ಸೇಲಂ(ತಮಿಳುನಾಡು),ಮೇ.21- ಯೂಟ್ಯೂಬ್ ಚಾನೆಲ್‌ಗಳನ್ನು ವೀಕ್ಷಿಸಿ ಬಂದೂಕು, ಗ್ರೆನೇಡ್ ಹಾಗು ಚಾಕು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿದ್ದ ಇಬ್ಬರು ಖತರ್ನಾಕ್ ಯುವಕರನ್ನು ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೇಲಂನ ಎರುಮಾಪಾಳ್ಯಂ ಪ್ರದೇಶದ ನವೀನ್ ಚಕ್ರವರ್ತಿ ಹಾಗು ಸಂಜಯ್ ಪ್ರತಾಪ್ ಬಂಧಿತ ಆರೋಪಿಗಳಾಗಿದ್ದಾರೆ.
ಓಮಲೂರು ಬಳಿಯ ಪುಲಿಯಂಪಟ್ಟಿಯಲ್ಲಿ ಓಮಲೂರು ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಸೇಲಂನಿಂದ ಬಂದ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.
ಆರೋಪಿಗಳ ಬ್ಯಾಗ್ ಅನ್ನು ಪರಿಶೀಲಿಸಿದಾಗ ಮಾರಕಾಸ್ತ್ರಗಳು, ದೊಡ್ಡ ಪಿಸ್ತೂಲ್, ತಯಾರಿಕ ಹಂತದಲ್ಲಿದ್ದ ದೊಡ್ಡ ಪಿಸ್ತೂಲ್, ಚಾಕು ಸೇರಿದಂತೆ ಇತರ ವಸ್ತುಗಳು ಇದ್ದವು. ತಕ್ಷಣ ಇಬ್ಬರನ್ನು ಬಂಧಿಸಿ ಹೆಚ್ಚಿನ ತನಿಖೆಗಾಗಿ ಠಾಣೆಗೆ ಕರೆದೊಯ್ದಿದ್ದಾರೆ.
ಹೆಚ್ಚಿನ ತನಿಖೆಯಿಂದ ಆರೋಪಿಗಳು ಯೂಟ್ಯೂಬ್ ಚಾನೆಲ್‌ಗಳನ್ನು ವೀಕ್ಷಿಸಿ ಬಂದೂಕು, ಗ್ರೆನೇಡ್ ಮತ್ತು ಚಾಕು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿದ್ದರು ಎಂದು ತಿಳಿದು ಬಂದಿದೆ. ಈ ಇಬ್ಬರ ವಿರುದ್ಧ ಶಸ್ತ್ರಾಸ್ತ್ರ ನಿಷೇಧ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಸೇಲಂ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.
Previous Articleಹೆಲ್ಮೆಟ್ ಹಾಕಿದ್ದರೂ ದಂಡ ಬೀಳಬಹುದು, ಹುಷಾರು!
Next Article ಅಶ್ವಿನ್ ‘ಯಶಸ್ವಿ’ ರಾಯಲ್ ಆಟಕ್ಕೆ ಸೋತ ಚೆನ್ನೈ