Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಯುವಕರೇ ಎಚ್ಚರ ತಪ್ಪದಿರಿ! ಧರ್ಮ ಹಿಂಸೆಯನ್ನು ಪ್ರಚೋದಿಸಲ್ಲ
    ಸುದ್ದಿ

    ಯುವಕರೇ ಎಚ್ಚರ ತಪ್ಪದಿರಿ! ಧರ್ಮ ಹಿಂಸೆಯನ್ನು ಪ್ರಚೋದಿಸಲ್ಲ

    vartha chakraBy vartha chakraApril 19, 2022Updated:August 22, 2022No Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಹುಬ್ಬಳ್ಳಿ: ಮಾನವೀಯ ನೆಲಗಟ್ಟಿನಲ್ಲಿ ನಿಂತು ನೋಡಿದಾಗ ಹುಬ್ಬಳ್ಳಿಯ ಘಟನೆ ನಿಜಕ್ಕೂ ಕೂಡ ಖಂಡಿಸಲೇಬೇಕು. ತಪ್ಪು ಯಾರದ್ದೆ ಆಗಿರಲಿ ಶಿಕ್ಷೆ ಆಗಲೇಬೇಕು. ಆದ್ರೆ ಏನಾಗಿದೆಯೋ ಗೊತ್ತಿಲ್ಲ ಹುಬ್ಬಳ್ಳಿಗೆ. ಈ ಹಿಂದೆ ಇದ್ಗಾ ವಿವಾದದ ನಂತರ ಬಹುಕಾಲದಿಂದ ಇಲ್ಲಿ ಎಲ್ಲರೂ ಸೌಹಾರ್ಧತೆಯಿಂದಲೇ ಬಾಳುತ್ತಿದ್ದರು. ಆದರೆ ಅದ್ಯಾವನೋ ಗ್ರಾಫಿಕ್ಸ್ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಕ್ಕೆ ಈಗ ಇಡೀ ಹೂಬಳ್ಳಿಯಂತಿದ್ದ ಹುಬ್ಬಳ್ಳಿಯಲ್ಲಿ ದ್ವೇಷದ ಹೊಗೆಯಾಡುವಂತಾಗಿದೆ. ಅಷ್ಟಕ್ಕೂ ಅವಹೇಳನ ನಾಡಿದ ಆರೋಪಿಯನ್ನು ಬಂಧಿಸಿದ ಮೇಲೆ ಇಷ್ಟೊಂದು ಗಲಾಟೆಯ ಅವಶ್ಯಕತೆ ಇತ್ತಾ? ಎನ್ನುವುದು ಪ್ರಶ್ನೆಯಾಗಿದೆ. ಈ ಘಟನೆಯ ಒಳಹೂರಣ ನೋಡಿದಾಗ ಹತ್ತು ಹಲವು ಸಂಶಯಗಳ ಹುತ್ತವೇ ಬೆಳೆದು ನಿಲ್ಲುತ್ತೆ. ಈದ್ಗಾ ವಿವಾದ ನಡೆದಾಗ ಮುಸ್ಲೀಂರಿಗೊಂದು ನಾಯಕತ್ವ ಇತ್ತು. ಆದ್ರೆ ಇಂದು ಜಬ್ಬಾರ್ ಹೊನ್ನಳ್ಳಿ ಅವರ ನಂತರದ ದಿನಗಳಲ್ಲಿ ಸಮಾಜದ ಮೇಲೆ ಪ್ರಭಾವ ಬೀರುವಂತಹ ನಾಯಕರ ಕೊರತೆ ಇದೆ. ಇದು ಕೂಡ ಯುವಕರು ದಾರಿ ತಪ್ಪುವಂತೆ ಆಗಲು ಒಂದು ಕಾರಣ.
