ಬೆಂಗಳೂರು.
ಯಾರೇ ಕೂಗಾಡಲಿ… ಎಂಬ ಸಿನಿಮಾ ಹಾಡು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಷಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದಾಗ ನೆನಪಿಗೆ ಬರುತ್ತದೆ.
ನಾಯಕತ್ವ ಬದಲಾವಣೆಯ ಕುರಿತಂತೆ ಕಾಂಗ್ರೆಸ್ ಪಕ್ಷದಲ್ಲಿ ದಿನಕ್ಕೊಂದು ಬೆಳವಣಿಗೆಗಳು ನಡೆದಿವೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬೇರೆಯವರನ್ನು ನೇಮಕ ಮಾಡಬೇಕು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಂತರ ದಲಿತ ಸಮುದಾಯಕ್ಕೆ ಸೇರಿದವರು ಮುಖ್ಯಮಂತ್ರಿ ಆಗಬೇಕು ಸರ್ಕಾರದಲ್ಲಿ ಹೊಸದಾಗಿ ಮೂರು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯಾಗಬೇಕು ಎಂಬ ಬಗೆ ಬಗೆಯ ಬೇಡಿಕೆಗಳನ್ನು ಮಂಡಿಸಲಾಗುತ್ತಿದೆ. ಆದರೆ ಯಾವುದೇ ಬೇಡಿಕೆ ಮತ್ತು ಬೆಳವಣಿಗೆಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಡಿ.ಕೆ. ಶಿವಕುಮಾರ್ ತಮ್ಮ ಇಲಾಖೆಯ ಕೆಲಸ ಮತ್ತು ಸಂಘಟನೆಯಲ್ಲಿ ತೊಡಗಿದ್ದಾರೆ.
ಈ ಎಲ್ಲಾ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸಿರುವ ಅವರ ಸೋದರ ಹಾಗೂ ಮಾಜಿ ಸಂಸದ ಡಿಕೆ ಸುರೇಶ್ ಅವರು ಎಲ್ಲರೂ ಶಿವಕುಮಾರ್‌ಗೆ ಒಳ್ಳೆಯದಾಗಲಿ ಎಂಬ ಭಾವನೆಯಿಂದ ಮಾತನಾಡುತ್ತಿದ್ದಾರೆ. ಸ್ವತಃ ಶಿವಕುಮಾರ್ ಹೇಳಿದಂತೆ ಬಂಡೆ ಪ್ರಕೃತಿ, ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಬಂಡೆಗೆ ಪೆಟ್ಟು ಬಿದ್ದಾಗಲೇ ಶಿಲೆಯಾಗುತ್ತದೆ. ಎಷ್ಟು ತಟ್ಟುತ್ತಾರೋ ತಟ್ಟಲಿ ಎಂದರು.
ಈ ಮಾತು ಮೇಲ್ನೋಟಕ್ಕೆ ಸತ್ಯ ಎಂಬಂತೆ ಕಾಣುತ್ತಿದೆ ಕಳೆದ 2023ರ ಮೇ 18 ರಂದು ದೆಹಲಿಯಲ್ಲಿ ಹೈಕಮಾಂಡ್ ಸಮ್ಮುಖದಲ್ಲಿ ನಡೆದ ಮಾತುಕತೆ ವೇಳೆ ರಾಜ ಈ ಸೂತ್ರವನ್ನು ಸಿದ್ಧಪಡಿಸಲಾಗಿದೆ.
ಈ ರಾಜೀಸೂತ್ರಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಎಐಸಿಸಿ ಸಂಘಟನಾ ಕಾರ್ಯದರ್ಶಿ ವೇಣುಗೋಪಾಲ್ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಾಕ್ಷಿ.
ಹೀಗಾಗಿ ಅಂದು ಹೈಕಮಾಂಡ್ ರೂಪಿಸಿರುವ ರಾಜಸೂತ್ರ ನಿಶ್ಚಿತವಾಗಿ ಜಾರಿಗೆ ಬರಲಿದೆ ಎಂದು ಬಲವಾಗಿ ನಂಬಿರುವ ಡಿ.ಕೆ. ಶಿವಕುಮಾರ್ ಯಾರೇ ಕೂಗಾಡಲಿ ನನಗೇನು ಎಂಬಂತೆ ತಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
Previous Articleಕೊನೆಗೂ ಪತ್ತೆಯಾಯಿತು ಕದ್ದ ಚಿನ್ನ
Next Article ಯಾಕೆ ಹೀಗೆ ಆಡುತ್ತಾರೆ ವಿಜಯೇಂದ್ರ.