ಭಾರತೀಯ ಚಿತ್ರಂಗದಲ್ಲೇ ಬಹುನಿರೀಕ್ಷೆ ಮೂಡಿಸಿದ್ದ ರಾಂಕಿಂಗ್ ಸ್ಟಾರ್ಯಶ್ ಅಭಿನಯದ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾ ಬಿಡುಗಡೆಯಾಗಿದ್ದು ರಾಕಿ ಬಾಯ್ ಅಭಿನಯಕ್ಕೆ ಅಭಿಮಾನಿಗಳು ಪುಲ್ ಫಿದಾ ಆಗಿದ್ದಾರೆ.
ಪ್ರಶಾಂತ್ ನೀಲ್ ಅವರ ನಿರ್ದೇಶನದ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾ ವಿಶ್ವದಾದ್ಯಂತ ಸುಮಾರು 10 ಸಾವಿರಕ್ಕೂ ಹೆಚ್ಚು ಪರದೆಗಳಲ್ಲಿ ತೆರೆಕಂಡಿದ್ದು ಎಲ್ಲೆಡೆ ಭರ್ಜರಿ ಒಪನಿಂಗ್ ಪಡೆದುಕೊಂಡಿದೆ.
ರಾಕಿಂಗ್ ಸ್ಟಾರ್ ಯಶ್ ಜೊತೆ, ಸಂಜಯ್ ದತ್, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಪ್ರಕಾಶ್ ರೈ ಚಿತ್ರದಲ್ಲಿ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ. ರವಿ ಬಸ್ರೂರು ಸಂಗೀತವಿದ್ದು ಅಭಿಮಾನಿಗಳು ಹರ್ಷದ ಹೊಳೆ ಹರಿಸಿದ್ದಾರೆ.
ಭಾರತೀಯ ಸಿನಿಮಾ ರಂಗದಲ್ಲೇ ಈ ಸಿನಿಮಾ ಹೊಸ ದಾಖಲೆ ಸೃಷ್ಟಿಸಿದ್ದು, ಗುಜರಾತ್ ನಲ್ಲಿ ಮೊಟ್ಟ ಮೊದಲ ಬಾರಿಗೆ ಬೆಳಿಗ್ಗೆ ಆರು ಗಂಟೆಗೆ ಪ್ರದರ್ಶನ ಕಂಡಿದೆ.
ಹಲವೆಡೆ ಇಂದು ಮುಂಜಾನೆ ನಾಲ್ಕು ಗಂಟೆಗೆ ಚಿತ್ರ ಪ್ರದರ್ಶನ ಆರಂಭವಾಗಿದೆ. ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳು ಬೆಳಗ್ಗೆಯೇ ಚಿತ್ರ ನೋಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