ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು 40% ಕಮಿಷನ್ ಆರೋಪ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ನನಗೆ ಸಂಬಂಧವಿಲ್ಲ. ಸರ್ಕಾರದ ವಿರುದ್ದ ಆರೋಪ ಮಾಡಿಕೊಳ್ಳಲಿ ಬಿಡಿ ನಮಗೇನು..? ಎಂದಿದ್ದಾರೆ.
ಮೈಸೂರು ಜಿಲ್ಲೆ ಎಚ್.ಡಿ ಕೋಟೆ ತಾಲ್ಲೂಕಿನ ಕಬಿನಿ ಜಲಾಶಯದಲ್ಲಿ ಜೆಡಿಎಸ್ ಜನತಾ ಜಲಧಾರೆ ಯಾತ್ರೆಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ನೀರಿನ ಸಮಸ್ಯೆಗಳನ್ನ ಬಗೆಹರಿಸಬೇಕಿದೆ ನನ್ನ ಶಕ್ತಿ ಮೀರಿ ನೀರಿಗಾಗಿ ಹೋರಾಟ ಮಾಡಿದ್ದೇನೆ ಎಂದರು.
ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ದೇವೇಗೌಡರು, ನನಗೆ ಸಂಬಂಧವಿಲ್ಲ ನನ್ನ ಮಗ PWD ಸಚಿವರಾಗಿದ್ದಾರಾ..? ನನ್ನ ಮಗ ನೀರಾವರಿ ಸಚಿವನಾಗಿದ್ದಾನಾ ಸಚಿವನಾಗಿದ್ದರೆ ಕಮಿಷನ್ ಬಗ್ಗೆ ಮಾತನಾಡುತ್ತಿದ್ದೆ. ಸರ್ಕಾರದ ವಿರುದ್ದ ಆರೋಪ ಮಾಡಿಕೊಳ್ಳಲಿ ಬಿಡಿ ನಮಗೇನು..? ರಾಜಕೀಯ ಹೇಳಲಾಗದಷ್ಟು ಕೆಟ್ಟು ಹೋಗಿದೆ ಎಂದರು.
ಜೆಡಿಎಸ್-ಬಿಜೆಪಿ ಚುನಾವಣಾ ಪೂರ್ವ ಮೈತ್ರಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ದೇವೇಗೌಡರು, ಜೆಡಿಎಸ್ ಕಾರ್ಯಕ್ರಮಗಳನ್ನ ನೋಡಿ ಬಣ್ಣ ಕಟ್ಟುತ್ತಾರೆ. ನಮ್ಮ ಜತೆ ಬಿಜೆಪಿಯವರು ಯಾರಾದರೂ ಇಲ್ಲಿಗೆ ಬಂದಿದ್ದಾರಾ. ಸುಮ್ಮನೆ ಯಾರೋ ಏನೋ ಹೇಳುತ್ತಾರೆ ಹೇಳಲಿ ಬಿಡಿ ಎಂದರು.
ನೀರಿನ ವಿಚಾದಲ್ಲಿ ತಮಿಳುನಾಡಿನ ಪಕ್ಷಗಳು ಒಂದಾಗುತ್ತವೆ. ಆದರೆ ಕರ್ನಾಟಕದ ಪಕ್ಗಗಳು ಒಂದಾಗಲ್ಲ. ಮಹದಾಯಿ ಯೋಜನೆ ವಿಚಾರದಲ್ಲಿ ಸಾಕಷ್ಟು ನೋವಿದೆ ಜಲಸಂಪನ್ಮೂಲ ಸಚಿವರು 3 ಬಾರಿ ಸಮಯ ಕೊಟ್ಟಿದ್ದರು ಮನೆಗೆ ಭೇಟಿಗೆ ಹೋದರೆ ಚಕ್ಕರ್ ಎಂದು ಹೆಚ್,ಡಿಡಿ ಕಿಡಿಕಾರಿದರು.