ಡಾಲರ್ ಏರುತ್ತಾ ಇದೆ ರೂಪಾಯಿ ಮೌಲ್ಯ ಕುಸಿಯುತ್ತಿದೆ ಎಂದು ಕೇಳಿದ್ದೀರಿ. ಹೌದು. ಆದರೆ ಇದರಿಂದ ಯಾರಿಗೆ ನಷ್ಟ ಯಾರಿಗೆ ಲಾಭ? ನಿಜ ಕೆಲವರಿಗೆ ಲಾಭವೂ ಇದೆ. ಕೆಲವರು ಎಂದರೆ ಷೇರು ಮಾರುಕಟ್ಟೆಯಲ್ಲಿ ಐಟಿ ಮತ್ತು ಔಷಧ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡಿದಾರರಿಗೆ ಲಾಭವಿದೆ. ವಿದೇಶದಿಂದ ಹಣ ಸ್ವೀಕರಿಸುವವರಿಗೆ ಲಾಭವಿದೆ. ಮತ್ತು ದೊಡ್ಡ ಮಟ್ಟದಲ್ಲಿ ರಫ್ತು ಮಾಡುವವರಿಗೆ ಲಾಭವಿದೆ.ಹಾಗಾದರೆ ನಷ್ಟ ಯಾರಿಗೆ?
ಭಾರತ ಬಹಳ ದೊಡ್ಡ ಮಟ್ಟದಲ್ಲಿ ಡಾಲರ್ ಬಳಸಿ ಆಮದು ಅಥವಾ ಇಂಪೋರ್ಟ್ ಮಾಡಿಕೊಳ್ಳುತ್ತದೆ. ಆ ಇಂಪೋರ್ಟ್ ಗಳ ಪೈಕಿ ಮುಖ್ಯವಾದುವು ಕಚ್ಚಾ ತೈಲ, ಭಾರೀ ಯಂತ್ರಗಳು, ಎಲೆಕ್ಟ್ರಿಕಲ್ ಉಪಕರಣಗಳು, ರತ್ನ ಮತ್ತು ಹರಳುಗಳು, ಚಿನ್ನ ಬೆಳ್ಳಿ ಇತರ ಮೌಲ್ಯಯುತ ಲೋಹಗಳು, ಕೆಮಿಕಲ್ ಗಳು ಪ್ಲಾಸ್ಟಿಕ್ ವಸ್ತುಗಳು ಕಬ್ಬಿಣ ಮತ್ತು ಸ್ಟೀಲ್, ಮೇಲ್ದರ್ಜೆಯ ಕಂಪ್ಯೂಟರ್ಗಳು, ವಿಶೇಷ ಯಂತ್ರಗಳು ಇತ್ಯಾದಿ. ಈ ಎಲ್ಲಾ ವಸ್ತುಗಳಿಂದ ಸಾಮಾನ್ಯ ಜನ ಬಳಸುವ ವಸ್ತುಗಳು ತಯಾರಾಗುವುದರಿಂದ ಅವುಗಳ ಬೆಲೆ ಏರಿಕೆಯಾಗಿ ಭಾರತದ ಆರ್ಥಿಕತೆಯ ಮೇಲೆ ತೀವ್ರತರದ ಪೆಟ್ಟು ಬೀಳುತ್ತದೆ. ಆದ್ದರಿಂದ ಈ ರೂಪಾಯಿ ಮೌಲ್ಯ ಕುಸಿತದಿಂದ ಹೆಚ್ಚು ಏಟು ಬೀಳುವುದು ಸಾಮನ್ಯ ಜನರ ಮೇಲೆಯೇ ಹೊರತು ಶ್ರೀಮಂತರ ಮೇಲಲ್ಲ
Previous Articleಮೋದಿ ಭಕ್ತ ಚಿರಂಜೀವಿ?
Next Article 99 ರೂಪಾಯಿ ಸಾಲಕ್ಕೆ 58 ಸಾವಿರ ಕೊಡಬೇಕಂತೆ.?