ಮೈಸೂರಿನಿಂದ ಧಾರವಾಡಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡು ಪ್ರಯಾಣಿಕರು ಕೂದಲೆಳೆಯ ಅಂತರದಲ್ಲಿ ಪಾರಾಗಿರುವ ಘಟನೆ ಕೆ.ಆರ್. ಪೇಟೆ ತಾಲೂಕಿನ ಮಂದಗೆರೆ ರೈಲ್ವೆ ನಿಲ್ದಾಣದ ಸಮೀಪ ನಡೆದಿದೆ.ಮೈಸೂರಿನಿಂದ ರಾತ್ರಿ 10-30 ಕ್ಕೆ ಹೊರಟು ಧಾರವಾಡಕ್ಕೆ ಹೊರಟ್ಟಿದ್ದ ಈ ರೈಲು ಮದ್ಯರಾತ್ರಿ 12 ಗಂಟೆಗೆ ಮಂದಗೆರೆ ಸಮೀಪ ಬರುತ್ತಿದ್ದಂತೆ 3 ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.ತಕ್ಷಣವೇ ಪ್ರಯಾಣಿಕರು ರೈಲಿನಲ್ಲಿ ತುರ್ತು ನಿಲುಗಡೆಯ ಚೈನ್ ಎಳೆದು ರೈಲು ನಿಲ್ಲಿಸಿ ಕತ್ತಲಿನಲ್ಲಿಯೇ ಬೋಗಿಯಿಂದ ಇಳಿದಿದ್ದಾರೆ. ಇಳಿಯುವ ವೇಳೆ ಕೆಲವರಿಗೆ ಸಣ್ಣಪುಟ್ಟಗಾಯವಾಗಿದೆ.ಎಲ್ಲರು ಮಲಗಿದ್ದ ವೇಳೆ ಇಲ್ಲ ರೈಲು ವೇಗವಾಗಿ ಹೋಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದ್ರೆ ಭಾರೀ ಅನಾಹುತ ಆಗುತ್ತಿದ್ದು, ಕೂದಲೆಳೆಯ ಅಂತರದಲ್ಲಿ ಪ್ರಯಾಣಿಕರು ಪಾರಾಗಿದ್ದಾರೆ. ಸುದ್ದಿ ತಿಳಿ ದು ಸ್ಥಳಕ್ಕೆ ಬಂದ ರೈಲ್ವೆ ಪೊಲೀಸರು ಪರಿಸ್ಥಿತಿ ನಿಭಾಯಿಸಿದ್ರೆ ಅಗ್ನಿಶಾಮಕದಳದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ.ಘಟನೆಯಿಂದ ಕೆಲಕಾಲ ಆತಂಕದ ವಾತವಾರಣ ನಿರ್ಮಾಣವಾಗಿತ್ತು.ಅಲ್ದೆ ಎರಡು ಗಂಟೆಗಳ ಕಾಲ ಆ ಮಾರ್ಗದಲ್ಲಿ ರೈಲು ವಿಳಂಬವಾಗಿತ್ತು. ಅಗ್ನಿಶಾಮಕ ದಳದ ಕಾರ್ಯಾಚರಣೆ ಬಳಿಕ ರೈಲು ಮುಂದೆ ಹೊರಟಿತು.
ರೈಲಿನಲ್ಲಿ ಕಾಣಿಸಿಕೊಂಡ ಬೆಂಕಿ: ಕೂದಲೆಳೆಯಲ್ಲಿ ಪಾರಾದ ಪ್ರಯಾಣಿಕರು
Previous Articleಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೆ ಧೋನಿ ಸಾರಥ್ಯ
Next Article ಗೃಹಮಂತ್ರಿ ರಾಜೀನಾಮೆ ಕೊಡಲಿ…