ಬೆಂಗಳೂರು,ನ.6- ಆಸ್ಪತ್ರೆಯ ನೆಲಮಹಡಿ ಮಹಿಳಾ ಶೌಚಾಲಯದ ಗೋಡೆ ಮೇಲೆ ರಹಸ್ಯವಾಗಿ ಮೊಬೈಲ್ ಇರಿಸಿ ಕ್ಯಾಮೆರಾ ಆನ್ ಮಾಡಿ ಮಹಿಳೆಯ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಕಾಮುಕನನ್ನು ತಿಲಕನಗರ ಪೊಲೀಸರು ಬಂಧಿಸಿದ್ದಾರೆ. ಕಲಬುರಗಿ ಮೂಲದ ಯಲ್ಲಾಲಿಂಗ (28) ಬಂಧಿತ ಆರೋಪಿಯಾಗಿದ್ದಾನೆ, ಕಳೆದ ಅ.31ರಂದು ಬನ್ನೇರುಘಟ್ಟ ಮುಖ್ಯರಸ್ತೆಯ ಜಯದೇವ ಆಸ್ಪತ್ರೆಯ ನೆಲಮಹಡಿಯ ಮಹಿಳಾ ಶೌಚಾಲಯದ ಗೋಡೆ ಮೇಲೆ ರಹಸ್ಯವಾಗಿ ಮೊಬೈಲ್ ಇರಿಸಿ ಕ್ಯಾಮೆರಾ ಆನ್ ಮಾಡಿ ಮಹಿಳೆಯ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ.
ಶೌಚಾಲಯಕ್ಕೆ ಬಂದಿದ್ದ 35 ವರ್ಷದ ಮಹಿಳಾ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಯದೇವ ಆಸ್ಪತ್ರೆಯಲ್ಲಿ ವಾರ್ಡ್ ಹೆಲ್ಪರ್ ಆಗಿ ಕೆಲಸ ಮಾಡುತ್ತಿರುವ ಮಹಿಳೆ ಅ.31ರಂದು ಬೆಳಗ್ಗೆ ಕೆಲಸಕ್ಕೆ ಹಾಜರಾಗಿದ್ದರು. ಬಳಿಕ ಆಸ್ಪತ್ರೆಯ ನೆಲಮಹಡಿಯಲ್ಲಿನ ಶೌಚಾಲಯಕ್ಕೆ ತೆರಳಿದ್ದು, ವಾಪಾಸ್ ಬರುವಾಗ ಶೌಚಾಲಯದ ಗೋಡೆ ಮೇಲೆ ಮೊಬೈಲ್ ಕಾಣಿಸಿದೆ.
ಆ ಮೊಬೈಲ್ ಎತ್ತಿಕೊಂಡು ಪರಿಶೀಲಿಸಿದಾಗ ಆ ಮಹಿಳೆಯ ವಿಡಿಯೋ ಸೆರೆಯಾಗಿರುವುದು ಕಂಡು ಬಂದಿದೆ. ಬಳಿಕ ಆ ಮೊಬೈಲ್ ತೆಗೆದುಕೊಂಡು ಹೊರಗೆ ಬಂದಾಗ, ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಯಲ್ಲಾಲಿಂಗ ಓಡಿ ಬಂದು, ನನ್ನ ಮೊಬೈಲ್ ಕೊಡು ಅಕ್ಕ ಎಂದು ಕೇಳಿದ್ದಾನೆ. ಈ ವೇಳೆ ಮಹಿಳೆ ಮೊಬೈಲ್ ಕೊಡುವುದಿಲ್ಲ ಎಂದು ಜೋರಾಗಿ ಕಿರುಚಿದ್ದಾರೆ. ಬಳಿಕ ಅಲ್ಲಿದ್ದ ಜನರು ಓಡಿ ಬಂದು ಯಲ್ಲಾಲಿಂಗನನ್ನು ಹಿಡಿದುಕೊಂಡು ಧರ್ಮದೇಟು ನೀಡಿದ್ದಾರೆ. ಬಳಿಕ ಪೊಲೀಸರನ್ನು ಕರೆಸಿ ಆತನನ್ನು ವಶಕ್ಕೆ ನೀಡಿದ್ದಾರೆ. ಈ ಸಂಬಂಧ ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಫ್‌ಎಸ್‌ಎಲ್‌ಗೆ ರವಾನೆ:
ಆರೋಪಿ ಯಲ್ಲಾಲಿಂಗ ಕಳೆದ ಆರು ತಿಂಗಳ ಹಿಂದೆಯಷ್ಟೇ ಗುತ್ತಿಗೆ ಆಧಾರದ ಮೇಲೆ ಜಯದೇವ ಆಸ್ಪತ್ರೆಗೆ ವಾರ್ಡ್ ಹೆಲ್ಪರ್ ಕೆಲಸಕ್ಕೆ ಸೇರಿದ್ದ. ಆತನ ಮೊಬೈಲ್‌ನ್ನು ಜಪ್ತಿ ಮಾಡಿ ಪರಿಶೀಲನೆ ನಡೆಸಿದಾಗ ಒಂದು ಅಶ್ಲೀಲ ವಿಡಿಯೋ ಪತ್ತೆಯಾಗಿದೆ. ಪೊಲೀಸರು ಆತನ ಮೊಬೈಲ್‌ನನ್ನು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ಕ್ಕೆ ಕಳುಹಿಸಲಾಗಿದೆ.
Previous Articleಇನ್ಫೋಸಿಸ್ ನಾರಾಯಣಮೂರ್ತಿ ಹೆಸರಲ್ಲಿ ವಂಚನೆ.
Next Article ವಸೂಲಿ ಮಾಡುವ ಮಂತ್ರಿ.