ಮುಂಬಯಿ: ಆರಂಭಕಾರ ಶಿಖರ್ ಧವನ್ ಅವರ ಭರ್ಜರಿ ಬ್ಯಾಟಿಂಗ್ ಬಲದಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 11 ರನ್‌ಗಳ ಅಂತರದಿಂದ ಮಣಿಸಿದೆ. ಸೋಮವಾರ ನಡೆದ ಟಾಟಾ ಐಪಿಎಲ್‌ನ 38ನೇ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಪಂಜಾಬ್ ತಂಡವನ್ನು ಬ್ಯಾಟ್ ಮಾಡಲು ಆಹ್ವಾನಿಸಿತು. ಶಿಖರ್ ಧವನ್ ಆಜೇಯ 88 ರನ್ (59 ಎಸೆತ, 9 ಬೌಂಡರಿ, 2 ಸಿಕ್ಸರ್) ಗಳಿಸಿದರು. ಭನುಕಾ ರಾಜಪಕ್ಸೆ (42 ರನ್, 32 ಎಸೆತ, 2 ಬೌಂಡರಿ, 2 ಸಿಕ್ಸರ್) ಹಾಗೂ ಕೊನೆ ಗಳಿಗೆಯಲ್ಲಿ ಲಿಯಮ್ ಲಿವಿಂಗ್‌ಸ್ಟೋನ್ 7 ಎಸೆತಗಳಲ್ಲಿ 19 ರನ್ ಗಳಿಸಿ ಪಂಜಾಬ್ ತಂಡವು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 187 ರನ್ ಪೇರಿಸಲು ನೆರವಾದರು. ಚೆನ್ನೈ ಪರ ಬ್ರಾವೋ 2, ತೀಕ್ಷ್ಣ 1 ವಿಕೆಟ್ ಸಂಪಾದಿಸಿದರು.
ಬೃಹತ್ ಗುರಿಯನ್ನು ಬೆನ್ನತ್ತಿದ ಚೆನ್ನೈ ಆರಂಭದಲ್ಲೇ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಋತುರಾಜ್ ಗಾಯಕ್ವಾಡ್ 30 ರನ್ ಗಳಿಸಿದರು. ಬಳಿಕ ಅಬ್ಬರಿಸಿದ ಅಂಬಾಟಿ ರಾಯುಡು 39 ಎಸೆತಗಳಲ್ಲಿ 78 ರನ್ (7 ಬೌಂಡರಿ, 6 ಸಿಕ್ಸರ್) ಗೆಲುವಿನ ನಿರೀಕ್ಷೆ ಮೂಡಿಸಿದರು. ಆದರೆ, ರಬಾಡಾ ಎಸೆದ ಯಾರ್ಕರ್‌ಗೆ ಬೌಲ್ಡ್ ಆಗಿ ನಿರ್ಗಮಿಸಿದರು. ಧೋನಿ-ಜಡೇಜಾ ಮ್ಯಾಜಿಕ್ ಕೂಡ ನಡೆಯಲಿಲ್ಲ. ಅಂತಿಮವಾಗಿ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಲಷ್ಟೇ ಚೆನ್ನೆ ಶಕ್ತವಾಗಿ, ತನ್ನ ಪ್ಲೇಆಫ್ ಕನಸನ್ನು ಮತ್ತಷ್ಟು ಮಸುಕಾಗಿಸಿಕೊಂಡಿತು. ರಬಾಡಾ, ರಿಷಿ ಧವನ್ ತಲಾ 2 ವಿಕೆಟ್ ಕಿತ್ತರು. ಆರ್ಷದೀಪ್ ಸಿಂಗ್ 4 ಓವರ್‌ಗಳಲ್ಲಿ ಕೇವಲ 23 ರನ್ ನೀಡಿ ಮಿಂಚಿದರು. ಧವನ್ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು.
ಮಂಗಳವಾರ ಆರ್‌ಸಿಬಿಯ ಮುಖಾಮುಖಿ ರಾಜಸ್ಥಾನ್ ರಾಯಲ್ಸ್ ಜತೆಗೆ ಆಗಲಿದೆ.