    ಎಲ್ಲದಕ್ಕಿಂತ ಮುಖ್ಯವಾಗಿ ಸರ್ಕಾರದ ವೈಫಲ್ಯತೆಯನ್ನು ಕೂಡ ಇಲ್ಲಿ ಹೇಳಲೇಬೇಕಿದೆ. ಒಂದು ಪೋಸ್ಟ್ ಹಾಕಿದ ಕೂಡಲೇ ಅಷ್ಟೊಂದು ಜನ ಏಕಾಏಕಿ ನುಗ್ಗಿ ದಾಂದಲೆ ಮಾಡಲು ಸಾಧ್ಯವೆ.? ಅಥವ ಪೋಸ್ಟ್ ಹಾಕಿದವನು ನಾನು ಪೋಸ್ಟ್ ಹಾಕ್ತಿನಿ, ನೀವು ತಯಾರಾಗಿರಿ ಅಂತ ಹೇಳಲು ಸಾದ್ಯವೆ. ಹಾಗಾದ್ರೆ ಪೋಸ್ಟ್ ಹಾಕಿದ ಮೇಲೆ ಯುವಕರೆಲ್ಲ ಸೇರಿ ಗುಂಪು ಕೂಡಿ ಠಾಣೆಗೆ ಬರಲು ಸ್ವಲ್ಪ ಸಮಯ ಬೇಕಾಗುತ್ತದೆ ಅಲ್ಲವೆ? ಹೀಗಿದ್ದಾಗ ಗುಪ್ತಚರ ಇಲಾಖೆಗೆ ಇದು ಗೊತ್ತಾಗಲಿಲ್ಲವೇ? ಇದರಲ್ಲಿ ಗುಪ್ತಚರ ಇಲಾಖೆಯ ವಿಫಲತೆಯೂ ಎದ್ದು ಕಾಣುತ್ತಿದೆ ಎಂದು ಕೆಲವರು ವಿಶ್ಲೇಷಿಸುತ್ತಿದ್ದಾರೆ.
    ಇನ್ನು ಈ ಪ್ರಕರಣವನ್ನು ಮತ್ತೊಂದು ಆ್ಯಂಗಲ್ ನಲ್ಲಿ ನೋಡುವುದಾದ್ರೆ, ಈಗಾಗಲೇ ರಾಜ್ಯದಲ್ಲಿ ಹಿಜಾಬ್, ಆಜಾನ್, ವ್ಯಾಪಾರ ಬಹಿಷ್ಕಾರ, ಬೆಲೆ ಏರಿಕೆ, ಸಂತೋಷ ಸಾವು…! ಹೀಗೆ ಒಂದಾ? ಎರಡಾ? ಸಾಲು ಸಾಲು ನ್ಯೂನ್ಯತೆಗಳು ಸರ್ಕಾರದ ವರ್ಚಸ್ಸಿಗೆ ಧಕ್ಕೆ ತಂದಿದ್ದಂತೂ ಸತ್ಯ. ಹೀಗಿರುವಾಗ ಕಾದು ಕುಳಿತ ಬಿಜೆಪಿ ಹಾಗು ಸಂಘ ಪರಿಹಾರಕ್ಕೆ ಇದಿಷ್ಟು ಸಾಕಾಗಿತ್ತು. ಮುಸ್ಲೀಂ ಯುವಕರು ಪ್ರಚೋದನೆಗೆ ಇದು ಕೂಡ ಕಾರಣ ಇರುಬಹುದು ಎನ್ನುವ ಸಂಶಯ ವ್ಯಕ್ತವಾಗಿದೆ‌‌. ಇದು ಏನೇ ಇರಲಿ ಮುಸ್ಲೀಂ ಯುವಕರು ಸಂಯಮ ಮೀರಿ ನಡೆದುಕೊಂಡಿದ್ದಂತೂ ಅಕ್ಷಮ್ಯ ಅಪರಾಧ. ಇಂದು ರಾಜ್ಯವನ್ನು ಧರ್ಮದ ಹೆಸರಲ್ಲಿ ಹುರಿದು ಮುಕ್ಕುವ ಕೆಲಸ ನಡೆದಿದೆ. ಇಂತಹ ಸಂದರ್ಭದಲ್ಲಿ ಮುಸ್ಲೀಂ ಯುವಕರ ಪುಂಡಾಟಿಕೆಯೂ ಕೂಡ ಹದ್ದು ಮೀರಿರುವಂತಹದ್ದು. ಸಮ ಹಾಗೂ ಸೌಹಾರ್ಧ ಸಮಾಜ ಕೆಡವುದಕ್ಕಾಗಿಯೇ ಕೆಲವು ಶಕ್ತಿಗಳು ಸನ್ನದ್ಧವಾಗಿರುವಾಗ ಕಟ್ಟುವ ಕೆಲದಕ್ಕೆ ಪ್ರಯತ್ನಿಸಬೇಕಾದ ಅನಿವಾರ್ಯತೆ ಇದೆ‌‌. ಇನ್ನು ಹುಬ್ಬಳ್ಳಿಯ ಘಟನೆಯಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಗೆ ಯಾವುದೇ ಅಭ್ಯಂತರವಿಲ್ಲ. ಆದರೆ ಅಮಾಯಕರಿಗೆ ಮಾತ್ರ ಶಿಕ್ಷೆಯಾಗದಿರಲಿ ಎನ್ನುವುದು ನಮ್ಮ ಕಳಕಳಿ.

