ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಹಗರಣದಲ್ಲಿ 300 ಕೋಟಿ ಅವ್ಯವಹಾರ ನಡೆದಿದೆಯೋ ಎಷ್ಟು ಮಂದಿ ಕಿಂಗ್‍ಪಿನ್‍ಗಳಿದ್ದಾರೋ ಎಲ್ಲವೂ ತನಿಖೆಯಿಂದಲೇ ಗೊತ್ತಾಗಬೇಕು. ಸಿಐಡಿಯವರು ಪಾರದರ್ಶಕವಾಗಿ ತನಿಖೆ ಮಾಡುತ್ತಾರೆ. ಯಾರನ್ನು ಕೂಡ ರಕ್ಷಣೆ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ಬಗ್ಗೆ ಪರಸ್ಪರ ಆರೋಪ, ಪ್ರತ್ಯಾರೋಪ ಮಾಡುವುದನ್ನು ಬಿಟ್ಟು ಯಾರ ಬಳಿಯಾದರೂ ದಾಖಲೆಗಳಿದ್ದರೆ ತನಿಖಾ ತಂಡಕ್ಕೆ ನೀಡಲಿ, ಕೇವಲ ಆರೋಪಕ್ಕೋಸ್ಕರ ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದರು. ಯಾರ ಬಳಿಯಾದರೂ ದಾಖಲೆಗಳಿದ್ದರೆ ಕೂಡಲೇ ತನಿಖಾ ತಂಡಕ್ಕೆ ನೀಡಿ. ಇದರಿಂದ ಸತ್ಯಾಂಶ ಹೊರಬರಲಿದೆ, ಆರೋಪ ಮಾಡುವುದರಿಂದ ಸತ್ಯಾಂಶ ಹೊರಬರುವುದಿಲ್ಲ.
ನಿಮಗೆ ತನಿಖೆ ನಿಜಾಂಶ ಹೊರಬರಬೇಕೆಂಬ ಮನಸ್ಸಿದ್ದರೆ ಮೊದಲು ದಾಖಲೆಗಳನ್ನು ಕೊಡಿ. ಸುಮ್ಮನೆ ಪ್ರತಿದಿನ ಮಾತನಾಡುವುದರಿಂದ ಅರ್ಥವಿಲ್ಲ. ಹಿಂದೆಯೂ ಇದನ್ನೇ ಹೇಳಿದ್ದೆ. ಮುಂದೆಯೂ ಇದನ್ನೇ ಹೇಳುತ್ತೇನೆ ಎಂದು ತಿಳಿಸಿದರು.
Previous Articleಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಗೆ ಗುಡ್ ಬೈ..
Next Article ಸಿಲ್ಲಿಲಲ್ಲಿ ಖ್ಯಾತಿಯ ಸುನೇತ್ರಾ ಪಂಡಿತ್ಗೆ ಆ್ಯಕ್ಸಿಡೆಂಟ್