ಬೆಂಗಳೂರು.
ಮಾಂಸಾಹಾರ ಸೇವನೆ ಇತ್ತೀಚೆಗೆ ಹೊಸ ರೀತಿಯಲ್ಲಿ ಟ್ರೆಂಡ್ ಆಗುತ್ತಿದೆ. ಮಾಂಸವನ್ನು ಬಳಸಿ ತಯಾರಿಸುವ ವಿವಿಧ ರೀತಿಯ ಖಾದ್ಯಗಳು ಜಿಹ್ವಾಪ್ರಿಯರ ಬಾಯಲ್ಲಿ ನೀರೂರಿಸುತ್ತವೆ.
ಅಂದಹಾಗೆ ಇಲ್ಲಿಯವರೆಗೆ ದಕ್ಷಿಣ ಭಾರತೀಯರು ಅತಿ ಹೆಚ್ಚು ಮಾಂಸ ಸೇವನೆ ಮಾಡುತ್ತಾರೆ ಎಂಬ ಮಾತಿತ್ತು ಆದರೆ ಈ ಬಗ್ಗೆ ಹೊರ ಬಂದಿರುವ ಅಧ್ಯಯನ ವರದಿ ಅಚ್ಚರಿ ಮೂಡಿಸಿದೆ.
ದೇಶದ ಸಪ್ತ ಸೋದರಿಯರು ಎಂದು ಕರೆಸಿಕೊಳ್ಳುವ ಈಶಾನ್ಯ ರಾಜ್ಯಗಳಲ್ಲಿ ಒಂದಾದ ನಾಗಾಲ್ಯಾಂಡ್ ನಲ್ಲಿ ಬಹುತೇಕ ಎಲ್ಲರೂ ಮಾಂಸಹಾರಿಗಳೇ.ಈ ರಾಜ್ಯದಲ್ಲಿನ ಶೇ.99.8 ರಷ್ಟು ಜನರು ಮಾಂಸಾಹಾರವನ್ನು ಇಷ್ಟಪಡುತ್ತಾರೆ ಎಂದು ವರದಿ ತಿಳಿಸಿದೆ
ಇದಾದ ನಂತರ ಈ ಪಟ್ಟಿಯಲ್ಲಿ ಪಶ್ಚಿಮ ಬಂಗಾಳ ರಾಜ್ಯ 2ನೇ ಸ್ಥಾನದಲ್ಲಿದೆ. ಇಲ್ಲಿನ ಶೇ.99.3ರಷ್ಟು ಜನರು ಮಾಂಸಾಹಾರ ಸೇವಿಸಲು ಇಷ್ಟಪಡುತ್ತಾರೆ. ಕೇರಳ ರಾಜ್ಯ 3ನೇ ಸ್ಥಾನದಲ್ಲಿದೆ. ಇಲ್ಲಿನ ಶೇ.99.1ರಷ್ಟು ಜನರು ಮಾಂಸಾಹಾರ ಸೇವಿಸುತ್ತಾರೆ. ಆಂಧ್ರಪ್ರದೇಶ 4ನೇ ಸ್ಥಾನದಲ್ಲಿದ್ದು, 98.25 ರಷ್ಟು ಜನರು ಮಾಂಸ ತಿನ್ನುತ್ತಾರೆ. ಈ ಪಟ್ಟಿಯಲ್ಲಿ ತಮಿಳುನಾಡು 6ನೇ ಸ್ಥಾನದಲ್ಲಿದೆ. 97.65 ರಷ್ಟು ಜನರು ಮಾಂಸಾಹಾರ ಇಷ್ಟಪಡುತ್ತಾರೆ. ಅದರಲ್ಲೂ ಚಿಕನ್ ಬಿರಿಯಾನಿ ಇವರ ನೆಚ್ಚಿನ ಸ್ಥಳೀಯ ಆಹಾರವಾಗಿದೆ.
ಒಡಿಶಾ ಏಳನೇ ಸ್ಥಾನದಲ್ಲಿದೆ. ಅದರ ಜನಸಂಖ್ಯೆಯ ಸರಿಸುಮಾರು 97.35 ಪ್ರತಿಶತದಷ್ಟು ಜನರು ಮಾಂಸಾಹಾರಕ್ಕೆ ಆದ್ಯತೆ ನೀಡುತ್ತಾರೆ ಎಂದು ಅಂಕಿ ಅಂಶಗಳು ತಿಳಿಸಿವೆ