ಹುಬ್ಬಳ್ಳಿ :ಇಲ್ಲಿವರೆಗೂ ನಾವು ಅನ್ಕೊಂಡಿದ್ದು ಹಾಗೆ. ಕಲೆಗೆ ಬೆಲೆ ಕಟ್ಟೋಕೆ ಆಗಲ್ಲ. ಮುಖ್ಯವಾಗಿ ಅದಕ್ಕೊಂದು ಭಾಷೆ ಚೌಕಟ್ಟು ಹಾಕೋಕು ಆಗಲ್ಲ. ಕಲೆ ಎನ್ನುವುದು ಭಾಷೆಗಳಿಗಿಂತ ಭಾವನೆಗ ಮೇಲೆ ಅವಲಂಭಿತವಾಗಿರುತ್ತದೆ. ಆದರೆ ಇತ್ತಿಚೆಗೆ ಕೆಲವು ದಿನಗಳಿಂದ ನಟ ಸುದೀಪ್ ಹಾಗು ಬಾಲಿವುಡ್ ನಟ ಅಜಯ್ ದೇವಗನ್ ಮಧ್ಯೆ ಭಾಷಾ ವಿಚಾರಕ್ಕೆ ಟ್ವೀಟ್ ಸಮರ ನಡೆದಿದೆ. ಇದಕ್ಕೆ ಈಗಾಗಲೇ ನಟ ಸುದೀಪ್ ಅಭಿಪ್ರಾಯಕ್ಕೆ ಬಹಳಷ್ಟು ಜನ ಬೆಂಬಲ ಸೂಚಿಸಿದ್ದಾರೆ.
ಭಾಷೆ ಇಲ್ಲದ ಭಾವನಾತ್ಮಕ ಚಿತ್ರಣವೇ ಈ ಸಿನಿಮಾ. ಇಲ್ಲಿ ಯಾವುದೇ ರೀತಿಯಲ್ಲಿ ವಿವಾದಾತ್ಮಕ ವಿಷಯಗಳನ್ನು ಹುಟ್ಟು ಹಾಕುವುದು ಸರಿಯಲ್ಲ. ಪ್ರತಿಯೊಂದು ಪ್ರಾಂತ್ಯದಲ್ಲಿಯೂ ಭಾಷೆಗಳು ತಮ್ಮದೇ ಆದ ಮಹತ್ವವನ್ನು ಪಡೆದುಕೊಂಡಿವೆ. ಯಾವುದೇ ಒಂದು ಭಾಷೆಯನ್ನು ಮತ್ತೊಂದು ಬಾಷೆಯ ಮೇಲೆ ಹೇರಿಕೆ ಮಾಡುವುದು ಸರಿಯಲ್ಲ.
ಸಿನೆಮಾಗಳಿಗೆ ಯಾವುದೇ ಭಾಷೆಗಳಿಲ್ಲ, ನಟರು ಈ ವಿಚಾರಕ್ಕೆ ಹೋಗಬಾರದು. ಸಿನೆಮಾ ಅನ್ನೊದು ಭಾವನಾತ್ಮಕ ಸಂಬಂಧ ಇರುವ ಕ್ಷೇತ್ರ. ಎಲ್ಲಾ ಪ್ರಾದೇಶಿಕ ಭಾಷೆಗಳಿಗೆ ಅದರದೆ ಆದ ಸ್ಥಾನ ಮಾನಗಳು ಇರುತ್ತವೇ. ಹಿಂದಿ ಹೆರಿಕೆ ಒತ್ತಡ ತಂತ್ರ ಸರಿಯಲ್ಲ ಎನ್ನುವುದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅಭಿಪ್ರಾಯವಾಗಿದೆ.
Previous Articleಕಮಲಿ ಸೀರಿಯಲ್ ನಿರ್ದೇಶಕ ಅರವಿಂದ್ ಕೌಶಿಕ್ ಅರೆಸ್ಟ್
Next Article ಬರಡಾದ ಧರ್ಮರಾಜಕಾರಣದ ಹಸು..