ ಪದೇ ಪದೇ ಮಹಾಪುರುಷರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ, ಅವಮಾನ ಮಾಡುವ ರೀತಿ ಹೇಳಿಕೆ ನೀಡಿದ್ದಾರೆ, ಬಸವಣ್ಣ ಹೊಳೆ ಹಾರಿದರು ಎಂದು ಒಮ್ಮೆ ಹೇಳುತ್ತಾರೆ ಇನ್ನೊಂದು ಬಾರಿ ನಾನು ಹಾಗೇ ಹೇಳಿಯೇ ಇಲ್ಲ ಎನ್ನುತ್ತಾರೆ. ಲಿಂಗಾಯತ ಪಂಚಮಸಾಲಿ ಧರ್ಮದಲ್ಲಿ ಜನಿಸಿ ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಜಗಜ್ಯೋತಿ ಬಸವಣ್ಣನವರ ಬಗ್ಗೆ ಹೇಡಿ ಎಂಬ ರೀತಿ ಮಾತಾಡಿದ್ದನ್ನು ಖಂಡಿಸಿದ ಕಾಶಪ್ಪನವರ್, ಯತ್ನಾಳ್ ಕ್ಷಮೆ ಕೇಳುವುದಕ್ಕೂ ಅರ್ಹರಲ್ಲ. ತಮ್ಮ ಹೇಳಿಕೆಗಳನ್ನು ನಿಲ್ಲಿಸದೇ ಇದ್ದರೆ ಬಸವ ಅನುಯಾಯಿಗಳು ಅವರ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.
ವಕ್ಫ್ ನೋಟಿಸ್ ಬಗ್ಗೆ ಹೋರಾಟ ಮಾಡುತ್ತಿರುವುದು ಕಪಟ ನಾಟಕದಂತಿದೆ. ಇದು ಯಾವ ರೈತರ ಪರ ಹೋರಾಟವೂ ಅಲ್ಲ. ಹಿಂದೆ ಇದೇ ಯತ್ನಾಳ್ ಬಿಜೆಪಿ ಕಾಲದಲ್ಲಿ ನೊಟೀಸ್ ಕೊಟ್ಟಾಗ ಏಕೆ ಮಾತಾಡಲಿಲ್ಲ . ಆಗ ನಿಮ್ಮ ಬಾಯಿ ಬಿದ್ದು ಹೋಗಿತ್ತೇ ಎಂದು ಪ್ರಶ್ನಿಸಿದರು.
ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರನ್ನು ಗುರಿಯಾಗಿಟ್ಟುಕೊಂಡು ಯತ್ನಾಳ್ ಹೋರಾಟ ನಡೆಸುತ್ತಿದ್ದಾರೆ. ಇದು ವಿಜಯೇಂದ್ರ ಹಠಾವೋ, ಪಾರ್ಟಿ ಬಚಾವೋ ಅಷ್ಟೇ ಆಗಿದೆ. ಹಿಂದೆ ಯತ್ನಾಳ್ ಅವರ ಸರ್ಕಾರ ಇದ್ದಾಗ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಕ್ಫ್ ಬಗ್ಗೆ ಏನು ಹೇಳಿದ್ದರು? ಸುಮ್ಮನೆ ಯತ್ನಾಳ್ ಗುಂಪುಗಾರಿಕೆ ಕಟ್ಟಿಕೊಂಡು ಪ್ರವಾಸ ಮಾಡುತ್ತಿದ್ದಾರೆ ಎಂದು ಕುಹುಕವಾಡಿದರು.
ಯತ್ನಾಳ್ ಎಲ್ಲ ಹೋರಾಟದಲ್ಲೂ ಗಿಮಿಕ್ ಮಾಡುತ್ತಿದ್ದಾರೆ. ಪಂಚಮಸಾಲಿ ಸಮುದಾಯ ಕೇವಲ ಬಿಜೆಪಿ ಪರವಾಗಿ ಇದೆ ಎಂದು ಬಿಂಬಿಸಲು ಹೊರಟಿದ್ದಾರೆ. ಅವರಿಂದಾಗಿಯೇ ಪಂಚಮಸಾಲಿ ಹೋರಾಟದ ವೇಳೆ ಬೆಳಗಾವಿ ಮುತ್ತಿಗೆ ಹಾಕಲಿಲ್ಲ ಎಂದು ಟೀಕಿಸಿದರು.
Previous Articleಎಸ್ಕಾರ್ಟ್ ಸರ್ವಿಸ್ ಹೆಸರಲ್ಲಿ ವಂಚಿಸಿದ್ದು ಹೀಗೆ..
Next Article ಸನ್ಯಾಸಿಯಾಗಲು ಹೊರಟ ಉನ್ನತ ಅಧಿಕಾರಿ.
19 Comments
how can i get generic clomid without prescription where to get cheap clomid without prescription buy generic clomiphene clomid only cycle cost cheap clomid pills generic clomid for sale buy clomiphene no prescription
I’ll certainly bring to review more.
order inderal 20mg generic – inderal 20mg over the counter methotrexate ca
cheap amoxil tablets – generic valsartan ipratropium order online
azithromycin pills – bystolic 5mg brand order nebivolol 5mg without prescription
buy augmentin 1000mg pill – at bio info cheap acillin
buy coumadin 5mg – blood thinner buy hyzaar tablets
mobic 7.5mg uk – https://moboxsin.com/ buy mobic 7.5mg sale
buy erectile dysfunction medicine – fast ed to take buy ed pills online usa
order amoxicillin pill – amoxil order amoxicillin drug
order fluconazole 200mg online cheap – forcan without prescription buy fluconazole online cheap
buy cenforce 50mg online – cenforce cheap cenforce cost
dapoxetine and tadalafil – this cialis canadian purchase
order ranitidine 300mg without prescription – buy generic ranitidine 300mg purchase ranitidine
when will teva’s generic tadalafil be available in pharmacies – click buy cialis canada
The thoroughness in this draft is noteworthy. este sitio
can buy viagra rite aid – https://strongvpls.com/# order viagra online fast delivery
The sagacity in this tune is exceptional. https://buyfastonl.com/amoxicillin.html
More articles like this would pretence of the blogosphere richer. https://prohnrg.com/product/diltiazem-online/