ಬೆಂಗಳೂರು,ಜು.4- ಅತ್ಯಾಚಾರ,ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲಿನಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ನಾಲ್ಕು ತಿಂಗಳಿಗೊಮ್ಮೆ ಎಚ್ಐವಿ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ.
ಪ್ರಜ್ವಲ್ ರೇವಣ್ಣ ಭಾಗಿಯಾಗಿರುವ ಅತ್ಯಾಚಾರ,ಲೈಂಗಿಕ ದೌರ್ಜನ್ಯ ಸೇರಿ ನಾಲ್ಕು ಪ್ರಕರಣಗಳ ತನಿಖೆಯನ್ನು ನಡೆಸಿರುವ ವಿಶೇಷ ತನಿಖಾ ದಳ(ಎಸ್ ಐಟಿ) ಅಧಿಕಾರಿಗಳ ವಿಚಾರಣೆ ವೇಳೆ ಹಲವು ಸ್ಫೋಟಕ ಮಾಹಿತಿಗಳು ಬಯಲಾಗಿವೆ. ಅದರಲ್ಲಿ ಈ ಎಚ್ಐವಿ ಪರೀಕ್ಷೆಯ ವಿಚಾರವೂ ಒಂದಾಗಿದೆ. ಮಹಿಳೆಯರಿಗೆ ಬೆದರಿಕೆ ಹಾಕಿ ಬಲವಂತವಾಗಿ ಅಸುರಕ್ಷಿತ ಲೈಂಗಿಕ ಸಂಪರ್ಕ ನಡೆಸುತ್ತಿದ್ದ ದೂರು ಪ್ರಜ್ವಲ್ ಮೇಲಿದೆ.
ಇದರಿಂದ ಎಚ್ಐವಿ ಬರಬಹುದು ಎಂಬ ಆತಂಕದಿಂದಲೇ ಪ್ರತೀ ನಾಲ್ಕು ತಿಂಗಳಿಗೊಮ್ಮೆ ಎಚ್ಐವಿ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಿರಬಹುದು ಎಂದು ಶಂಕಿಸಲಾಗಿದೆ.
ಹಲವು ಮಹಿಳೆಯರ ಜೊತೆ ಪ್ರಜ್ವಲ್ ಲೈಂಗಿಕ ಸಂಪರ್ಕ ನಡೆಸುತ್ತಿದ್ದ ಎಂಬ ಆರೋಪಕ್ಕೆ ಈ ಸಂಗತಿ ಪುಷ್ಟಿ ನೀಡಿದ್ದು, ಇದನ್ನು ಪ್ರಜ್ವಲ್ಗೆ ವಿರೋಧ ಸಾಕ್ಷ್ಯವಾಗಿ ಬಳಸಿಕೊಳ್ಳಲು ಎಸ್ಐಟಿ ಮುಂದಾಗಿದೆ. ಇದು ಪ್ರಜ್ವಲ್ ಮಹಿಳೆಯರ ಮೇಲೆ ಬಲಾತ್ಕಾರ ನಡೆಸಿದ್ದಕ್ಕೆ ದಾಖಲೆಗಳಲ್ಲಿ ಒಂದಾಗಲಿದೆ
Previous Articleಕೊಳಗೇರಿ ನಿವಾಸಿಗಳಿಗೆ ರಿಲೀಫ್.
Next Article ನಾಲ್ಕು ಅಡಿ ಜಾಗಕ್ಕೆ ಬಿತ್ತು ಹೆಣ.