ಸಮೂಹ ಶಕ್ತಿ ಸಂಘಟನೆ ಪ್ರತಿ ವರ್ಷದಂತೆ ಈ ವರ್ಷವೂ ವಿಜಯನಗರ ಜಿಲ್ಲೆ, ಹೊಸಪೇಟೆ ತಾಲ್ಲೂಕು, ಪೋತಲಕಟ್ಟಿ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಯಶಸ್ವಿಯಾಗಿ ಕಳೆದ ಶನಿವಾರ 21 ಡಿಸೆಂಬರ್ 2024 ರಂದು ಆಯೋಜಿಸಿತ್ತು.
ಕಳೆದ ಸುಮಾರು 5 ವರ್ಷಗಳಲ್ಲಿ ಈ ಪ್ರದೇಶದಲ್ಲಿ ಆಯೋಜಿಸಲ್ಪಟ್ಟ 6ನೇ ಶಿಬಿರ ಇದಾಗಿದ್ದು, ಅತ್ಯಂತ ಯಶಸ್ವಿಯಾಗಿ ಸಮೂಹ ಶಕ್ತಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವರಾಜ್ ಪೋತಲಕಟ್ಟಿ ಅವರ ನೇತೃತ್ವದಲ್ಲಿ ಹಾಗು ಅನೇಕ ಗಣ್ಯರ, ಸ್ಥಳೀಯರ ಹಾಗು ಸದಸ್ಯರ ಬೆಂಬಲದೊಂದಿಗೆ ಹಮ್ಮಿಕೊಳ್ಳಲಾಗಿತ್ತು.
ಈ ಶಿಬಿರದಲ್ಲಿ ಸುಮಾರು 380ಕ್ಕೂ ಅಧಿಕ ಜನರು ತಮ್ಮ ಆರೋಗ್ಯ ತಪಾಸಣೆಯನ್ನು ಉಚಿತವಾಗಿ ಮಾಡಿಸಿಕೊಂಡಿದ್ದಾರೆ.
ಅನೇಕ ಖಾಯಿಲೆಗಳ ತಪಾಸಣೆ ಮಾಡಿಸುವುದಲ್ಲದೆ ಚಿಕಿತ್ಸೆಯನ್ನೂ ಪಡೆದುಕೊಂಡಿದ್ದಾರೆ.
ಹೆಚ್ಚಿನ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಹಾಗು ಆಸ್ಪತ್ರೆಯಲ್ಲಿ ನೀಡಬೇಕಾದ ಚಿಕಿತ್ಸೆಗಳಿಗೆ ಸೂಕ್ತ ರೋಗಿಗಳನ್ನು ಆಯ್ಕೆ ಮಾಡಿ ಅವರುಗಳಿಗೆ ಅಗತ್ಯ ಚಿಕಿಸ್ಥೆಯನ್ನು ನೀಡುವುದಕ್ಕೂ ವ್ಯವಸ್ಥೆಯನ್ನು ಮಾಡಲಾಗಿದೆ.
130 ಜನರು ಕಣ್ಣು ತೋರಿಸಿಕೊಂಡಿದ್ದು ಅದರಲ್ಲಿ 83 ಜನ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾಗಿರುತ್ತಾರೆ.
5 ಜನರಲ್ಲಿ ಹೃದಯ ಸಂಬಂಧಿತ ಕಾಯಿಲೆ, 7 ಜನರಿಗೆ ನರ ಸಂಬಂಧಿತ ಕಾಯಿಲೆ, 125 ಜನಗಳಲ್ಲಿ ಎಲುಬು ಮತ್ತು ಕೀಲು ಸಂಬಂಧಿತ ಕಾಯಿಲೆಯನ್ನು ಗುರುತಿಸಲಾಗಿದೆ.
ಜೊತೆಗೆ 20 ಜನ ಮಕ್ಕಳು ತೋರಿಸಿಕೊಂಡಿದ್ದಾರೆ, ಹಾಗು 93 ಜನ ಸಾಮಾನ್ಯ ಕಾಯಿಲೆಗಳಾದ ನೆಗಡಿ ಕೆಮ್ಮು ತಲೆನೋವು ಇತರೆ ಬೇನೆಗಳಿಗೆ ಉಪಶಮನವನ್ನೂ ಪಡೆದಿದ್ದಾರೆ.
ಈ ಸಂಧರ್ಭದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 12 ಜನರು ರಕ್ತದಾನ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮುಖ್ಯ ಅಥಿತಿಗಳಾದಂತಹ ಸನ್ಮಾನ್ಯ ಶ್ರೀ ಈ.ತುಕಾರಾಂ, ಸಂಸದರು ಬಳ್ಳಾರಿ ವಿಜಯನಗರ ಜಿಲ್ಲೆ;
ಸನ್ಮಾನ್ಯ ಶ್ರೀ ಭೀಮನಾಯ್ಕಾ, ರಾಜ್ಯಾಧ್ಯಕ್ಷರು ಕೆ ಎಂ ಎಫ್ Bengaluru.
