ಬೆಂಗಳೂರು,ಜೂ.23:
ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಅವರ ಪುತ್ರ
ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಪ್ರಕರಣ ವಿಚಿತ್ರ, ವಿಕೃತ ಹಾಗೂ ಅಸಹ್ಯವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದಲ್ಲಿ ಅವರು ಏನು ಮಾಡಿದ್ದಾರೆ ಎಂಬುದು ಅವರಿಗೆಯೇ ಏನು ಅನ್ನಿಸುತ್ತಿಲ್ಲವೇ? ಕೊನೆಯ ಪಕ್ಷ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದರು.
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಪ್ರಕರಣ, ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಫೋಕ್ಸೋ ಪ್ರಕರಣ ಹಾಗೂ ಈಗಿನ ಸೂರಜ್ ಅವರ ಪ್ರಕರಣ ನೋಡಿದರೆ ಏನ್ ನಡೆಯುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ ಎಂದರು.
ದೊಡ್ಡಮನೆ- ದೊಡ್ಡವರು ಹಾಗೂ ಅಧಿಕಾರದಲ್ಲಿದ್ದವರು ಏನು ಸಂದೇಶ ಕೊಡುತ್ತಾರೆ. ಜವಾಬ್ದಾರಿ ಕುಟುಂಬಕ್ಕಾದ ಈ ಕಪ್ಪುಚುಕ್ಕೆ ಅಳಿಸಿ ಹಾಕುತ್ತೇವೆ. ಅಧಿಕಾರ ಬಿಟ್ಟಿರುತ್ತೇವೆ. ಮಾದರಿ ನಾಗರಿಕರಾಗುತ್ತೇವೆ ಎಂಬುದು ಅವರ ಸ್ವಂತ ವಿವೇಚನಗೆ ಹಾಗೂ ಆತ್ಮ ಸಾಕ್ಷಿ ಗೆ ಬಿಟ್ಟದ್ದು ಎಂದು ತಿಳಿಸಿದರು.
ಮಾತೆತ್ತಿದರೆ ನ್ಯಾಯದ ಬಗ್ಗೆ ಮಾತನಾಡುವ ಹಾಗೂ ಜಪ ಮಾಡುವ ಬಿಜೆಪಿಯವರು ಈ ಪ್ರಕರಣದಲ್ಲಿ ಸ್ಮಶಾನ ಮೌನ ಯಾಕೆ ವಹಿಸಿದ್ದಾರೆ ಎಂದು ಪ್ರಶ್ನಿಸಿದರು.