ಬೆಂಗಳೂರು, ಫೆ.8 – ರಾಜ್ಯದಲ್ಲಿ ಲೋಕಸಭೆ Electionಯ (Lok Sabha 2024) ಕಾವು ನಿಧಾನವಾಗಿ ತೀವ್ರಗೊಳ್ಳುತ್ತಿದೆ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆ ಹಾಗೂ ಚುನಾವಣಾ ಕಾರ್ಯ ತಂತ್ರದ ಕುರಿತಂತೆ ಸತತ ಸಮಾಲೋಚನೆಯಲ್ಲಿ ತೊಡಗಿವೆ.
ಚುನಾವಣೆಯಲ್ಲಿ ಕಣಕ್ಕಿಳಿಯಲು ಬಯಸಿರುವ ಘಟಾನುಘಟಿ ನಾಯಕರು ಟಿಕೆಟ್ ಗಿಟ್ಟಿಸಿಕೊಳ್ಳಲು ಪ್ರಯತ್ನ ನಡೆಸಿರುವ ಬೆನ್ನಲ್ಲೇ ಟೈಂಸ್ ನೌ ಸಹಯೋಗದಲ್ಲಿ ಮ್ಯಾಟ್ರಿಜ್ ನ್ಯೂಸ್ ಕಮ್ಯುನಿಕೇಷನ್ ಸಂಸ್ಥೆ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ವರದಿ ಬಹಿರಂಗಗೊಂಡಿದೆ ಸಮೀಕ್ಷೆಯ ಫಲಿತಾಂಶ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಆಘಾತ ನೀಡಿದೆ.
ಈ ವರದಿಯಲ್ಲಿ ಕರ್ನಾಟಕ ಮತ್ತೊಮ್ಮೆ ಬಿಜೆಪಿಯ ದಕ್ಷಿಣ ಭಾರತದ ಹೆಬ್ಬಾಗಿಲು ಎಂಬುದು ಸಾಬೀತಾಗಿದೆ.
ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ಸೇರಿದಂತೆ ಸರ್ಕಾರದ ಜನಪ್ರಿಯ ಕಾರ್ಯಕ್ರಮಗಳು ಕಾಂಗ್ರೆಸ್ ನ ಕೈ ಹಿಡಿಯುವಲ್ಲಿ ವಿಫಲವಾಗಿದೆ ಎಂದು ಹೇಳುತ್ತದೆ ಸಮೀಕ್ಷಾ ವರದಿ.
ಅಭ್ಯರ್ಥಿಗಳ ಆಯ್ಕೆಗೂ ಮುನ್ನ ನಡೆದಿರುವ ಈ ಸಮೀಕ್ಷೆಯಲ್ಲಿ ಸ್ಥಳೀಯ ಸಮಸ್ಯೆಗಳು ಮತ್ತು ಕೇಂದ್ರದಲ್ಲಿ ಸ್ಥಿರ ಸರ್ಕಾರ ಕುರಿತಂತೆ ಕೇಳಲಾದ ಪ್ರಶ್ನೆಗಳಿಗೆ ಮತದಾರರು ಉತ್ತರ ನೀಡಿದ್ದಾರೆ ಆ ಉತ್ತರದ ಅಂಶಗಳನ್ನು ಆಧರಿಸಿ ಈ ಚುನಾವಣೆಯಲ್ಲಿ ಗೆಲ್ಲಬಹುದಾದ ಸ್ಥಾನಗಳ ಕುರಿತು ಲೆಕ್ಕಾಚಾರ ಹಾಕಲಾಗಿದೆ.
ಬಿಜೆಪಿಗೆ ಪ್ರಮುಖವಾಗಿ ಅಯೋಧ್ಯೆಯಲ್ಲಿನ ರಾಮ ಮಂದಿರ ಲೋಕಾರ್ಪಣೆ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಕ್ರಿಯವಾಗಿರುವುದು ಸಾಕಷ್ಟು ಬಲತಂದು ಕೊಟ್ಟಿದೆ ಅದರ ಜೊತೆಯಲ್ಲಿ ದಕ್ಷಿಣ ಕರ್ನಾಟಕದ ಕ್ಷೇತ್ರಗಳಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಜೊತೆಗಿನ ಮೈತ್ರಿ ಬಿಜೆಪಿಯ ಶೇಕಡವಾರು ಮತ ಗಳಿಕೆಯ ಪ್ರಮಾಣದಲ್ಲಿ ಹೆಚ್ಚಳ ವಾಗುವಂತೆ ಮಾಡಿದೆ ಎಂದು ಸಮೀಕ್ಷೆ ವಿವರಿಸಿದೆ
ಈ ಚುನಾವಣೆಯಲ್ಲಿ ಬಿಜೆಪಿ ಶೇಖರ 46.2ರಷ್ಟು ಮತಗಳಿಸುವ ಮೂಲಕ 21 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಅದೇ ರೀತಿ ಕಾಂಗ್ರೆಸ್ ಪಕ್ಷ 42.3ರಷ್ಟು ಮತ ಗಳಿಸುವ ಮೂಲಕ 5 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ 8.4 ರಷ್ಟು ಮತ ಗಳಿಸುವ ಜೆಡಿಎಸ್ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ಎಲ್ಲಿ ತಿಳಿಸಲಾಗಿದೆ.
