ನವದೆಹಲಿ:
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ತಮ್ಮ ಗೆಳೆಯ ಜಹೀರ್ ಇಕ್ಬಾಲ್ ಅವರ ಕೈ ಹಿಡಿದಿದ್ದಾರೆ.ಅತ್ಯಂತ ಸರಳವಾಗಿ ನಡೆದ ವಿವಾಹ ಸಮಾರಂಭದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತ ಬಳಗ ಮಾತ್ರ ಭಾಗಿಯಾಗಿದ್ದರು.
ಈ ಮದುವೆಗೆ ಸೋನಾಕ್ಷಿ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಆದರೂ ಹಟ ಹಿಡಿದು ಎಲ್ಲರನ್ನೂ ಒಪ್ಪಿಸಿದ ಸೋನಾಕ್ಷಿ ಸಿನ್ಹಾ ತಾವು ಅಂದುಕೊಂಡ ರೀತಿಯಲ್ಲಿ ಮದುವೆಯಾಗುವ ಮೂಲಕ ಜೀವನ ಪಯಣದ ಮತ್ತೊಂದು ಇನ್ನಿಂಗ್ಸ್ ಆರಂಭಿಸಿದ್ದಾರೆ.
ಬಂದಿದ್ದವು.
ಸೋನಾಕ್ಷಿ ಮತ್ತು ಇಕ್ಬಾಲ್ 2022ರಲ್ಲಿ ಬಿಡುಗಡೆಯಾದ ‘ಡಬಲ್ ಎಕ್ಸ್‌ಎಲ್’ ಚಿತ್ರದಲ್ಲಿ ನಟಿಸಿದ್ದರು. ಆಗಿನಿಂದ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೋನಾಕ್ಷಿ ಸಿನ್ಹಾ ಅವರ ತಂದೆ ಶತೃಘ್ನ ಸಿನ್ಹಾ, ಎಲ್ಲ ಮದುವೆಗಳಲ್ಲಿ ಮದುವೆ ಮೊದಲು ಅನೇಕ ಒತ್ತಡಗಳು ಇರುವುದು ಸಹಜ. ಹಾಗೇ ನಮ್ಮಲ್ಲೂ ಇತ್ತು. ಸದ್ಯ ಅದೆಲ್ಲ ತಿಳಿಯಾಗಿದ್ದು ಮದುವೆಯಲ್ಲಿ ನಾವೆಲ್ಲ ಭಾಗಿಯಾಗುತ್ತಿದ್ದೇವೆ ಎಂದು ಹೇಳಿದ್ದಾರೆ.
ಸೋನಾಕ್ಷಿ ಮದುವೆ ಬಗ್ಗೆ ನಾನೇನು ಹೇಳಿರಲಿಲ್ಲ. ಕೆಲ ಮಾಧ್ಯಮಗಳೇ ಊಹೆ ಮಾಡಿಕೊಂಡು ವರದಿ ಮಾಡಿವೆ. ಅದೆಲ್ಲ ಸಹಜ. ಏನೇ ಸಮಸ್ಯೆ ಇದ್ದರೂ ಅದೆಲ್ಲ ಈಗ ಬಗೆಹರಿದಿದೆ ಎಂದು ಹೇಳಿಕೊಂಡಿದ್ದಾರೆ.
Previous ArticleAgro startup ಗಳಿಗೆ ಸರ್ಕಾರದ ಪ್ರೋತ್ಸಾಹ.
Next Article ಪೋಕ್ಸೋ ಪ್ರಕಣರಣ:ದೇವರ ಮೊರೆ ಹೊಕ್ಕ ಯಡಿಯೂರಪ್ಪ.
1 Comment
промокод на продамус https://promokod-prod.ru/ .