ಬೆಂಗಳೂರು,ಜ.19-ನಗರದಲ್ಲಿ ಸೈಬರ್ ಅಪರಾಧ ಪ್ರಕರಣಗಳು ದಿನದಿನಕ್ಕೆ ಹೆಚ್ಚುತ್ತಿದ್ದು,ಸಾಕಷ್ಟು ಜಾಗೃತಿಯ ನಡುವೆಯೂ ಸೈಬರ್ ವಂಚಕರು ಹೊಸ ಹೊಸ ಮಾರ್ಗಗಳ ಮುಖಾಂತರ ವಂಚನೆ ನಡೆಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ನಗರದ ಸಾಫ್ಟ್ವೇರ್ ಇಂಜಿನಿಯರ್ ರೊಬ್ಬರಿಗೆ ಹೊಸ ಮೊಬೈಲ್ ಕಳಿಸಿ, ಅದರ ಮೂಲಕ ಹೊಸ ಸಂಚು ಹೊಡಿರುವ
ಸೈಬರ್ ವಂಚಕರು 2.80 ಕೋಟಿ ರೂ. ದೋಚಿದ್ದಾರೆ.
ನಗರದ ಟೆಕ್ಕಿಯೊಬ್ಬರ ವಿಳಾಸಕ್ಕೆ ಸೈಬರ್ ವಂಚಕರು ನೀವು ಹೊಸ ಸಿಮ್ ಖರೀದಿ ಮಾಡಿದ್ದೀರಾ ಅದಕ್ಕಾಗಿ ಉಡುಗೊರೆ ಎಂದು ಮೊಬೈಲ್ ಕಳುಹಿಸಿದ್ದರು. ಉಡುಗೊರೆ ಸ್ವೀಕರಿಸಿದ ಟೆಕ್ಕಿ ಸಿಮ್ನ್ನು ಮೊಬೈಲ್ನಲ್ಲಿ ಹಾಕಿದ್ದಾರೆ.
ಸಿಮ್ ಹಾಕಿದ ಕೆಲವೇ ಗಂಟೆಗಳಲ್ಲಿ ಟೆಕ್ಕಿ ಖಾತೆಯಲ್ಲಿದ್ದ 2.80 ಕೋಟಿ ರೂ. ಅನ್ನು ಸೈಬರ್ ಖದೀಮರು ತಮ್ಮ ಖಾತೆಗೆ ಜಮಾವಣೆ ಮಡಿಕೊಂಡಿದ್ದಾರೆ.
ವಿವರ ಸಿಕ್ಕಿದ್ದು ಹೇಗೆ?
ಸೈಬರ್ ವಂಚಕರು ಮೊಬೈಲ್ನಲ್ಲಿ ಮೊದಲೇ ಕೆಲವು ಆ್ಯಪ್ಗಳನ್ನು ಇನ್ಸ್ಟಾಲ್ ಮಾಡಿದ್ದರು. ಟೆಕ್ಕಿ ಮೊಬೈಲ್ಗೆ ಸಿಮ್ ಹಾಕುತ್ತಿದ್ದಂತೆ, ಹಲವು ಸಂದೇಶಗಳು ಬಂದಿವೆ. ಈ ಮೊಬೈಲ್ಗೆ ಬರುವ ಸಂದೇಶಗಳು ಮತ್ತು ಒಟಿಪಿಗಳು ತಮಗೂ ಬರುವಂತೆ ವಂಚಕರು ಸೆಟ್ ಮಾಡಿದ್ದರು. ಸಂದೇಶಗಳು ಮತ್ತು ಒಟಿಪಿ ಮೂಲಕ ಟೆಕ್ಕಿಯ ಬ್ಯಾಂಕ್ ಖಾತೆ ಮಾಹಿತಿ ಪಡೆದಿದ್ದಾರೆ.
ನಂತರ ಟೆಕ್ಕಿಯ ಬ್ಯಾಂಕ್ ಅಕೌಂಟ್ ಸೇರಿ ಎಲ್ಲವನ್ನು ಪರಿಶೀಲಿಸಿದ್ದಾರೆ. ಕೊನೆಗೆ ಬ್ಯಾಂಕ್ ಎಫ್ಡಿಯಲ್ಲಿ ಇಟ್ಟಿದ್ದ 2.80 ರೂ. ಅನ್ನು ಖದೀಮರು ಎಗರಿಸಿದ್ದಾರೆ. ವೈಟ್ಫೀಲ್ಡ್ ಸೆನ್ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Previous Articleಕಮೀಷನರ್ ನೈಟ್ ರೌಂಡ್ಸ್
Next Article ರಾಜ್ಯ ಸರ್ಕಾರಕ್ಕೆ ಅಶೋಕ್ ಹಾಕಿದ ಪ್ರಶ್ನೆಗಳಿವು