ಕಳೆದ ಚುನಾವಣೆಯ ಸಮಯದಲ್ಲಿ ತಮ್ಮ ಸಂಸ್ಥೆ ನೀಡಿದ ಸಮೀಕ್ಷೆಯ ವರದಿ ಸತ್ಯಕ್ಕೆ ಸನಿಹವಾಗಿತ್ತು ಅಲ್ಲದೆ ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶದ ಕುರಿತಂತೆಯು ತಮ್ಮ ಸಂಸ್ಥೆ ನಡೆಸಿದ ಸಮೀಕ್ಷೆ ನಿಜವಾಗಿದೆ ಅಲ್ಲಿ ಅನುಸರಿಸಿದ ಲೆಕ್ಕಾಚಾರ ಮತ್ತು ಮಾರ್ಗಸೂಚಿಗಳನ್ನೇ ಈ ಸಮೀಕ್ಷೆಯ ಸಮಯದಲ್ಲೂ ಅನುಸರಿಸಲಾಗಿದ್ದು ಸದ್ಯದ ಪರಿಸ್ಥಿತಿಯಲ್ಲಿ ಇದು ಸ್ಪಷ್ಟ ಚಿತ್ರಣ ನೀಡುತ್ತದೆ ಎಂದು ಮ್ಯಾಟ್ರಿಜ್ ನ್ಯೂಸ್ ಕಮ್ಯುನಿಕೇಷನ್ ಸಂಸ್ಥೆ ಸ್ಪಷ್ಟಪಡಿಸಿದೆ.
ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಕಾಂಗ್ರೆಸ್ ಪಾಳುದಲ್ಲಿ ಈ ಫಲಿತಾಂಶ ಕೊಂಚಮಟ್ಟಿಗೆ ಆತಂಕಕ್ಕೆ ಕಾರಣವಾಗಿದೆ ಸರ್ಕಾರದ ಕುರಿತಂತೆ ಮತದಾರರು ನೀಡಿರುವ ವ್ಯತಿರಿಕ್ತ ಅಭಿಪ್ರಾಯ ಚಿಂತೆಗೀಡು ಮಾಡಿದೆ.
ಬೆಂಗಳೂರು ಹೊರತುಪಡಿಸಿ ದಕ್ಷಿಣ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಬಿಜೆಪಿ ಪ್ರಾಬಲ್ಯ ಹೆಚ್ಚಿಸಿಕೊಂಡಿದೆಯಾದರೂ ಕ್ಷೇತ್ರಗಳನ್ನು ಗೆಲ್ಲಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ ಆದರೆ ಉತ್ತರ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಸಮೀಕ್ಷೆಯಲ್ಲಿ ವಿವರಿಸಲಾಗಿದೆ.
ವಿಧಾನಸಭೆ ಚುನಾವಣೆಯ ಸಮಯದಲ್ಲಿ ಉಚಿತ ಕೊಡುಗೆಗಳ ಗ್ಯಾರಂಟಿ ಯೋಜನೆ, ಕಾಂಗ್ರೆಸ್ ಪರವಾಗಿ ಕಾಂಗ್ರೆಸ್ ಪರವಾಗಿ ಸೃಷ್ಟಿಸಿದ್ದವು ಆದರೆ ಈ ಚುನಾವಣೆಯಲ್ಲಿ ಅವುಗಳು ಅಂತಹ ನಿರೀಕ್ಷಿತ ಅಭಿಪ್ರಾಯವನ್ನು ಹೊಂದಿಲ್ಲ ಶಕ್ತಿ ಯೋಜನೆ ಹೊರತುಪಡಿಸಿ ಉಳಿದ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಉಂಟಾಗಿರುವ ಗೊಂದಲಗಳು ಪರಾನುಭವಿಗಳ ಆಯ್ಕೆಯಲ್ಲಿ ಮಾಡಲಾಗಿರುವ ಎಡವಟ್ಟುಗಳು ಮತ್ತು ನೇರ ನಗದು ಪಾವತಿ ಮೂಲಕ ಫಲಾನುಭವಿಗಳಿಗೆ ಹಣ ಸಂದಾಯ ಮಾಡಲು ಉಂಟಾಗಿರುವ ತಾಂತ್ರಿಕ ಕಾರಣಗಳು ಮತದಾರರ ಮೇಲೆ ಸಾಕಷ್ಟು ಪರಿಣಾಮ ಬೀರುವೆ ರಾಜ್ಯದ ಕೆಲವು ಕಡೆಗಳಲ್ಲಿ ಕಾಣಿಸಿಕೊಂಡಿರುವ ಒಬ್ಬರ ಕೂಡ ಚುನಾವಣೆ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸಮೀಕ್ಷೆಯಲ್ಲಿ ವಿವರಿಸಲಾಗಿದೆ.