ಶಾಸಕರ ಹೆಸರಲ್ಲಿ ಪೋರ್ಜರಿ ಸಹಿ.
ಬೆಂಗಳೂರು,ಆ.26-
ಇಬ್ಬರು ಶಾಸಕರ ನಕಲಿ ಲೆಟರ್ ಹೆಡ್ ಸೃಷ್ಟಿ ಮಾಡಿ ಅವರ ಸಹಿಯನ್ನು ಪೋರ್ಜರಿ ಮಾಡಿ ಸರ್ಕಾರಿ ಕೆಲಸ ಕೊಡಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಈ ಆರೋಪದ ಮೇಲೆ ರಾಮನಗರದ ಸ್ವಾಮಿ (35), ಅಂಜನ್ ಕುಮಾರ್ (28) ಎಂಬುವರನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿಧಾನಸೌಧದಲ್ಲಿ ಹಿಂದೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಸ್ವಾಮಿ ಕೆಲಸಕುಮಾರ್ ನನ್ನುವು ರಾಜಕಾರಣಿಗಳ ಒಡನಾಟದಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದನು.
ಹೀಗಿರುವಾಗ ಈತ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಹೆಸರಿನಲ್ಲಿ ನಕಲಿ ಲೆಟರ್ ಹೆಡ್ ಸೃಷ್ಟಿಸಿ, ನಕಲಿ ಸಹಿ ಮಾಡಿ ಸ್ವಾಮಿ, ವಿಧಾನಸಭಾ ಸಚಿವಾಲಯಕ್ಕೆ ಪತ್ರ ಬರೆದು ತನ್ನ ಪತ್ನಿ ವಿನುತಾ ಅವರನ್ನು ಶಾಸಕ ಶಾಮನೂರು ಶಿವಶಂಕರಪ್ಪ ಅವರ ಆಪ್ತ ಸಹಾಯಕಿಯಾಗಿ ನೇಮಿಸಲು ಶಿಫಾರಸ್ಸು ಮಾಡಿದ್ದನು
ಶಾಸಕ ರಘು ಹೆಸರಿನ ನಕಲಿ ಲೆಟರ್ ಹೆಡ್ ಹಾಗೂ ಪೋರ್ಜರಿ ಸಹಿಯೊಂದಿಗೆ ಅಂಜನ್ ಎಂಬುವರಿಗೆ ಶಾಸಕರ ಆಪ್ತ ಸಹಾಯಕ ಹುದ್ದೆ ಕೊಡುವಂತೆ ಶಿಫಾರಸು ಮಾಡಿದ್ದನು.ಈ ನಕಲಿ ಲೆಟರ್ ಹೆಡ್ ನಂಬಿದ ವಿಧಾನಸಭಾ ಸಚಿವಾಲಯ ಸಿಬ್ಬಂದಿ 2023ರ ಮೇನಲ್ಲಿ ವಿನುತಾಗೆ ಕೆಲಸ ನೀಡಿದ್ದರು. ಅದರಂತೆ ಅಂಜನ್ ಕುಮಾರ್ ಶಾಸಕ ರಘು ಅವರ ಆಪ್ತ ಸಹಾಯಕ ಹುದ್ದೆ ಪಡೆದುಕೊಂಡಿದ್ದ.
ಈ ನಡುವೆ ವಿನುತಾ ಕೆಲಸಕ್ಕೆ ಬಾರದೆ ಪ್ರತಿ ತಿಂಗಳು 30 ಸಾವಿರ ಸಂಬಳವನ್ನು ಪಡೆದಿದ್ದಾರೆ. ಈ ನಡುವೆ ವಿನುತಾ ತಾನು ಗರ್ಭಿಣಿಯಾಗಿದ್ದೇನೆ ಹೀಗಾಗಿ ಕೆಲಸ ಮುಂದುವರೆಸಲು ಸಾಧ್ಯವಿಲ್ಲ. ನನ್ನನ್ನು ಕೆಲಸದಿಂದ ಬಿಡುಗಡೆಗೊಳಿಸುವಂತೆ ಪತ್ರ ಬರೆದಿದ್ದಳು. ಇದರ ಬಗ್ಗೆ ಅನುಮಾನಗೊಂಡು ಪರಿಶೀಲನೆ ಮಾಡಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದ್ದು, ಅಧಿಕಾರಿಗಳು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ತನಿಖೆ ವೇಳೆ ವಂಚನೆ ಮಾಡಿರೋದು ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಸ್ವಾಮಿ ಮತ್ತು ಅಂಜನ್ ಕುಮಾರ್ ನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ ಸ್ವಾಮಿ ಪತ್ನಿ ವಿನುತಾಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
1 Comment
рубли в тенге конвертер валют .
Платформа объединяет точные курсы валют и мгновенный калькулятор для конвертации тенге, рублей и других валют. Удобный дизайн сайта позволяет экономить ваше время и силы.