ಬೆಂಗಳೂರು,ಆ.19-
ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಷ್ಠಿತ ಉದ್ಯಮ ಸಂಸ್ಥೆಗಳು ತಮ್ಮ ಸಾರ್ವಜನಿಕ ಹೊಣೆಗಾರಿಕೆ ನಿಧಿ ಬಳಸಿ ರಾಜ್ಯ 2000 ಸರ್ಕಾರಿ ಶಾಲೆಗಳನ್ನು ಅಭಿವೃದ್ದಿಪಡಿಸಲು ತೀರ್ಮಾನಿಸಲಾಗಿದೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶಿಕ್ಷಣ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಖಾಸಗಿ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಉನ್ನತ ಮಟ್ಟದ ಸಭೆ ನಡೆಯಿತು ಈ ಸಭೆಯಲ್ಲಿ ರಾಜ್ಯದ 2000 ಶಾಲೆಗಳನ್ನು ಅಭಿವೃದ್ಧಿಪಡಿಸುವ ಒಪ್ಪಂದಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಉದ್ಯಮ ಸಂಸ್ಥೆಗಳ ಪ್ರತಿನಿಧಿಗಳು ಸಹಿ ಹಾಕಿದರು.
ಈ ವೇಳೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ರಾಜ್ಯದಲ್ಲಿರುವ ಎರಡು ಸಾವಿರ ಸರ್ಕಾರಿ ಶಾಲೆಗಳ ಪೈಕಿ ಉದ್ಯಮಿಗಳು ಯಾವುದೇ ಶಾಲೆಯನ್ನು ಆಯ್ಕೆ ಮಾಡಿಕೊಂಡು ಅಭಿವೃದ್ಧಿಪಡಿಸಬಹುದು ಎಂದು ಹೇಳಿದರು.
ರಾಜ್ಯದಲ್ಲಿ 43 ದೊಡ್ಡ ಕಂಪನಿಗಳು 4 ಲಕ್ಷ ಕೋಟಿಗೂ ಹೆಚ್ಚಿನ ಲಾಭದಲ್ಲಿವೆ. ಲಾಭದಲ್ಲಿ 8063 ಕೋಟಿ ಸಿಎಸ್‌ಆರ್ ಫಂಡ್ ನೀಡುತ್ತಿವೆ,. ಅದರಲ್ಲಿ ಒಂದು ಪೈಸೆಯನ್ನೂ ನಮಗೆ ನೀಡದೇ ನೇರವಾಗಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬಳಸಬಹುದಾಗಿದೆ ಎಂದರು.
ಗ್ರಾಮೀಣ ಭಾಗದಲ್ಲಿಯೂ ನಗರದಲ್ಲಿ ಸಿಗುವ ಗುಣಮಟ್ಟದ ಶಿಕ್ಷಣ ಸಿಗಬೇಕುಸರ್ಕಾರಿ ಶಾಲೆಗಳನ್ನು ನಿಮ್ಮ ಮಕ್ಕಳಂತೆ ನೋಡಿಕೊಳ್ಳಿ ಎಂದರು. ಜಗತ್ತಿನ ಯಾವುದೇ ಅಂತಾರಾಷ್ಟ್ರೀಯ ಕಂಪನಿಗಳ ಎರಡನೇ ಹುದ್ದೆ ಭಾರತೀಯರದ್ದೇ ಆಗಿದ್ದು, ಅಷ್ಟು ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ನಮ್ಮ ಮಕ್ಕಳು ಜಗತ್ತಿನ ಪೈಪೋಟು ಎದುರಿಸಬೇಕು. ಇದರಿಂದ ಉತ್ತಮ ಗುಣಮಟ್ಟದ ಶಿಕ್ಷಣ ಅಗತ್ಯವಿದೆ. ಅದಕ್ಕಾಗಿಯೇ ನಾವು ಸಿಎಸ್‌ಆರ್ ನಿಧಿಯನ್ನು ಮೂರ್ನಾಲ್ಕು ವರ್ಷ ಪೂರ್ಣ ಪ್ರಮಾಣದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ವಿನಿಯೋಗಿಸಲು ಸೂಚಿಸಿದ್ದೇವೆ ಎಂದು ಅವರು ಹೇಳಿದರು.
ಮೂರ್ನಾಲ್ಕು ವರ್ಷ ಸಿಎಸ್‌ಆರ್ ನಿಧಿ ಪ್ರಾಥಮಿಕ ಶಿಕ್ಷಣ ಇಲಾಖೆಗೇ ನೀಡಬೇಕು. ಮುಂದೆ ಆರೋಗ್ಯ ಸೇರಿ ಇತರ ಇಲಾಖೆಗೆ ಆಧ್ಯತೆ ನೀಡೋಣ. ಇದು ದೇಶಕ್ಕೆ ದೊಡ್ಡ ಮಾದರಿಯಾದ ವ್‌ಯವಸ್ಥೆ ಆಗಲಿದೆ. ಬಲಿಷ್ಠ ಸರ್ಕಾರ ರಚನೆಗೆ ನೀವೆಲ್ಲಾ ಅವಕಾಶ ನೀಡಿದ್ದೀರಿ. ನಾನು ಡಿಸಿಎಂ ಆಗಿ ಸರ್ಕಾರದ ಮಟ್ಟದಿಂದ ನಿಮ್ಮ ಯಾವುದೇ ಸಮಸ್ಯೆ ಪರಿಹರಿಸಿವ ಭರವಸೆ ನೀಡುತ್ತಿದ್ದೇನೆ. ಸಮಸ್ಯೆಗಳಿದ್ದರೆ ಹೇಳಿ ಎಂದು ಕಂಪನಿಗಳಿಗೆ ಭರವಸೆ ನೀಡಿದರು
Previous Articleನಾನೇನೂ ತಪ್ಪು ಮಾಡಿಲ್ಲ
Next Article ನವರಂಗಿ ಸ್ವಾಮಿ ವಿರುದ್ಧ ಕ್ರಮ ಯಾಕಿಲ್ಲ..?