ಬೆಂಗಳೂರು:
ಕಳೆದ ಹತ್ತು ವರ್ಷಗಳ ಹಿಂದೆ ಮಹಿಳಾ ಸಬಲೀಕರಣ ಪಕ್ಷ ಎಂಬ ರಾಜಕೀಯ ಪಕ್ಷ ಸ್ಥಾಪನೆ ಮಾಡಿ ಮುಸ್ಲಿಂ ಮತ ಗಿಟ್ಟಿಸುವ ಪ್ರಯತ್ನ ನಡೆಸಿದ್ದ ಉದ್ಯಮಿ ನೌಹೆರಾ ಶೇಕ್ ಇದೀಗ ಜನ ಸಾಮಾನ್ಯರನ್ನು ವಂಚಿಸಿದ ಆರೋಪದಲ್ಲಿ ಸಿಲುಕಿದ್ದಾರೆ.
ಬ್ಯಾಂಕ್‌ಗಳಿಗಿಂತ ಅಧಿಕ ಬಡ್ಡಿ ನೀಡುವುದಾಗಿ ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಸಿಕೊಂಡು, ಮರು ಪಾವತಿಸದೆ ವಂಚಿಸಿದ ಪ್ರಕರಣದ ಆರೋಪಿ ನೌಹೆರಾ ಶೇಕ್ ಹಾಗೂ ಹೀರಾ ಗ್ರೂಪ್‌ನ ಒಡೆತನದ 27 ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಜಪ್ತಿ ಮಾಡಿದೆ.
ಆಸ್ತಿಯ ಪ್ರಸ್ತುತ ಮಾರುಕಟ್ಟೆ ಮೌಲ್ಯ 103.4 ಕೋಟಿ ಎಂದು ಅಂದಾಜಿಸಲಾಗಿದೆ.
ಐಎಂಎ, ಆ್ಯಂಬಿಡೆಂಟ್ ಕಂಪನಿಗಳ ಹಗರಣದ ಮಾದರಿಯಲ್ಲೇ ಬ್ಯಾಂಕ್ಗಳಿಗಿಂತ ಅಧಿಕ ಬಡ್ಡಿ ನೀಡುವುದಾಗಿ ಆಮಿಷವೊಡ್ಡಿದ್ದ ಹೀರಾ ಗೋಲ್ಡ್ ಕಂಪೆನಿ ಕರ್ನಾಟಕ, ಕೇರಳ, ಮಹಾರಾಷ್ಟ್ರ ತೆಲಂಗಾಣ, ದೆಹಲಿ ಸೇರಿದಂತೆ ಅನೇಕ ರಾಜ್ಯಗಳಲ್ಲಿ ನೂರಾರು ಸಾರ್ವಜನಿಕರಿಗೆ ವಂಚಿಸಿತ್ತು ಎಂದು ಇ.ಡಿ ತಿಳಿಸಿದೆ.
ಹೀರಾ ಗೋಲ್ಡ್ ಕಂಪನಿಯ ಮುಖ್ಯಸ್ಥೆಯಾಗಿದ್ದ ನೌಹೆರಾ ಶೇಕ್, ಆಲ್ ಇಂಡಿಯಾ ಮಹಿಳಾ ಎಂಪವರ್ಮೆಂಟ್ ಪಾರ್ಟಿ ಹೆಸರಿನಲ್ಲಿ ಪಕ್ಷ ಸ್ಥಾಪಿಸಿ 2018ರಲ್ಲಿ ಕರ್ನಾಟಕ ವಿಧಾನಸಭಾ Electionಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು.ಖಾಸಗಿ ಟೀವಿ ಚಾನಲ್ ಸ್ಥಾಪನೆ ಸೇರಿ ಹಲವಾರು ಸಾಹಸಗಳ ಮೂಲಕ ಗಮನ ಸೆಳೆದಿದ್ದರು.
Previous Articleಡಿನ್ನರ್ ಪಾಲಿಟಿಕ್ಸ್ ನ ವಿವಾದ
Next Article ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಇದೇ ಕಾರಣ