ಬೆಂಗಳೂರು,ಆ.15- ಮನೆಯೊಂದರಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು ಓರ್ವ ಬಾಲಕ ಸಾವನ್ನಪ್ಪಿ 12 ಮಂದಿ ಗಾಯಗೊಂಡಿರುವ ಆತಂಕಕಾರಿ ಘಟನೆ ಆಡುಗೋಡಿಯ ಚಿನ್ನಯ್ಯನಪಾಳ್ಯದ ಶ್ರೀರಾಮ ಕಾಲೋನಿಯಲ್ಲಿ ನಡೆದಿದೆ.
ಗಂಭೀರ ಗಾಯಗೊಂಡಿದ್ದ ಮುಬಾರಕ್(8) ಮೃತ ಬಾಲಕನಾಗಿದ್ದಾನೆ,
ಗಾಯಗೊಂಡಿರುವ ಕಸ್ತೂರಮ್ಮ(35), ಸರಸಮ್ಮ(50), ಶಬೀರನಾ ಬಾನು(35), ಸುಬ್ರಮಣಿ(62), ಶೇಖ್ ನಜೀದ್ ಉಲ್ಲಾ(37), 8 ವರ್ಷದ ಬಾಲಕಿ ಫಾತಿಮಾ ಸೇರಿ 12 ಮಂದಿಯನ್ನು ಸಂಜಯ್ಗಾಂಧಿ ಮತ್ತು ಜಯನಗರ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರಲ್ಲಿ ನಾಲ್ವರು ಸ್ಥಿತಿ ಚಿಂತಾಜನಕವಾಗಿದೆ.
ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಮನೆಯ ಗೋಡೆ ಮತ್ತು ಛಾವಣಿ ಕುಸಿದು ಬಿದ್ದಿದೆ. ಮೊದಲ ಮಹಡಿಯ ಮನೆಯು ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಎಂಟಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.
ಗಾಯಾಳು ಕಸ್ತೂರಿಯ ಮನೆಯಲ್ಲಿ ಸ್ಫೋಟ ಸಂಭವಿಸಿದೆ. ಕಸ್ತೂರಿಗೆ 8 ವರ್ಷದ ಕಯಾಲ್ ಎಂಬ ಹೆಣ್ಣು ಮಗುವಿದೆ. ವಿಕ್ಟೋರಿಯಾ ಬರ್ನಿಂಗ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ಮುಬಾರಕ್ ಬಾಲಕನ ಪಕ್ಕದ ಮನೆಯಲ್ಲಿ ಕಸ್ತೂರಿ ವಾಸವಿದ್ದರು.
ಸ್ಫೋಟದ ತೀವ್ರತೆಗೆ ಮೊದಲನೇ ಮಹಡಿಯ ಮನೆ ಗೋಡೆ ಛಾವಣಿ ಕುಸಿದು ಬಿದ್ದಿದೆ. 8ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಉಂಟಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿರುವ ಆಡುಗೋಡಿ ಠಾಣೆ ಪೊಲೀಸರು ಮೇಲ್ನೋಟಕ್ಕೆ ಸಿಲಿಂಡರ್ ಸ್ಟೋಟ ಸಂಭವಿಸಿರಬಹುದು ಎನ್ನತ್ತಿದ್ದಾರೆ.
ಇದೇ ನಗರದ ಸಾಕಷ್ಟು ಜನರು ಬೆಳಗ್ಗೆಯೇ ಲಾಲ್ ಬಾಗ್‌ನಲ್ಲಿ ಕೆಲಸಕ್ಕೆ ಹೋಗುತ್ತಾರೆ. ಒಂದು ವೇಳೆ ಇಂದು ಕೆಲಸಕ್ಕೆ ಹೋಗದೆ ಇದ್ದಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು. ಸಿಲಿಂಡರ್ ಬ್ಲಾಸ್ಟ್ ಆಗಿರುವ ಸಾಧ್ಯತೆ ಕಡಿಮೆ ಅಂತ ಸ್ಥಳಿಯರು ಹೇಳುತ್ತಿದ್ದು, ತುಂಬಾ ದೊಡ್ಡ ಬ್ಲಾಸ್ಟ್ ಆಗಿದೆ. ಕೆಲವರ ಕೈ ಮತ್ತು ತಲೆ ಹೋಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಸದ್ಯ ಸ್ಫೋಟಗೊಂಡಿರುವ ಮನೆ ಸುತ್ತ ಮುತ್ತಲಿನ ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ.
