ಬೆಂಗಳೂರು : ಗೃಹ ಸಚಿವ ಅರಗ ಜ್ಞಾನೇಂದ್ರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ. ರಾಜ್ಯ ಹೈಕೋರ್ಟ್ ಎಸಿಬಿ ರದ್ದು ಪಡಿಸಿ ಲೋಕಾಯುಕ್ತಕ್ಕೆ ತನಿಖಾ ಸಂಸ್ಥೆಯ ಅಧಿಕಾರ ಮರಳಿಸಿದ ನಂತರ ಸಲ್ಲಿಕೆಯಾದ ಪ್ರಮುಖ ಪ್ರಕರಣ ಇದಾಗಿದೆ.
ಸಚಿವ ಅರಗ ಜ್ಞಾನೇಂದ್ರ ಅವರು ತಮ್ಮ ಪ್ರಭಾವ ಬಳಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಬದಲಿ ನಿವೇಶನ ಪಡೆದಿದ್ದಾರೆಂದು ಆರೋಪಿಸಲಾಗಿದೆ
ಬದಲಿ ನಿವೇಶನ ಹಂಚಿಕೆ ಕುರಿತಾಗಿ ಬಿಡಿಎ ತನ್ನ ಆದೇಶ ಉಲ್ಲಂಘಿಸಿ ನಿವೇಶನ ಹಂಚಿಕೆ ಮಾಡಿದೆ ಎಂದು ಸುಪ್ರೀಂಕೋರ್ಟ್ ಆಕ್ಷೇಪ ವ್ಯಕ್ತಪಡಿಸಿ ಆಯುಕ್ತರ ವರ್ಗಾವಣೆಗೆ ಆದೇಶಿಸಿದೆ.
ಇದನ್ನೆಲ್ಲಾ ಲೋಕಾಯುಕ್ತಕ್ಕೆ ದಾಖಲೆ ರೂಪದಲ್ಲಿ ಸಲ್ಲಿಸಿರುವ ಆಮ್ ಆದ್ಮಿ ಪಕ್ಷ ಸಚಿವ ಅರಗ ವಿರುದ್ಧ ತನಿಖೆಗೆ ಮನವಿ ಸಲ್ಲಿಸಿದೆ.
Previous Articleವಿರೋಧಿ ನಾಯಕರ ತಲೆಮೇಲೆ ತೂಗುಗತ್ತಿ!
Next Article ಪ್ರವಾಹಗಳಿಂದ ಜರ್ಜರಿತಗೊಂಡ ಪಾಕಿಸ್ತಾನ