Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಸಂಭ್ರಮಾಚರಣೆ ಅಲ್ಲ ಶೋಕಾಚರಣೆ
    Bengaluru

    ಸಂಭ್ರಮಾಚರಣೆ ಅಲ್ಲ ಶೋಕಾಚರಣೆ

    vartha chakraBy vartha chakraJune 4, 2025No Comments3 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಜೂ.4:
    ಸುದೀರ್ಘ 18 ವರ್ಷಗಳ ಕಾಯುವಿಕೆಯ ನಂತರ ಐಪಿಎಲ್ ಟ್ರೋಫಿ ಗೆಲ್ಲುವ ಮೂಲಕ ರಾಯಲ್‌ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಸಂಭ್ರಮಾಚರಣೆ ಶೋಕಾಚರಣೆಯಾಗಿ ಪರಿಣಮಿಸಿದೆ.
    ಆರ್‌ಸಿಬಿ ಕಪ್ ಗೆದ್ದು ಬೆಂಗಳೂರಿಗೆ ಆಗಮಿಸಿದ ವೇಳೆ ಆಯೋಜಿಸಿದ್ದ ವಿಜಯೋತ್ಸವದ ವೀಕ್ಷಣೆಗೆ ಬಂದಿದ್ದವರು ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಏಕಾಏಕಿ ಒಳಗೆ ನುಗ್ಗಲು ಪ್ರಯತ್ನಿಸಿ ಉಂಟಾದ ಕಾಲ್ತುಳಿತದಲ್ಲಿ 15 ಜನರು ಮೃತಪಟ್ಟಿದ್ದಾರೆ.
    20ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ಅವರನ್ನು ಬೌರಿಂಗ್‌ ಮತ್ತು ವೈದೇಹಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಇದರಲ್ಲಿ ಏಳು ಜನರ ಸ್ಥಿತಿ ಗಂಭೀರವಾಗಿದೆ.
    ಎರಡು ಆಸ್ಪತ್ರೆಗಳ ಬಳಿಯಲ್ಲಿ ಮೃತರ ಕುಟುಂಬಗಳ ಆಕ್ರಂದನ ಮತ್ತು ಗಾಯಗೊಂಡವರು ಹಾಗೂ ಅವರ ಕುಟುಂಬ ಸದಸ್ಯರ ರೋಧನ ಮುಗಿಲು ಮುಟ್ಟಿತ್ತು. ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು.
    ಏಕಾಏಕಿ ನಿರ್ಧಾರ:
    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಆಚರಣೆ ವಿಚಾರ ಏಕಾಏಕಿ ನಿರ್ಧಾರವಾಗಿದೆ. ಯಾವುದೇ ಪೂರ್ವ ತಯಾರಿ ಇಲ್ಲದೆ ಕೈಗೊಂಡ ನಿರ್ಧಾರದಿಂದಾಗಿ ಇಂತಹ ಅವಘಡ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
    ಕಪ್ ಗೆದ್ದು ಬೆಂಗಳೂರಿಗೆ ಹಿಂತಿರುಗುವ ಆಟಗಾರರನ್ನು ವಿಮಾನ ನಿಲ್ದಾಣದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಮಾಡುವ ಚರ್ಚೆ ನಡೆದಿತ್ತು ಆದರೆ ಇದಕ್ಕೆ ಭದ್ರತೆ ಅಡ್ಡಿಯಾಗಲಿದೆ ಎಂದು ಪೊಲೀಸರು ಹೇಳಿದ ಹಿನ್ನೆಲೆಯಲ್ಲಿ ಇದನ್ನು ರದ್ದುಪಡಿಸಲಾಯಿತು ಆನಂತರ ವಿಧಾನಸೌಧದ ಮುಂಭಾಗದಲ್ಲಿ ಆಟಗಾರರನ್ನು ರಾಜ್ಯ ಸರ್ಕಾರದ ವತಿಯಿಂದ ಸನ್ಮಾನಿಸುವುದಾಗಿ ಪ್ರಕಟಿಸಲಾಯಿತು.
    ಅದರಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿಮಾನ ನಿಲ್ದಾಣಕ್ಕೆ ತೆರಳಿ, ಆಟಗಾರರನ್ನು ಸ್ವಾಗತಿಸಿ ವಿಧಾನಸೌಧದ ವರೆಗೆ ಕರೆತಂದರು ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ ಯಾವುದೇ ರೀತಿಯ ಲೋಪವಾಗದಂತೆ ನೋಡಿಕೊಳ್ಳಲಾಗಿತ್ತು. ಆದರೆ ಚಿನ್ನಸ್ವಾಮಿ ಕ್ರಿಡಾಂಗಣದ ಬಳಿ ಎಡವಟ್ಟು ಉಂಟಾಯಿತು
    ಕೊಹ್ಲಿ ಘೋಷಣೆ:
    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಆಚರಣೆ ಕುರಿತಂತೆ ಯಾವುದೇ ರೀತಿಯ ಅಧಿಕೃತ ನಿರ್ಧಾರ ಹೊರ ಬಿದ್ದಿರಲಿಲ್ಲ. ಕಪ್ ಗೆದ್ದ ನಂತರ ಆರ್‌ಸಿಬಿ ವಿಜಯೋತ್ಸವವನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜನೆ ಮಾಡುತ್ತಿರುವ ಮುನ್ಸೂಚನೆಯನ್ನು ಸ್ವತಃ ಆಟಗಾರ ವಿರಾಟ್ ಕೊಹ್ಲಿ ನೀಡಿದ್ದರು.
    ಆರ್‌ಸಿಬಿಗಾಗಿ ಹೋರಾಡಿದ ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್ ಹಾಗೂ ನಾನು ನಾಳೆ ಬಂಗಳೂರಿಗೆ ಬರುತ್ತೇವೆ. ಅಲ್ಲಿ ಅಭಿಮಾನಿಗಳಿಗೆ ಈ ಕಪ್ ಸಮರ್ಪಿಸಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಸಂಭ್ರಮಾಚರಣೆ ಮಾಡುತ್ತೇವೆ ಎಂದು ಹೇಳಿದ್ದರು.
    ಇದರ ಬೆನ್ನಲ್ಲಿಯೇ ಕೆಎಸ್‌ಸಿಎ ವತಿಯಿಂದ ಆರ್‌ಸಿಬಿ ಅಭಿಮಾನಿಗಳ ವಿಜಯೋತ್ಸವಕ್ಕೆ ಸಿದ್ಧತೆ ನಡೆಸಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬರುವ ಅಭಿಮಾನಿಗಳಿಗೆ ಉಚಿತ ಪ್ರವೇಶ ನೀಡಲಾಗುವುದು ಎಂದು ಘೋಷಣೆ ಮಾಡಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೇವಲ 35 ಸಾವಿರ ಆಸನದ ವ್ಯವಸ್ಥೆಯಿದೆ. ಆದರೆ, ಆರ್‌ಸಿಬಿ ವಿಜಯೋತ್ಸವಕ್ಕೆ ಬರುವ ಅಭಿಮಾನಿಗಳ ಸಂಖ್ಯೆ 1 ಲಕ್ಷಕ್ಕೂ ಅಧಿಕವಾಗುವ ನಿರೀಕ್ಷೆಯಿದೆ ಎಂದು ವರದಿಗಳು ತೊಲಗಿದ ಬೆನ್ನಲ್ಲೇ ಕೆ ಎಸ್ ಸಿ ಎ ಆಡಳಿತ ಮಂಡಳಿ‌ಕೊನೇ ಕ್ಷಣದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬರುವ ಆರ್‌ಸಿಬಿ ಅಭಿಮಾನಿಗಳಿಗೆ ಟಿಕೆಟ್ ಅಥವಾ ಪಾಸ್ ವಿತರಣೆ ಮಾಡಲು ನಿರ್ಧರಿಸಿತು.
