ಹುಬ್ಬಳ್ಳಿ: ರಾಜ್ಯದಲ್ಲಿ ವಿದ್ಯುತ್ ಅಭಾವ ಬಗ್ಗೆ ಎದ್ದಿರುವ ಗೊಂದಲಗಳ ಬಗ್ಗೆ ಇಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸ್ಪಷ್ಟನೆ ನೀಡಿದರು.
ಥರ್ಮಲ್ ಪವರ್ ಪ್ಲಾಂಟ್ ನಲ್ಲಿ 21.55 ಮಿಲಿಯನ್ ಟನ್ ಸರಾಸರಿ ನಮ್ಮಲ್ಲಿ ವಿದ್ಯುತ್ ಸ್ಟಾಕ್ ಇದೆ. ಕೋಲ್ ಕಂಪನಿಗಳಲ್ಲಿ 72.5 ಮಿಲಿಯನ್ ಸ್ಟಾಕ್ ಇದೆ. ಅತಿ ಹೆಚ್ಚು ವಿದ್ಯುತ್ ಬೇಡಿಕೆ ಈ ತಿಂಗಳಲ್ಲಿ ನಿರ್ಮಾಣವಾಗಿದೆ. ದೇಶದಲ್ಲಿ ಆರ್ಥಿಕತೆ ಉತ್ತಮವಾಗಿದ್ದು ಸಹ ಇದಕ್ಕೊಂದು ಕಾರಣವಾಗಿದೆ. ಈ ಬಾರಿ ಭಯಂಕರ ಬಿಸಿಲು ಬಂದಿದ್ದು ಇದಕ್ಕೊಂದು ಕಾರಣ. ಆದರೆ ಇನ್ನೇನು 10 ದಿನಕ್ಕೆ ಕತ್ತಲೆ ಆವರಿಸುತ್ತೆ ಅನ್ನೋದನ್ನ ಕೆಲವರು ಬಿಂಬಿಸುತ್ತಿದ್ದಾರೆ.ಅದು ಸರಿಯಲ್ಲ. ನಾವು ಪ್ರತಿ ದಿನ 1.7ಮಿಲಿಯನ್ ಟನ್ ಕಲ್ಲಿದ್ದಲು ಸಪ್ಪೆ ಮಾಡುತ್ತಿದ್ದೇವೆ. ಬೇಡಿಕೆ ಹೆಚ್ಚಾಗಿ ಬಂದಿದ್ದರಿಂದ ಸಾಗಣೆ ಮಾಡಲು ರೈಲ್ವೆ ಇಲಾಖೆ ಹಲವು ಕ್ರಮ ಕೈಗೊಂಡಿದೆ. ಯಾರು ಗಾಬರಿಯಾಗುವ ಅವಶ್ಯಕತೆ ಇಲ್ಲ ಎನ್ನುವುದನ್ನು ಸ್ಪಷ್ಟ ಪಡಿಸುತ್ತೇನೆ. ನಿತ್ಯವೂ ಸಹ ನಾವು ವಿದ್ಯುತ್ ಸಪ್ಪೆ ಮಾಡುತ್ತಿದ್ದೇವೆ. ಎಷ್ಟು ಖಾಲಿಯಾಗುತ್ತದೆಯೋ ಅಷ್ಟು ನಾವು ತುಂಬುತ್ತಿದ್ದೇವೆ. ಈಗಾಗಲೇ ಬೇಕಾದಷ್ಟು ವಿದ್ಯುತ್ ಸ್ಟಾಕ್ ಇದೆ. ಗಾಬರಿ ಪಡುವ ಅವಶ್ಯಕತೆ ಇಲ್ಲ ಎಂದು ಹುಬ್ಬಳ್ಳಿಯಲ್ಲಿ ಸಚಿವ ಜೋಷಿ ಸ್ಪಷ್ಟಪಡಿಸಿದರು.