ನವದೆಹಲಿ: ಕೇಂದ್ರ ಸರ್ಕಾರ 1998ರ ಮೋಟಾರು ವಾಹನ ಕಾಯ್ದೆಯನ್ನು ನವೀಕರಿಸಿದ್ದು, ಸರಿಯಾಗಿ ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರು 2 ಸಾವಿರ ರೂ.ವರೆಗೆ ದಂಡ ಪಾವತಿಸಬೇಕಾಗುತ್ತದೆ.
ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಹೊಸ ನಿಯಮವನ್ನು ಜಾರಿಗೊಳಿಸಿದೆ.
ದ್ವಿಚಕ್ರ ವಾಹನ ಸವಾರ ಹೆಲ್ಮೆಟ್ ಧರಿಸಿದ್ದರೂ ಬಕಲ್ ಬಿಚ್ಚಿದರೆ ರೂ 1,000 ದಂಡ ವಿಧಿಸಲಾಗುತ್ತದೆ. ಹೆಲ್ಮೆಟ್‌ಗೆ BIS (ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್) ಪ್ರಮಾಣೀಕರಣ/ಗುರುತು ಇಲ್ಲದಿದ್ದರೆ 1,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಸವಾರರು ಹೆಲ್ಮೆಟ್ ಧರಿಸಿದ್ದರೂ ಕೆಂಪು ದೀಪವನ್ನು ಜಂಪ್ ಮಾಡುವುದು ಮುಂತಾದ ಇತರ ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ 2,000 ರೂ.ದಂಡ ವಿಧಿಸುವಂತೆ ಹೊಸ ನಿಯಮದಲ್ಲಿ ಸೂಚಿಸಲಾಗಿದೆ.
Previous Articleಗಗನಕ್ಕೇರುತ್ತಿರುವ ತರಕಾರಿ ಬೆಲೆಗಳು!
Next Article ಯೂಟ್ಯೂಬ್ ನೋಡಿ ಏನೆಲ್ಲಾ ಮಾಡ್ತಾರೆ..?