ಮುಂಬಯಿ, ಜ.19-
ಕಳ್ಳತನ ಮಾಡಲು ಬಂದು, ಅದಕ್ಕೆ ಅಡ್ಡಿಪಡಿಸಿದ
ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ ಖದೀಮನನ್ನು ಕೃತ್ಯ ಘಟನೆ ನಡೆದ 70 ಗಂಟೆಗಳ ಅವಧಿಯಲ್ಲಿ ಮುಂಬೈ ನಗರ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಮುಂಬೈ ಮಹಾನಗರ ವಿಭಾಗ-9ರ ಡಿಸಿಪಿ ದೀಕ್ಷಿತ್ ಗೆಡಾಮ್
ಬಂಧಿತ ಆರೋಪಿ ಭಾರತೀಯನಲ್ಲ ಬದಲಿಗೆ ಬಾಂಗ್ಲಾದೇಶಿ ಎಂಬ ಅನುಮಾನವಿದೆ ಎಂದು ತಿಳಿಸಿದರು.
ಬಂಧಿತನ ಬಳಿ ಆತ ಭಾರತಕ್ಕೆ ಸಂಬಂಧಿಸಿದ ಯಾವುದೇ ಆಧಾರ್ ಕಾರ್ಡ್ ಅಥವಾ ಇನ್ನಿತರೆ ದಾಖಲೆಗಳು ಪತ್ತೆಯಾಗಿಲ್ಲ. ಆತ ತನ್ನ ಪರಿಚಯವನ್ನು ವಿಜಯ್ ದಾಸ್ ಎಂದು ಹೇಳಿಕೊಂಡಿರುವುದಾಗಿ ಹೇಳಿದ್ದಾರೆ.
ಆದರೆ ಈತನ ಮೂಲ ಹೆಸರು ಬೇರೆಯದೇ ಇದೆ ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ ನಮಗಿರುವ ಮಾಹಿತಿ ಪ್ರಕಾರ ಆರೋಪಿಯ ಹೆಸರು ಮೊಹಮ್ಮದ್ ಷರೀಫುಲ್ಲಾ ಇಸ್ಲಾಂ ಶೆಹಜಾದ್ ಎಂದು ತಿಳಿಸಿದರು.
ಪ್ರಾಥಮಿಕ ವಿಚಾರಣೆ ವೇಳೆ ಆರೋಪಿಯು ತಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.ಆರೋಪಿ ಮುಂಬೈನ ಪಬ್ ಒಂದರಲ್ಲಿ ಕೆಲಸ ಮಾಡುತ್ತಿದ್ದನಂತೆ. ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದಿರುವ ಈತ ಇಲ್ಲಿ ಹೆಸರು ಬದಲಾವಣೆ ಮಾಡಿಕೊಂಡು ಓಡಾಡುತ್ತಿದ್ದ ಎಂದರು.
ಕಳೆದ ಜ.15ರ ತಡರಾತ್ರಿ ಸೈಫ್ ಅಲಿ ಖಾನ್ರ ಮುಂಬೈನ ಬಾಂದ್ರಾದ ಮನೆಗೆ ನುಗ್ಗಿದ್ದ ಆರೋಪಿ, ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದ. ಸೈಫ್ ಅಲಿ ಖಾನ್ರ ಹೊಟ್ಟೆ, ಕತ್ತು, ಬೆನ್ನಿಗೆ ಆರು ಬಾರಿ ಇರಿದಿದ್ದ ಆರೋಪಿ ಸ್ಥಳದಿಂದ ಪರಾರಿ ಆಗಿದ್ದ. ಕೂಡಲೇ ಸೈಫ್ ಅಲಿ ಖಾನ್ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೈಫ್ ಅಲಿ ಖಾನ್ ಬೆನ್ನಿನಿಂದ 2.50 ಇಂಚಿನ ಚಾಕುವನ್ನು ಹೊರತೆಗೆಯಲಾಗಿತ್ತು. ಸೈಫ್ ಅಲಿ ಖಾನ್ ಪ್ರಾಣಾಪಾಯದಿಂದ ಪಾರಾಗಿದ್ದು ಈಗ ಚೇತರಿಕೆಯ ಹಾದಿಯಲ್ಲಿದ್ದಾರೆ. ಇಂದೇ ಸೈಫ್ ಅಲಿ ಖಾನ್ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ
Previous Articleಸಮೂಹ ಶಕ್ತಿ ಸಮಾಜ ಸೇವೆಗೆ ಬಹುಪರಾಕ್
Next Article ಕಾಂತಾರ -2 ವಿರುದ್ಧ ಗಂಭೀರ ಆರೋಪ