ಬೆಂಗಳೂರು,ಮಾ.27:
ರಾಜ್ಯ ರಾಜಕಾರಣದಲ್ಲಿ ಹನಿ ಟ್ರ್ಯಾಪ್ ಪ್ರಕರಣ ಕೋಲಾಹಲ ಸೃಷ್ಟಿಸಿರುವ ಬೆನ್ನಲ್ಲೇ ಸಹಕಾರ ಮಂತ್ರಿ ಕೆ ಎನ್ ರಾಜಣ್ಣ ಅವರ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ತಮ್ಮ ಹತ್ಯೆಗೆ ಸುಪಾರಿ ನೀಡಲಾಗಿದೆ ಎಂದು ಆಪಾದಿಸಿದ್ದಾರೆ.
ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ಆಗಮಿಸಿದ ಅವರು ಐಜಿಪಿ ಅಲೋಕ್ ಮೋಹನ್ ಅವರನ್ನು ಮಧ್ಯಾಹ್ನ ಭೇಟಿ ಮಾಡಿ 15 ನಿಮಿಷಕ್ಕೂ ಹೆಚ್ಚು ಕಾಲ ಚರ್ಚೆ ನಡೆಸಿದರು.
ಕೇವಲ ತಮ್ಮ ತಂದೆ ಮಾತ್ರವಲ್ಲ ತಮ್ಮನ್ನು ಕೂಡ ಹನಿ ಟ್ರ್ಯಾಪ್ ಜಾಲದಲ್ಲಿ ಸಿಲುಕಿಸಲು ಪ್ರಯತ್ನ ನಡೆಸಿದ್ದಾರೆ ಎಂದು ಹೇಳಿ ಕೆಲವು ದಾಖಲೆಗಳನ್ನು ನೀಡಿದ್ದಾರೆ ಇದರ ಜೊತೆಗೆ ತಮ್ಮ ಹತ್ಯೆಗೆ ಸುಫಾರಿ ನೀಡಲಾಗಿದೆ ಎಂಬ ಅಂಶವನ್ನು ತಿಳಿಸಿ ಅದಕ್ಕೆ ಸಂಬಂಧಪಟ್ಟಂತೆ ಕೆಲವು ದಾಖಲೆಗಳನ್ನು ನೀಡಿದ್ದಾರೆ
ದೂರು ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಮ್ಮ ತಂದೆ ಹಾಗೂ ಸಚಿವ ರಾಜಣ್ಣ ಅವರನ್ನು ಮಾತ್ರವಲ್ಲ ನನಗೆ ಹನಿಟ್ರ್ಯಾಪ್ ನಡೆಸಲು ಕಳೆದ ಮೂರು ತಿಂಗಳಿನಿಂದ ಯತ್ನ ನಡೆದಿದೆ.
ನನ್ನನ್ನು ಈ ಜಾಲದಲ್ಲಿ ಕೆಡವಲು ಮಧುಗಿರಿಯಲ್ಲಿರುವ ನಮ್ಮ ಮನೆಗೆ ಬಂದಿದ್ದರು. ಯಾವ ಕಾರಣಕ್ಕಾಗಿ ನನಗೆ ಹನಿಟ್ರ್ಯಾಪ್ ಯತ್ನ ಮಾಡಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಡಿಜಿಪಿ ಅವರ ಬಳಿ ಮಾಹಿತಿ ಹಂಚಿಕೊಂಡಿರುವುದಾಗಿ ತಿಳಿಸಿದರು.
ಕೇವಲ ಹನಿ ಟ್ರಾಪ್ ಮಾತ್ರವಲ್ಲ ನನ್ನ ಹತ್ಯೆಗೂ ಕೂಡ ಸಂಚು ನಡೆದಿದೆ ನನ್ನನ್ನು ಮುಗಿಸಲು ಹಂತಕರಿಗೆ ಸುಪಾರಿ ನೀಡಲಾಗಿದೆ ಇದಕ್ಕಾಗಿ
ಸೋಮ, ಭರತ್ ಎಂಬ ಇಬ್ಬರ ಹೆಸರನ್ನು ಉಲ್ಲೇಖ ಮಾಡಿದರು.
ಕಳೆದ ನವೆಂಬರ್ 16ರಂದು ಮಗಳ ಹುಟ್ಟುಹಬ್ಬದ ದಿನ ಶಾಮಿಯಾನ ಹಾಕೋಕೆ ಸ್ವಲ್ಪ ಜನ ಬಂದಿದ್ರು. ಆ ಸಂದರ್ಭದಲ್ಲಿ ಸೋಮ, ಭರತ್ ಹತ್ಯೆ ಮಾಡಲು ಪ್ರಯತ್ನ ಮಾಡಿದ್ದರು. ನನ್ನ ಆಪ್ತರ ಮೂಲಕ ನನಗೆ ಈ ಮಾಹಿತಿ ಗೊತ್ತಾಯಿತು ಅದಾದ ನಂತರ ನಾನು ಎಚ್ಚರಗೊಂಡಿದ್ದೇನೆ ಎಂದು ತಿಳಿಸಿದರು.
ಕಳೆದ ಜನವರಿಯಲ್ಲಿ ನನ್ನ ನನಗೆ ಆಪ್ತರು ಆಡಿಯೋ ಒಂದನ್ನು ನೀಡಿದ್ದಾರೆ. ಅದರಲ್ಲಿ ಮೂವರು ನನ್ನ ಹತ್ಯೆಗೆ ಸುಪಾರಿ ನೀಡುವ ಬಗ್ಗೆ ಮಾತನಾಡಿದ್ದಾರೆ 5 ಲಕ್ಷ ರೂಪಾಯಿ ಸುಪಾರಿ ಪಡೆದುಕೊಂಡಿರುವ ವಿಚಾರ ಚರ್ಚಿಸಿದ್ದಾರೆ ಈ ಬಗ್ಗೆ ನಾನು ಪೊಲೀಸ್ ಮಹಾನ್ ನಿರ್ದೇಶಕರಿಗೆ ವಿವರಿಸಿದ್ದೇನೆ ಅವರು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡುವಂತೆ ಸೂಚಿಸಿದ್ದಾರೆ ಎಸ್ ಪಿ ಅವರನ್ನು ಭೇಟಿ ಮಾಡಿ ದೂರು ನೀಡುತ್ತಿದ್ದೇನೆ ಎಂದು ಹೇಳಿದರು.
Previous Articleಹಾಲು ದರ ಹೆಚ್ಚಳಕ್ಕೆ ಸಿಎಂ ರೆಡ್ ಸಿಗ್ನಲ್
Next Article ಹನಿ ಟ್ರ್ಯಾಪ್ ಬಗ್ಗೆ ಸಿಐಡಿ ತನಿಖೆ