ಮುಂಬಯಿ: ಸನ್‌ರೈಸರ್ಸ್ ಹೈದರಾಬಾದ್ ತಂಡದ ವೇಗಿಗಳ ಮಾರಕ ದಾಳಿಗೆ ತತ್ತರಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್, 7 ವಿಕೆಟ್ ಅಂತರದಿಂದ ಸೋಲುಂಡಿದೆ.
ಇಲ್ಲಿನ ಡಿ.ವೈ. ಪಾಟೀಲ ಸ್ಟೇಡಿಯಂನಲ್ಲಿ ರವಿವಾರ ನಡೆದ ಟಾಟಾ ಐಪಿಎಲ್‌ನ 28ನೇ ಪಂದ್ಯದಲ್ಲಿ ಟಾಸ್ ಗೆದ್ದ ಸನ್‌ರೈಸರ್ಸ್ ಫೀಲ್ಡಿಂಗ್ ಆಯ್ದುಕೊಂಡಿತು. ಗಾಯಾಳು ಮಯಾಂಕ್ ಅನುಪಸ್ಥಿತಿಯಲ್ಲಿ ಶಿಖರ್ ಧವನ್ ನೇತೃತ್ವದಲ್ಲಿ ಕಣಕ್ಕಿಳಿದ ಪಂಜಾಬ್ ಆರಂಭದಲ್ಲೇ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಲಿಯಮ್ ಲಿವಿಂಗ್‌ಸ್ಟೋನ್ (60 ರನ್, 33 ಎಸೆತ, 5 ಬೌಂಡರಿ, 4 ಸಿಕ್ಸರ್) ಏಕಾಂಗಿ ಹೋರಾಟದ ಹೊರತಾಗಿಯೂ 151 ರನ್‌ಗಳಿಗೆ ಸರ್ವಪತನ ಕಂಡಿತು. 20ನೇ ಓವರ್ ಎಸೆದ ಯುವ ವೇಗಿ ಉಮ್ರಾನ್ ಮಲಿಕ್ (28 ರನ್‌ಗೆ 4 ವಿಕೆಟ್) ಒಂದೂ ರನ್ ನೀಡದೆ ಮೂರು ವಿಕೆಟ್ ಕಬಳಿಸಿದರು. ಮತ್ತೊಂದು ರನೌಟ್ ಮೂಲಕ ಇನ್ನಿಂಗ್ಸ್ ಸಮಾಪ್ತಿಗೊಂಡಿತು. ಭುವನೇಶ್ವರ ಕುಮಾರ್ 22 ರನ್ ನೀಡಿ 3 ವಿಕೆಟ್ ಕಿತ್ತರು.
ಸನ್‌ರೈಸರ್ಸ್ ನಾಯಕ ಕೇನ್ ವಿಲಿಯಮ್ಸನ್ ಅವರ ವಿಕೆಟ್ ಅನ್ನು ಬೇಗನೆ ಕಳೆದುಕೊಂಡರೂ ಅಭಿಷೇಕ್ ಶರ್ಮ (31), ರಾಹುಲ್ ತ್ರಿಪಾಠಿ (34) ಬಿರುಸಿನ ಆಟದ ಮೂಲಕ ತಂಡವನ್ನು ಆಧರಿಸಿದರು. ಬಳಿಕ ಮುರಿಯದ 4ನೇ ವಿಕೆಟ್‌ಗೆ ಏಡನ್ ಮಾರ್ಕ್‌ರಾಮ್ (41 ರನ್, 27 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ನಿಕೋಲಾಸ್ ಪೂರಣ್ (35 ರನ್, 30 ಎಸೆತ, 1 ಬೌಂಡರಿ, 1 ಸಿಕ್ಸರ್) 75 ರನ್ ಪೇರಿಸಿ, ಇನ್ನೂ 7 ಎಸೆತಗಳು ಇರುವಂತೆಯೇ ಗೆಲುವಿನ ದಡ ಮುಟ್ಟಿಸಿ, ತಂಡದ ಅಂಕ ಗಳಿಕೆಯನ್ನು 8ಕ್ಕೇರಿಸಿದರು. ಉಮ್ರಾನ್ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು.
Previous Articleಬಿಜೆಪಿಯಲ್ಲಿ ಭ್ರಷ್ಟಾಚಾರ, ಕಮಿಷನ್ ದಂಧೆ ನಡೆಯುತ್ತಿದೆ- ಎಮ್ ಲಕ್ಷ್ಮಣ್
Next Article ಮಿಲ್ಲರ್ ಆಜೇಯ ಆಟ: ಚೆನ್ನೈಗೆ ಆಘಾತ