ಇಕ್ವೆಡಾರ್ : ಮೂಕಪ್ರಾಣಿಗಳು ಸದಾ ಪ್ರೀತಿಗಾಗಿ ಹಂಬಲಿಸುತ್ತವೆ. ಅವುಗಳಿಗೆ ಮಾತನಾಡಲು ಬರದೇ ಇದ್ದರೂ ತಮ್ಮ ಪ್ರೀತಿಯನ್ನು ಅಭಿವ್ಯಕ್ತಿಸುವುದರಲ್ಲಿ ಅವುಗಳು ಎಂದಿಗೂ ಹಿಂದುಳಿಯುವುದಿಲ್ಲ. ಹಾಗೇ ಮನುಷ್ಯರಲ್ಲೂ ನಾಯಿಗಳನ್ನು ಮಕ್ಕಳಂತೆ ಪ್ರೀತಿಸುವವರು ಕೂಡ ಇದ್ದಾರೆ. ಈಕ್ವೆಡಾರ್‌ನ ಕಟ್ಟಡ ಕಾರ್ಮಿಕರೊಬ್ಬರು ಅಗೆಯುವ ಯಂತ್ರದ ಸಹಾಯದಿಂದ ನಾಯಿಯನ್ನು ಕಾಲುವೆಯಿಂದ ರಕ್ಷಿಸುವ ಮೂಲಕ ಮಾನವೀಯತೆಗೆ ಮಾದರಿಯಾಗಿದ್ದಾರೆ. ವೈರಲ್ ಆಗಿರುವ ಈ ವಿಡಿಯೋ ಇಂಟರ್ನೆಟ್ ಬಳಕೆದಾರರ ಹೃದಯವನ್ನು ಕಲಕಿದೆ. ಜಾಣತನದಿಂದ ಕಟ್ಟಡ ಕಾರ್ಮಿಕನು ನಾಯಿಯನ್ನು ಮೇಲೆತ್ತಿ ಕಾಪಾಡಿರುವ ಈ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಈ ವಿಡಿಯೋಗೆ ಈಗಾಗಲೇ ಲಕ್ಷಾಂತರ ವ್ಯೂ ಸಿಕ್ಕಿದೆ. ಇಂಟರ್ನೆಟ್ ಬಳಕೆದಾರರು ಆ ಕಾರ್ಮಿಕನ ಧೈರ್ಯ ಮತ್ತು ಮಾನವೀಯತೆಯನ್ನು ಶ್ಲಾಘಿಸಿದ್ದಾರೆ. ಈ ವಿಡಿಯೋ ಸಾಕಷ್ಟು ಶೇರ್ ಕೂಡ ಆಗಿದೆ