ಬೆಂಗಳೂರು,ಜ.10:
ನಾಯಕತ್ವ ಬದಲಾವಣೆ ಸೇರಿದಂತೆ ಹಲವಾರು ವಿಷಯಗಳ ಕುರಿತು ರಾಜ್ಯ ಕಾಂಗ್ರೆಸ್ಸಿನಲ್ಲಿ ವಿದ್ಯಮಾನಗಳು ತೀವ್ರ ಸ್ವರೂಪ ಪಡೆದುಕೊಂಡಿರುವ ಬೆನ್ನಲ್ಲೇ ಆಧ್ಯಾತ್ಮಿಕ ಗುರು ಅವಧೂತ ವಿನಯ್ ಗುರೂಜಿ ಕುತೂಹಲಕರ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ನಂತರ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ. ಶಿವಕುಮಾರ್ ಅವರಿಗಿರುವ ಗುರು ನಿಷ್ಠೆ ಅವರನ್ನು ಉನ್ನತ ಹುದ್ದೆಗೆ ಕೊಂಡೊಯ್ಯಲ್ಲಿದೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವ ಕುಮಾರ್ ಅವರಿಗೆ ಮುಖ್ಯಮಂತ್ರಿ ಆಗುವ ಎಲ್ಲಾ ಅವಕಾಶ ಮತ್ತು ಅರ್ಹತೆ ಇದೆ ಹೀಗಾಗಿ ಸಿದ್ದರಾಮಯ್ಯ ಅವರ ನಂತರ ಆ ಸ್ಥಾನವನ್ನು ಇವರು ಅಲಂಕರಿಸಲಿದ್ದಾರೆ ಎಂದು ತಿಳಿಸಿದರು.
ಶಿವಕುಮಾರ್ ಅವರ ಗುರು ನಿಷ್ಠೆ ಅಜ್ಜಯ್ಯ ಅವರ ಮೇಲಿನ ಅಪಾರವಾದ ಗೌರವ, ಹಿರಿಯರ ಮೇಲಿರುವ ಭಕ್ತಿ, ನಾಟಕೀಯವಲ್ಲದ ಮಾತು ಮತ್ತು ನಡವಳಿಕೆ ಅವರನ್ನು ಈ ಉನ್ನತ ಸ್ಥಾನಕ್ಕೆ ಕೊಂಡೊಯ್ಯಲಿದೆ ಎಂಬ ವಿಶ್ವಾಸ ತಮಗಿದೆ ಎಂದು ಹೇಳಿದರು.
ಪಕ್ಷದ ಅಧ್ಯಕ್ಷರಾಗಿ ಅವರು ಎಲ್ಲರನ್ನೂ ಒಟ್ಟುಗೂಡಿಸಿದ ವೈಖರಿ ಸಂಘಟನಾ ಸಾಮರ್ಥ್ಯ ಪಾದಯಾತ್ರೆಯಂತಹ ರಾಜಕೀಯ ತಂತ್ರಗಾರಿಕೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಚಾತುರ್ಯದ ಪರಿಣಾಮವಾಗಿ ಅವರಿಗೆ ಈ ಅವಕಾಶ ಲಭಿಸಲಿದೆ ಎಂದು ತಿ