    #Hubli ಧರ್ಮ Business ಹುಬ್ಬಳ್ಳಿ
    Share. Facebook Twitter Pinterest LinkedIn Tumblr Email WhatsApp
    Previous Articleಡಿಕೆಶಿ ಭೇಟಿಯಿಂದ ತನಿಖೆ ಚುರುಕು ಆಯ್ತಾ…!?
    Next Article ರಮೇಶ್ ಬಾಬು ಆಯ್ಕೆ
    vartha chakra
    • Website

    Related Posts

    ಇವರಿಗೆಲ್ಲಾ ಅನ್ನಭಾಗ್ಯದ ಅಕ್ಕಿ ಸಿಗುವುದಿಲ್ಲ !

    September 1, 2025

    ಬಿಜೆಪಿ ಚಾಮುಂಡಿ ಯಾತ್ರೆ !

    September 1, 2025

    ಗಣೇಶ ಮೂರ್ತಿ ವಿಸರ್ಜನೆ ವೇಳೆ ಯಾಕೆ ಹೀಗಾಗುತ್ತಿದೆ !

    September 1, 2025

    Comments are closed.

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಇವರಿಗೆಲ್ಲಾ ಅನ್ನಭಾಗ್ಯದ ಅಕ್ಕಿ ಸಿಗುವುದಿಲ್ಲ !

    ಬಿಜೆಪಿ ಚಾಮುಂಡಿ ಯಾತ್ರೆ !

    ಗಣೇಶ ಮೂರ್ತಿ ವಿಸರ್ಜನೆ ವೇಳೆ ಯಾಕೆ ಹೀಗಾಗುತ್ತಿದೆ !

    ಜಮೀರ್ ಅಹಮದ್ ಖಾನ್ ಗೆ ರಾಧಿಕಾ ಕುಮಾರಸ್ವಾಮಿ ಹಣ ಕೊಟ್ಟಿದ್ದಾರಾ.?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • panstulavucky on ಬುಡುಬುಡಿಕೆ ಆಡಿಸುತ್ತಾ ಹಣ, ಒಡವೆ ದೋಚಿದ | Budbudike
    • kashpo napolnoe _eamn on ಡಿ.ಕೆ‌. ಸುರೇಶ್ ಕೆಎಂಎಫ್ ಅಧ್ಯಕ್ಷರಾಗುವುದು ಖಚಿತ.
    • kashpo napolnoe _rcmn on ಸರ್ಕಾರ ಬೀಳಿಸಲು ಬಿಜೆಪಿ ಯತ್ನಿಸುವುದಿಲ್ಲ.
    Latest Kannada News

    ಇವರಿಗೆಲ್ಲಾ ಅನ್ನಭಾಗ್ಯದ ಅಕ್ಕಿ ಸಿಗುವುದಿಲ್ಲ !

    September 1, 2025

    ಬಿಜೆಪಿ ಚಾಮುಂಡಿ ಯಾತ್ರೆ !

    September 1, 2025

    ಗಣೇಶ ಮೂರ್ತಿ ವಿಸರ್ಜನೆ ವೇಳೆ ಯಾಕೆ ಹೀಗಾಗುತ್ತಿದೆ !

    September 1, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    PORN ವೆಬ್ ಸೈಟ್ ನಲ್ಲಿ ಇಟಲಿ ಪ್ರಧಾನಿ ಅಸಭ್ಯ ಫೋಟೋ
    Subscribe