    ಈ ಮೂಲಕ ನಿಗದಿತ ಅಭಿಮಾನಿಗಳಿಗೆ ಮಾತ್ರ ವಿಜಯೋತ್ಸವ ಆಚರಣೆ ವೀಕ್ಷಣೆಗೆ ಅವಕಾಶ ನೀಡಲಾಗುತ್ತಿದೆ ಎಂದು ತಿಳಿಸಿತು. ಆದರೆ ಈ ಘೋಷಣೆ ಹೊರ ಬೀಳುವ ಮುನ್ನವೇ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಕ್ರೀಡಾಂಗಣದ ಸುತ್ತ ಜಮಾಯಿಸಿದ್ದರು
    ಮಧ್ಯಾಹ್ನದ 12ರಿಂದಲೇ ವಿಧಾನಸೌಧ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದತ್ತ ಆರ್‌ಸಿಬಿ ಅಭಿಮಾನಿಗಳು ಬರಲು ಆರಂಭಿಸಿದ್ದರು. ಇದರಿಂದ ಗೊಂದಲ ವಾತಾವರಣ ನಿರ್ಮಾಣವಾಗಿತ್ತು ಪೋಷಕರ ಜತೆಗೆ ಪುಟ್ಟಮಕ್ಕಳು ಕ್ರೀಡಾಂಗಣದತ್ತ ಬಂದಿದ್ದು, ತೊಂದರೆಗೆ ಸಿಲುಕಿದರು.
    ವಿಜಯೋತ್ಸವವನ್ನು ದಿಢೀರ್ ನಿರ್ಧಾರ ಮಾಡಿದ್ದರಿಂದ ಭದ್ರತೆಗೆ ಸಿಬ್ಬಂದಿ ನಿಯೋಜನೆಯಲ್ಲಿ ಸಮಸ್ಯೆ ಆಗಿದೆ. ದಿಢೀರ್‌ ಆಗಿ ದೊಡ್ಡಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದರಿಂದ ನಿಯಂತ್ರಣವು ಸಾಧ್ಯವಾಗದೇ ಪೊಲೀಸರು ಪರದಾಡಿದರು.
    ಜನ ಪ್ರವಾಹ:
    ವಿಧಾನಸೌಧದ ಮುಂಭಾಗದಲ್ಲಿ ಏರ್ಪಡಿಸಿದ್ದ ಆಟಗಾರರ ಸನ್ಮಾನ ಸಮಾರಂಭವನ್ನು ಕಣ್ತುಂಬಿಕೊಳ್ಳಲು ಕಾದು ನಿಂತಿದ್ದ ಸಾವಿರಾರು ಮಂದಿ ಕಾರ್ಯಕ್ರಮ ಮುಗಿಯುವ ಮುನ್ನವೇ ಚಿನ್ನಸ್ವಾಮಿ ಕ್ರೀಡಾಂಗಣದತ್ತ ಧಾವಿಸಿದರು.
    ಪಾಸ್ ವಿತರಣೆಯಲ್ಲಿ ತೊಡಗಿದ್ದ ಕೆ ಎಸ್ ಎಸ್ ಸಿ ಎ ಆಡಳಿತ ಮಂಡಳಿ ಅದನ್ನು ವಿತರಿಸಲು ಸಾಧ್ಯವಾಗದೆ ಕೈ ಚೆಲ್ಲಿತು ಏಕಾಏಕಿ ಗೇಟ್ ಗಳ ಸಮೀಪ ನುಗ್ಗಿದ ಅಭಿಮಾನಿಗಳು ಗದ್ದಲ ಎಬ್ಬಿಸಿದರು ಇದನ್ನು ನಿಯಂತ್ರಿಸುವ ದೃಷ್ಟಿಯಿಂದ ಆಡಳಿತ ಮಂಡಳಿ ಎಲ್ಲ ಗೇಟ್ ಗಳ ಬಾಗಿಲನ್ನು ಒಂದೇ ಬಾರಿಗೆ ತೆಗೆಯಲು ಸೂಚಿಸಿತು.
    ಗೇಟ್ ತೆರೆಯುತ್ತಿದ್ದಂತೆ ಅಭಿಮಾನಿಗಳು ಒಳ ನುಗ್ಗಲು ಧಾವಿಸಿದರು ಇದರಿಂದ ನೂಕು ನುಗ್ಗಲು ಉಂಟಾಗಿ ಭಾರಿ ಪ್ರಮಾಣದ ಕಾಲ್ತುಳಿತ ಸಂಭವಿಸಿತು. ಕಾಲ್ತುಳಿತದಲ್ಲಿ ಸಿಲುಕಿದವರನ್ನು ರಾಕ್ಷಣವೇ ಪೊಲೀಸರು ಸಮೀಪದ ವೈದೇಹಿ ಮತ್ತು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದರು ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯದಲ್ಲಿಯೇ ಹಲವರ ಪ್ರಾಣ ಪಕ್ಷಿ ಹಾರಿಹೋಗಿತ್ತು.

