ಬೆಳಗಾವಿ,ಡಿ.19:
Bengaluru ನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ 24, ಬಾಂಗ್ಲಾ ದೇಶದ 159 ಜನರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ವಿಧಾನಪರಿಷತ್ತಿಗೆ ಮಾಹಿತಿ ನೀಡಿದ್ದಾರೆ
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಡಿ.ಎಸ್.ಅರುಣ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು
ಶೈಕ್ಷಣಿಕ ಪ್ರವಾಸ ಮತ್ತು ಉದ್ಯೋಗ ಅರಸಿ ಬರುವ ಅಕ್ರಮ ವಲಸಿಗರು ಏಜೆಂಟ್ ಗಳ ಮೂಲಕ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಪಡೆದು ಇಲ್ಲಿಯೇ ನೆಲೆಯೂರಿದ್ದಾರೆ. ಹಾಗಾಗಿ, ಇವರನ್ನು ಪತ್ತೆ ಹಚ್ಚಿ ವಾಪಸ್ ಕಳಿಸುವುದು ನಿರಂತರ ಪ್ರಕ್ರಿಯೆಯಾಗಿದೆ ಎಂದು ತಿಳಿಸಿದರು
ಬೆಂಗಳೂರು ನಗರ ಮತ್ತು ವಿವಿಧ ಜಿಲ್ಲೆಗಳಲ್ಲಿ ನಕಲಿ ದಾಖಲೆಗಳ ಮೂಲಕ 115 ಜನ ಅನಧಿಕೃತವಾಗಿ ಪಾಕಿಸ್ತಾನ ಮತ್ತು ಬಾಂಗ್ಲಾ ದೇಶದವರು ವಾಸವಿದ್ದಾರೆ. ಬೆಂಗಳೂರು ನಗರದಲ್ಲಿ 93 ಜನರು, ಮಂಗಳೂರು ನಗರದಲ್ಲಿ ಓರ್ವ, ಬೆಂಗಳೂರು ಜಿಲ್ಲೆಯಲ್ಲಿ ಇಬ್ಬರು, ಚಿತ್ರದುರ್ಗದಲ್ಲಿ 06, ಹಾಸನದಲ್ಲಿ ಮೂವರು ಹಾಗೂ ಉಡುಪಿಯಲ್ಲಿ 10 ಮಂದಿ ಅಕ್ರಮವಾಗಿ ವಾಸವಿದ್ದರು ಎಂದು ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿ ಈ ಬಗ್ಗೆ ನಗರ ವಿಶೇಷ ಘಟಕವಿದ್ದು, ನಗರಕ್ಕೆ ಪ್ರವೇಶಿಸುವ ಯಾವುದೇ ವಿದೇಶಿಯರ ಬಗ್ಗೆ ಪೊಲೀಸ್ ಠಾಣೆಗಳ ಮೂಲಕ ಬೆಂಗಳೂರಿನ ಎಫ್ಆರ್ ಆರ್ ಒ ಅವರಿಂದ ಮಾಹಿತಿ ಪಡೆದು, ಪ್ರತಿ ವಿಭಾಗೀಯ ಡಿಸಿಪಿಗಳ ಮುಖಾಂತರ ವಿಶೇಷ ಕಾರ್ಯಾಚರಣೆ ಮಾಡಲಾಗುತ್ತಿದೆ. ಅಲ್ಲದೇ ಸಿಸಿಬಿ ಸಂಘಟಿತ ಅಪರಾಧ ದಳವೂ ಕೂಡ ಕಾರ್ಯಾಚರಣೆ ನಡೆಸುತ್ತಿರುತ್ತದೆ. ಇತರ ನಗರ, ಜಿಲ್ಲೆಗಳಲ್ಲಿ ಅನಧಿಕೃತವಾಗಿ ಪ್ರವೇಶಿಸುವ ವಿದೇಶಿಯರ ಪತ್ತೆ ಹಚ್ಚಲು ಸ್ಪೇಷಲ್ ಟಾಸ್ಕ್ ಫೋರ್ಸ್ ರಚಿಸಲಾಗಿದೆ ಎಂದು ತಿಳಿಸಿದರು.
Previous Articleಮನೆ ಭೋಗ್ಯಕ್ಕಿದೆ ಎಂದು ಪಂಗನಾಮ ಹಾಕಿದ.
Next Article ನಾಲಿಗೆ ಹರಿಬಿಟ್ಟು ಸಂಕಷ್ಟಕ್ಕೆ ಸಿಲುಕಿದ ಸಿ.ಟಿ.ರವಿ.