ಸೂರತ್(ಗುಜರಾತ್),ಆ.30- ಸಹ ಜೀವನ ನಡೆಸುತ್ತಿದ್ದ(ಲಿವ್ ಇನ್) ನಡೆಸುತ್ತಿದ್ದ ಯುವತಿಯು ಬಲವಂತವಾಗಿ ದನದ ಮಾಂಸ ತಿನ್ನಿಸಿದ್ದಕ್ಕೆ ಮನನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಕಳೆದು ಜೂನ್ 27ರಂದು ಘಟನೆ ನಡೆದಿದ್ದು, ನಗರ ಪೊಲೀಸರ ತನಿಖೆಯಲ್ಲಿ ಆತ್ಮಹತ್ಯೆಯ ಅಸಲಿಯತ್ತು ಬಯಲಾಗಿದೆ.
ರಾಹುಲ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ. ಸೂರತ್ನ ಉಧನಾದ ಪಟೇಲ್ ನಗರದ ಮನೆಯಲ್ಲಿ ಜೂನ್ 27ರಂದು ದುಪ್ಪಟ್ಟದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದರ ಬೆನ್ನಲ್ಲೇ ರಾಹುಲ್ ತಾಯಿ, ಲಿವ್ ಇನ್ ಟುಗೆದರ್ನಲ್ಲಿದ್ದ ಯುವತಿ ಮತ್ತು ಆಕೆಯ ಸಹೋದರನ ವಿರುದ್ಧ ದೂರು ದಾಖಲಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಸೋನಮ್ ಅಲಿ ಮತ್ತು ಆಕೆಯ ಸಹೋದರ ಮುಖ್ತರ್ ಅಲಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಅಂದಹಾಗೆ ರಾಹುಲ್ ಸಿಂಗ್ ತನ್ನ ಫೇಸ್ಬುಕ್ ಖಾತೆಯಲ್ಲಿ ಬರೆದಿಟ್ಟಿದ್ದ ಡೆತ್ನೋಟ್ ಇಡೀ ಪ್ರಕರಣಕ್ಕೆ ಮಹತ್ವದ ತಿರುವು ನೀಡಿತು.
ಇಬ್ಬರು ಅನ್ಯಧರ್ಮದರಾಗಿದ್ದರಿಂದ ಪಾಲಕರ ವಿರೋಧದ ನಡುವೆಯು ರಾಹುಲ್ ಮತ್ತು ಸೋನಮ್ ಕಳೆದ ಒಂದು ವರ್ಷದಿಂದ ಪಟೇಲ್ ನಗರದಲ್ಲಿ ಲಿವಿಂಗ್ ಟುಗೆದರ್ನಲ್ಲಿದ್ದರು. ರಾಹುಲ್ ಕುಟುಂಬ ಉತ್ತರ ಪ್ರದೇಶದ ಪ್ರತಾಪಗಢ ಮೂಲದವರು. ಬೇಡ ಎಂದು ಹೇಳಿದರು ಸೋನಮ್ ಜೊತೆ ಹೋಗಿದ್ದಕ್ಕೆ ರಾಹುಲ್ಗೆ ಕುಟುಂಬದ ಸಂಪರ್ಕ ಇರಲಿಲ್ಲ. ಇಬ್ಬರು ಮದುವೆ ಆಗಿರುವ ಬಗ್ಗೆಯು ಅವರಿಗೆ ತಿಳಿದಿಲ್ಲ.
ರಾಹುಲ್ ಕುಟುಂಬಕ್ಕೆ ಫೇಸ್ಬುಕ್ ಖಾತೆಯ ಮೂಲಕ ರಾಹುಲ್ ಸಾವಿನ ಬಗ್ಗೆ ತಿಳಿಯಿತು. ಅಲ್ಲದೆ, ಡೆತ್ನೋಟ್ ಕೂಡ ದೊರೆಯಿತು. ಇದರ ಬೆನ್ನಲ್ಲೇ ಉಧಾನ ಪೊಲೀಸ್ ಠಾಣೆಗೆ ತೆರಳಿದ ರಾಹುಲ್ ಕುಟುಂಬ ದೂರು ದಾಖಲಿಸಿದರು. ದನದ ಮಾಂಸ ತಿನ್ನದೇ ಹೋದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದರು ಎಂದು ಫೇಸ್ಬುಕ್ ಖಾತೆಯಲ್ಲಿ ಬರೆಯಲಾಗಿತ್ತು. ಕಿರುಕುಳವನ್ನು ಸಹಿಸಲಾರದೇ ಆತ್ಮಹತ್ಯೆ ಮಾಡಿಕೊಡಿಕೊಳ್ಳುತ್ತಿದ್ದೇನೆ ಎಂದು ರಾಹುಲ್ ಬರೆದಿದ್ದ ಎಂದು ಹೇಳಲಾಗಿದೆ.
Previous Articleಜಪಾನ್ ಸರ್ಕಾರಕ್ಕೆಕುಡಿಯದವರಿಂದ ತಲೆನೋವು
Next Article ಎಲ್ಲಿದೆ ನ್ಯಾಯ..ಕಾನೂನು ಹೇಗೆ ಪಾಲಿಸಲಾಗುತ್ತಿದೆ.?