    ಚಿನ್ನ Bengaluru ಸರ್ಕಾರ
    Share. Facebook Twitter Pinterest LinkedIn Tumblr Email WhatsApp
    Previous Articleಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರೆ ಅಂದಿದ್ದಕ್ಕೆ ಜಾರ್ಜ್ ಏನಂದ್ರು ನೋಡಿ ?
    Next Article ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಚಾಟಿ !
    vartha chakra
    • Website

    Related Posts

    ಡಿಕೆ ಶಿವಕುಮಾರ್ ಬಗ್ಗೆ ರಂಭಾಪುರಿ ಶ್ರೀಗಳ ಹೇಳಿದ್ದೇನು ಗೊತ್ತೆ?

    July 7, 2025

    ಸೆಪ್ಟೆಂಬರ್ ಕ್ರಾಂತಿ ನಿಶ್ಚಿತ ಅಂದ್ರು ರಾಜಣ್ಣ

    July 7, 2025

    ಅಧಿಕಾರ ಹಸ್ತಾಂತರದ ಸುತ್ತ ಚರ್ಚೆ.

    July 7, 2025

    Leave A Reply Cancel Reply

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಡಿಕೆ ಶಿವಕುಮಾರ್ ಬಗ್ಗೆ ರಂಭಾಪುರಿ ಶ್ರೀಗಳ ಹೇಳಿದ್ದೇನು ಗೊತ್ತೆ?

    ಸೆಪ್ಟೆಂಬರ್ ಕ್ರಾಂತಿ ನಿಶ್ಚಿತ ಅಂದ್ರು ರಾಜಣ್ಣ

    ಅಧಿಕಾರ ಹಸ್ತಾಂತರದ ಸುತ್ತ ಚರ್ಚೆ.

    ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ಎಂಟ್ರಿ.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Davidzooro on ಮುಡಾ ಅಕ್ರಮ ಕುರಿತು ಇ.ಡಿ.ಬ್ರಹ್ಮಾಸ್ತ್ರ.
    • Davidzooro on ಬಿಜೆಪಿ ಭಿನ್ನಮತಕ್ಕೆ ಸುರಿದ ತುಪ್ಪ | BJP Karnataka
    • vivodzapojkrasnodarvucky on ಕೈ ವಶವಾದ ವಿಜಯಪುರ ಮಹಾನಗರ ಪಾಲಿಕೆ | Vijayapura
    Latest Kannada News

    ಡಿಕೆ ಶಿವಕುಮಾರ್ ಬಗ್ಗೆ ರಂಭಾಪುರಿ ಶ್ರೀಗಳ ಹೇಳಿದ್ದೇನು ಗೊತ್ತೆ?

    July 7, 2025

    ಸೆಪ್ಟೆಂಬರ್ ಕ್ರಾಂತಿ ನಿಶ್ಚಿತ ಅಂದ್ರು ರಾಜಣ್ಣ

    July 7, 2025

    ಅಧಿಕಾರ ಹಸ್ತಾಂತರದ ಸುತ್ತ ಚರ್ಚೆ.

    July 7, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಕಪಾಳಕ್ಕೆ ಬಾರಿಸಿದ ಬಿಜೆಪಿ ಶಾಸಕ ! #bjp #viralvideo #news #kannadanews #varthachakra #slapping #
    Subscribe