ವಿನಾಯಕ ರಾಮಕೃಷ್ಣ ಸಮೂಹ ಶಕ್ತಿಯ ರಾಜ್ಯಾಧ್ಯಕ್ಷರು
ದೇವರಾಜ್ ಪೋತಲಕಟ್ಟಿ. ಸಮೂಹ ಶಕ್ತಿ ರಾಜ್ಯ ಪ್ರಧಾನ ಕಾರ್ಯದರ್ಶಿ
ಡಿ. ಹನುಮಂತಪ್ಪ ಅದ್ಯಕ್ಷರು ಚಿಲಕನಹಟ್ಟಿ ಗ್ರಾಮ ಪಂಚಾಯತಿ
ಸತ್ಯಪ್ಪ ಧರ್ಮದರ್ಶಿ ಮರಿಯಮ್ಮನಹಳ್ಳಿ
ವೀರಸಂಗಯ್ಯ ಕಾರ್ಯಾಧ್ಯಕ್ಷರು ರಾ ರೈ ಸಂ
ನಾಗರತ್ನಮ್ಮ – ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು
ಬಿಎಂಎಸ್ ಪ್ರಭು ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ
ರಾಮಚಂದ್ರಪ್ಪ ಕರ್ನಾಟಕ ಬಯಲಾಟ ಅಕಾಡೆಮಿ ಪುರಸ್ಕೃತರು
ಚಿಲಕನಹಟ್ಟಿ ಹಾಗೂ ನಿಡಗೂರ್ತಿ ಪಂಚಾಯಿತಿವಾಪ್ತಿಯ ಎಲ್ಲಾ ಮುಖಂಡರು ಹಾಗೂ ಪೋತಲಕಟ್ಟಿ ಗ್ರಾಮದ ಗ್ರಾಮಸ್ಥರು ಉಪಸ್ಥಿಸ್ತಿರಿದ್ದರು
ಆರೋಗ್ಯ ತಪಾಸಣೆಯನ್ನು ಅರಸಿ ಬಂದ ಎಲ್ಲ ಜನರನ್ನೂ ಅತಿ ಗುಣಮಟ್ಟದಲ್ಲಿ ಪರೀಕ್ಷೆ ಮಾಡಿ ಮಾತನಾಡಿಸಿದ ಇಡೀ ವೈದ್ಯಕೀಯ ತಂಡ ಎಲ್ಲರ ಮೆಚ್ಚುಗೆ ಗಳಿಸಿತು.
ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟ ವೈದ್ಯರುಗಳು :
ಡಾ|| ಶ್ರೀನಿವಾಸ್ ದೇಶಪಾಂಡೆ.- ನೇತ್ರ ತಜ್ಞರು
ಡಾ|| ಶಂಕರ್. -ಕ್ಯಾನ್ಸರ್ ಸ್ಪೆಷಲಿಸ್ಟ್
ಡಾ|| ಟಿ ಸಂದೀಪ -ಹೃದಯ ತಜ್ಞರು
ಡಾ|| ಚೈತ್ರ ತುಂಗ – ಸ್ತ್ರೀರೋಗ ತಜ್ಞರು
ಡಾ|| ರಂಜಿತಾ- ಕಿಡ್ನಿ ತಜ್ಞರು
ಡಾ|| ಶರಣ ಪ್ರಸಾದ್ ಹೊಂಗಲ್ – ಎಲುಬು ಮತ್ತು ಕೀಲು ತಜ್ಞರು
ಡಾ|| ನಿರಂಜನ್ – ಮಕ್ಕಳ ತಜ್ಞರು.
ಡಾ|| ಮನ್ಸೂರ್ ಅಹ್ಮದ್ ಖಾನ್. ಕಿವಿ ಮೂಗು ಗಂಟಲು ತಜ್ಞರು
ಡಾ|| ಸುನಿಲ್ ಗೌಡ. ದಂತ ವೈದ್ಯರು
ಡಾ|| ಮಂಜುಳಾ ವೈದ್ಯಾದಿಕಾರಿಗಳು
ದೀಪಕ್ ತಿಮ್ಮಯ ಪ್ರೇರಿತ ಸಮೂಹ ಶಕ್ತಿ ಸಂಘಟನೆ ನಾಗರೀಕರನ್ನು ಸ್ವಾವಲಂಬಿಗಳನ್ನಾಗಿ ಮಾಡಲು, ಆರೋಗ್ಯವಂತರಾಗಿ ನಾಗರಿಕ ಜವಾಬ್ದಾರಿಯೊಂದಿಗೆ ಬದುಕುವಂತೆ ಮಾಡಲು ಶ್ರಮಿಸುತ್ತಿದೆ.
ಪೋತಲಕಟ್ಟಿಯಲ್ಲಿ ನಡೆಸಲಾದ ಇಂತಹ ಉಚಿತ ಆರೋಗ್ಯ ತಪಾಸಣೆ ಹಾಗು ಸನ್ಮಾನ ಕಾರ್ಯಕ್ರಮ ಮಾದರಿಯಾಗಿ ಬೆಳೆಯಲಿ, ಹೀಗೆ ನಿರಂತರವಾಗಿ ನಡೆಯಲಿ ಎಂದು ಅಲ್ಲಿ ಭಾಗವಹಿಸಿದ ಅನೇಕ ಫಲಾನುಭಿವಗಳ ಮನದಾಳದ ಮಾತುಗಳಾಗಿದ್ದವು.