ಹಣದ ಸಂಪನ್ಮೂಲ ಹೇರಳವಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ IPL ಈ ಸೀಸನ್ ನಲ್ಲಿ ವೀಕ್ಷಕ ದಾಖಲೆಗಳನ್ನು ಛಿದ್ರಗೊಳಿಸುತ್ತಿದೆ. ಈ ಬಾರಿ IPL ಕ್ರಿಕೆಟ್ ಪಂದ್ಯಾವಳಿಯ ಅಧಿಕೃತ ಟೆಲಿವಿಷನ್ ಪ್ರಸಾರಕ ಡಿಸ್ನಿ ಸ್ಟಾರ್, ಹಿಂದಿ ಭಾಷಿಕರ ಮಾರುಕಟ್ಟೆಗಳಲ್ಲಿ IPL ಇತಿಹಾಸದಲ್ಲೇ ಅತಿ ಹೆಚ್ಚು ವೀಕ್ಷಕರನ್ನು ಗಳಿಸಿದೆ.
IPL ನ ಮೊದಲ 10 ಪಂದ್ಯಗಳಿಗೆಒಟ್ಟು 20.4 ಕೋಟಿ ವೀಕ್ಷಕರು ಟಿವಿ ಟ್ಯೂನ್ ಮಾಡಿದ್ದಾರೆ, ಇದು ಕಳೆದ ಆವೃತ್ತಿಗೆ ಹೋಲಿಸಿದರೆ ಶೇ 29.5% ರಷ್ಟು ಹೆಚ್ಚಳವಾಗಿದೆ ಎಂದು ಕಂಪನಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಹಿಂದಿ ಭಾಷಿಕರ ವಲಯಗಳಲ್ಲಿ 4,380 ಕೋಟಿ ನಿಮಿಷಗಳ ವೀಕ್ಷಣಾ ಸಮಯವನ್ನು ಪಡೆದಿದೆ ಮತ್ತು ಕಳೆದ ವರ್ಷಕ್ಕೆ ಹೋಲಿಸಿದರೆ ಇದು 25% ಹೆಚ್ಚಾಗಿದೆ ಎಂದು ಕಂಪನಿ ಹೇಳಿದೆ.
ಹಿಂದಿ ಮಾರುಕಟ್ಟೆಗಳ ವೀಕ್ಷಣೆಯ ಬೆಳವಣಿಗೆ ಗಮನಾರ್ಹವಾಗಿದ್ದು ಯುಪಿ, ಬಿಹಾರ, ಎಂಪಿ, ದೆಹಲಿ, ರಾಜಸ್ಥಾನ, ಮಹಾರಾಷ್ಟ್ರ, ಪಂಜಾಬ್ ಮತ್ತು ಹರಿಯಾಣ ಪ್ರದೇಶಗಳು ಅದರಲ್ಲಿ ಸೇರಿವೆ. ಇದಲ್ಲದೆ, ದಕ್ಷಿಣದ ಮಾರುಕಟ್ಟೆಗಳು ಹಿಂದಿನದಕ್ಕೆ ಹೋಲಿಸಿದರೆ 21% ರಷ್ಟು ಬೆಳವಣಿಗೆಯನ್ನು ಕಂಡಿವೆ. ಆಂಧ್ರ ಪ್ರದೇಶ, ತೆಲಂಗಾಣ 33% ವೀಕ್ಷಣಾ ಬೆಳವಣಿಗೆಗೆ ಸಾಕ್ಷಿಯಾಗಿದೆ. ಹಾಗೇ ಕರ್ನಾಟಕವು 30% ಬೆಳವಣಿಗೆಯನ್ನು ದಾಖಲಿಸಿದೆ. ಕರ್ನಾಟಕದಲ್ಲಿ IPL ಮೊದಲ 10 ಪಂದ್ಯಗಳಿಗೆ 680 ಕೋಟಿ ನಿಮಿಷ ವೀಕ್ಷಣೆಯನ್ನು ಗಳಿಸಿದೆ. ಇದು ಅತಿ ಹೆಚ್ಚು ವೀಕ್ಷಣಾ ಬೆಳವಣಿಗೆಯಾಗಿದೆ.