ಸಿಲಿಂಡರ್ ಸ್ಪೋಟವಾಗಿರುವ ಸಾಧ್ಯತೆ ಕಡಿಮೆ. ತುಂಬಾ ದೊಡ್ಡ ಸ್ಪೋಟವಾಗಿದೆ. ಕೆಲವರ ಕೈ ಮತ್ತು ತಲೆ ಹೋಗಿದೆ.ಇದೇ ನಗರದ ಅನೇಕ ಜನರು ಲಾಲ್ ಬಾಗ್‌ನಲ್ಲಿ ಕೆಲಸ ಮಾಡುತ್ತಾರೆ. ಒಂದು ವೇಳೆ ಇಂದು ಕೆಲಸಕ್ಕೆ ಹೋಗದೆ ಇದ್ದಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು ಎಂದು ಸ್ಥಳೀಯರೊಬ್ಬರು ಹೇಳಿದರು.
ಆತಂಕಕ್ಕೊಳಗಾಗಿರುವ ಜನರು ನಾನು ಕೆಳಗಡೆ ಮಲಗಿದ್ದೆ. ಎಂಟು ಕಾಲಿಗೆ ದೊಡ್ಡ ಸೌಂಡ್ ಬಂತು ಕಲ್ಲುಗಳು ಬಿದ್ದವು. ಸ್ಫೋಟಗೊಂಡ ಮನೆಗೆ ನಮಗೆ ನಾಲ್ಕಡಿ ದೂರ ಇದೆ. ಬೀರು, ಶೀಟು ಎಲ್ಲವೂ ಬ್ಲಾಸ್ಟ್‌ಗೆ ಮೇಲೋಗಿದೆ. ಮೂರು ಸಲ ಬ್ಲಾಸ್ಟ್ ಆದ ಶಬ್ಧ ಕೇಳಿಸಿತು. ಕೈಕಾಲು ಆಡ್ತಾನೆ ಇಲ್ಲ. ಏನಾಗಿದೆ ಎಂದೆ ತಿಳಿಯುತ್ತಿಲ್ಲ ಎಂದು ಸ್ಥಳೀಯರು ಭಯಭೀತರಾಗಿದ್ದಾರೆ
Previous Articleಶಿವಕುಮಾರ್ ಕಾಂಗ್ರೆಸ್ಸಿಗರಿಗೆ ಕೊಟ್ಟ ಕರೆ
Next Article ಮಲಗಿದ್ದಲ್ಲೇ ಸುಟ್ಟು ಕರಕಲಾದರು

3 Comments
https://888starz.net.co/
888Starz Colombia es un casino en linea y casa de apuestas deportivas que reune mas de 9.500 juegos, incluyendo maquinas tragamonedas, ruletas y mesas con croupier real junto a una variada seleccion de disciplinas deportivas que va desde la Liga BetPlay hasta la UEFA Champions League y las competiciones de esports.
https://sportium.net.co/
Sportium Colombia e um casino e uma casa de apostas esportivas pela internet que atua dentro da lei amparado pela licenca da Coljuegos, resultado da alianca entre CIRSA e Ladbrokes desde 2007. Apresenta uma estrutura confiavel e abrangente onde os jogadores colombianos podem desfrutar a apostas em futebol ate caca-niqueis e cassino ao vivo com atendentes reais, tudo em um mesmo sitio.
https://miamifightcard.com/
For MediaFightCard, the betting odds highlight a intriguing dynamic with champions listed as the ‘dogs and opponents boasting favorite status. In the marquee matchup for the available light heavyweight title, ex-titleholder Jiri Prochazka debuted as a modest -143 favorite over the surging Carlos Ulberg, who is priced at a +116 underdog even with his nine-fight winning streak.