ಬೆಂಗಳೂರು,ಫೆ.11-ನಟಿ ಸಂಜನಾ ಗಲ್ರಾನಿ
ಡ್ರಗ್ಸ್ ಪ್ರಕರಣದ ಸಂಬಂಧ ಹೈಕೋರ್ಟ್ ನೀಡಿರುವ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಸಿಸಿಬಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಇದರಿಂದ ಸಂಜನಾ ಗಲ್ರಾನಿ ಅವರು ಮತ್ತೆ ಸಂಕಷ್ಟ ಎದುರಾಗಿದೆ.
ಡ್ರಗ್ ಕೇಸ್ನಲ್ಲಿ ಕೆಲ ವರ್ಷಗಳ ಹಿಂದೆ ಸಂಜನಾ ಬಂಧಿತರಾಗಿ ಕೆಲ ಸಮಯ ಜೈಲಿನಲ್ಲಿದ್ದು, ಜಾಮೀನಿನ ಮೇಲೆ ಹೊರಗೆ ಬಂದಿದ್ದರು. ಆದರೆ, ಇತ್ತೀಚೆಗೆ ಹೈಕೋರ್ಟ್ನಲ್ಲಿ ಪ್ರಕರಣ ವಜಾ ಗೊಂಡಿತ್ತು. ಹೀಗಾಗಿ ಸಂಜನಾ ಗಲ್ರಾನಿ ವಿರುದ್ಧ ಮೇಲ್ಮನವಿ ಸಲ್ಲಿಕೆ ಮಾಡಲು ತಯಾರಿ ನಡೆದಿದೆ. ಇದರಿಂದ ಸಂಜನಾಗೆ ಮತ್ತೆ ಭೀತಿ ಶುರವಾಗಿದೆ.
‘ಈಗಾಗಲೇ ಸರ್ಕಾರದ ಮಟ್ಟದಲ್ಲಿ ಸಭೆ ನಡೆಸಿ ಅರ್ಜಿ ತಯಾರಿ ಮಾಡಲಾಗಿದೆ. ಪ್ರಾಸಿಕ್ಯೂಷನ್ ಅನುಮತಿ ಬರುತ್ತಿದ್ದಂತೆ ಅರ್ಜಿ ಸಲ್ಲಿಕೆ ಆಗಲಿದೆ’ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ತಿಳಿಸಿದ್ದಾರೆ.
ಸಂಜನಾ ಗಲ್ರಾನಿ ಅವರು ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಅವರು ವಿವಾಹ ಮಾಡಿಕೊಂಡು ಮಗುವಿಗೂ ಜನ್ಮನೀಡಿದ್ದಾರೆ. ಇದಾದ ಬಳಿಕ ಅವರು ನಟನೆಯಲ್ಲಿ ಹೆಚ್ಚಾಗಿ ಆ್ಯಕ್ಟೀವ್ ಆಗಿಲ್ಲ. ಅವರು 2018ರ ‘ದಂಡುಪಾಳ್ಯ 3′ ಚಿತ್ರದಲ್ಲಿ ನಟಿಸಿದ್ದರು.
Previous ArticleInfosys ಯಾಕೆ ಹೀಗೆ ಮಾಡಿದೆ.?
Next Article ವಿಜಯೇಂದ್ರ ಗೆ ಹೈಕಮಾಂಡ್ ಕೊಟ್ಟ ಸೂಚನೆ ಗೊತ್ತಾ