ಕೋಲಾರ: ಕಳೆದೆರಡು ದಿನಗಳ ಹಿಂದೆಯಷ್ಟೇ ಬಿಜೆಪಿಗೆ ಸೇರ್ಪಡೆಗೊಂಡ ಮಾಜಿ ಶಾಸಕ ವರ್ತೂರು ಪ್ರಕಾಶ್ ವಿರುದ್ದ ಕಾಂಗ್ರೆಸ್ ಹಾಗೂ ಜೆ ಡಿ ಎಸ್ ನ ಮುಖಂಡರು ನಿರಂತರ ವಾಗ್ಧಾಳಿ ಮುಂದುವರೆಸಿದ್ದಾರೆ.
ನೆನ್ನೆಯಷ್ಟೇ ಜೆಡಿಎಸ್ ಎಂ ಎಲ್ ಸಿ ಇಂಚರ ಗೋವಿಂದರಾಜು ವರ್ತೂರು ಪ್ರಕಾಶ್ ರನ್ನ ತರಾಟೆಗೆ ತೆಗೆದುಕೊಂಡ ಬೆನ್ನ ಹಿಂದೆಯೇ ಇಂದು ಕಾಂಗ್ರಸ್ ನ ಟೀಕೇಟು ಆಕಾಂಕ್ಷಿ ಅರಕೆರೆ ಮಂಜುನಾಥ ಗೌಡರೂ ವರ್ತೂರು ವಿರುದ್ಧ ವಾಗ್ಧಾಳಿ ಮುಂದುವರೆಸಿದ್ದಾರೆ.
ಸುದ್ದಿಗೋಪ್ಠಿಯಲ್ಲಿ ನಡೆಸಿದ ಮಂಜುನಾಥಗೌಡ ವರ್ತೂರು ಪ್ರಕಾಶ್ ನೀವು ಒಕ್ಕಲಿಗರನ್ನ ಟಾರ್ಗೆಟ್ ಮಾಡುವುದು ಬಿಡಿ ನೀವು ಬಿಜೆಪಿ ಯಲ್ಲಿ ಯಾವುದೇ ಕಾರಣಕ್ಕೂ ಗೆಲ್ಲಲು ಸಾಧ್ಯವಿಲ್ಲ, ಕಾರಣ ನಿಮ್ಮ ನಾಲಿಗೆ ವ್ಯಕ್ತಿತ್ವ ಎರಡೂ ಶುದ್ದವಾಗಿಲ್ಲವೆಂದು ನೇರ ವಾಗ್ಧಾಳಿ ನಡೆಸಿದ್ದಾರೆ.
ಅಲ್ಲದೇ ನೀವು ಗೆದ್ದದ್ದೇ ಸಿದ್ಧರಾಮಯ್ಯ ಹಾಗು ಕೆ ಎಚ್ ಮುನಿಯಪ್ಪನವರ ಹೆಸರಿನಿಂದ ನಿಮ್ಮಿಂದ ಕುರುಬ ಜನಾಂಗದ ಕೊಡುಗೆ ಶೂನ್ಯ. ಮತ್ತೆ ಮತ್ತೆ ವಿನಾಕಾರಣ ನೀವು ನನ್ನ ಬಗ್ಗೆಯಾಗಲೀ ಒಕ್ಕಲಿಗ ಜನಾಂಗದ ಬಗ್ಗೆಯಾಗಲೀ ಮಾತನಾಡಿದರೆ ನಿಮ್ಮನ್ನ ಸೋಲಿಸುವುದೇ ನನ್ನ ಮುಖ್ಯ ಗುರಿಯಾದೀತೆಂದು ಅರಕೆರೆ ಮಂಜುನಾಥ ಗೌಡ ನೇರವಾಗಿ ವರ್ತೂರು ಪ್ರಕಾಶ್ ಗೆ ಸವಾಲೆಸೆದಿದ್ದಾರೆ.