ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಅವರ ಸಿನಿಮಾ ತೆರೆ ಮೇಲೆ ಬಂದು ಸುಮಾರು ನಾಲ್ಕು ವರ್ಷಗಳಾಗಿದೆ ಕಿಂಗ ಖಾನ್ ಸುದೀರ್ಘ ಅವಧಿಯ ನಂತರ ಪಠಾಣ್ ಮೂಲಕ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.ಈ ಆ್ಯಕ್ಷನ್, ಥ್ರಿಲ್ಲರ್ ಚಿತ್ರದಲ್ಲಿ ಜಾನ್ ಅಬ್ರಹಾಂ ಕೂಡ ನಟಿಸಿದ್ದಾರೆ. ಮತ್ತು ಇದನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದಾರೆ.ಸಿನಿಮಾ ಜನವರಿ 25, ರಂದು
ಬಿಡುಗಡೆಯಾಗುತ್ತಿದೆ.
ಈ ಸಿನಿಮಾ ಇದೀಗ ವಿವಾದಕ್ಕೆ ಕಾರಣವಾಗಿದೆ ಅಷ್ಟೇ ಅಲ್ಲ ಬ್ಯಾನ್ ನ ಬೆದರಿಕೆ ಎದುರಿಸುತ್ತಿದೆ ಇದಕ್ಕೆ ಕಾರಣ ಎನು ಅಂತಾ ತಿಳಿಯಬೇಕಾದರೆ ಈ ಸ್ಟೋರಿನಾ ನೋಡಿ ಅದಕ್ಕಿಂತ ಮೊದಲು ನಮ್ಮ ಚಾನಲ್ ಸಬ್ ಸ್ಕ್ರೈಬ್ ಮಾಡೋದನ್ನು ಮರೀಬೇಡಿ.
ಶಾರುಕ್ ಖಾನ್ ಬಹುನಿರೀಕ್ಷಿತ ಪಠಾಣ್ ಸಿನಿಮಾದ ‘ಬೇಷರಮ್ ರಂಗ್’ ವಿಡಿಯೊ ಹಾಡು ಕಳೆದ ಸೋಮವಾರ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಇದರಲ್ಲಿ ದೀಪಿಕಾ ಪಡುಕೋಣೆ ಅವರು ಹಾಟ್ ಆಗಿ ಕಾಣಿಸಿಕೊಂಡು ಶಾರುಕ್ ಜೊತೆ ಸೊಂಟ ಬಳುಕಿಸುತ್ತಾ ಹೆಜ್ಜೆ ಹಾಕಿದ್ದಾರೆ.
ಈ ಹಾಡಿನಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ಹಾಕಿಕೊಂಡು ಕುಣಿದಿದ್ದಾರೆ. ಈ ಸನ್ನಿವೇಶ ಹಾಗೂ ಹಾಡಿಗೆ ಬೇಷರಮ್ ರಂಗ್ ಎಂದು ಹೆಸರಿಟ್ಟಿರುವುದು ಕೆಲವರನ್ನು ಕೆರಳಿಸಿದೆ. ‘ಹಿಂದೂ ಭಗವಾ ಧ್ವಜದ ಸಂಕೇತವಾದ ಕೇಸರಿ ಬಣ್ಣದ ಬಿಕಿನಿ ಧರಿಸಿ ಅದಕ್ಕೆ ಬೇಷರಮ್ ರಂಗ್ ಎಂದು ಹೆಸರಿಟ್ಟಿರುವುದು ಸರಿಯಲ್ಲ. ಈ ಚಿತ್ರವನ್ನು ಬಾಯ್ಕಾಟ್ ಮಾಡಬೇಕು’ ಎಂದು ಟ್ವಿಟರ್‌ನಲ್ಲಿ ಕೆಲವರು ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ.
ಇದಿಷ್ಟಕ್ಕೆ ನಿಂತಿಲ್ಲ ಈ ವಿವಾದದ ಬಗ್ಗೆ ಮಾತನಾಡಿರುವ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು, ‘ಶಾರುಕ್ ಖಾನ್ ಅವರ ಪಠಾಣ್ ಹಾಡಿನಲ್ಲಿ ಕೇಸರಿ ಬಣ್ಣಕ್ಕೆ ಬೇಷರಮ್ ರಂಗ್ ಎಂದು ವಿಡಂಬನೆ ಮಾಡಿದ್ದಾರೆ. ಇದು ತೀವ್ರ ಖಂಡನಾರ್ಹ. ದೃಶ್ಯಕ್ಕೆ ತಕ್ಷಣವೇ ಕತ್ತರಿ ಹಾಕಬೇಕು ಇಲ್ಲವಾದರೇ ಚಿತ್ರವನ್ನು ಮಧ್ಯಪ್ರದೇಶದಲ್ಲಿ ಪ್ರದರ್ಶನಗೊಳ್ಳಲು ಬಿಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ.ಈ ಹೇಳಿಕೆ ಇದೀಗ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.
Previous Articleಭಕ್ತರು ಹೋಗುವ ದಾರಿಗೆ ಮೊಳೆ ಹೊಡೆದ ಕೇಡಿಗಳು
Next Article Accident ಮರೆಮಾಚಲು ಕಲ್ಲುತೂರಾಟದ ಕಥೆ ಕಟ್ಟಿದ ಚಾಲಕ