ಬೆಂಗಳೂರು,ಏ.15-
ಡ್ರಗ್ಸ್ ಮಾರಾಟ, ಸೇವನೆ ಮತ್ತು ಸಾಗಾಣಿಕೆ ವಿರುದ್ಧ ಸಮರ ಸಾರಿರುವ ಬೆಂಗಳೂರಿನ ಸಿಸಿಬಿ ಪೊಲೀಸರು ನಗರದಲ್ಲಿ ದಾಳಿ ನಡೆಸಿ 5 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಈ ವೇಳೆ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ, ಅಲ್ಲದೇ ಡ್ರಗ್ಸ್ ಎಲ್ಲಿಂದ ತರಲಾಗಿದೆ.ಎಲ್ಲೆಲ್ಲಿಗೆ ಸಾಗಿಸಲಾಗುತ್ತಿದೆ ಮತ್ತು ಇದರ ಬಳಕೆದಾರರು ಯಾರು ಎಂಬ ಮಾಹಿತಿ ಸಂಗ್ರಹಿಸಿ ವಿವಿಧ ಅಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ.
ಈಗ ವಶಕ್ಕೆ ಪಡೆದಿರುವಲ್ಲಿ ಒಬ್ಬ ಹಲವು ದಿನಗಳಿಂದ ಈ ದಂಧೆಯಲ್ಲಿ ತೊಡಗಿರುವ ಮಾಹಿತಿ ಲಭ್ಯವಾಗಿದೆ ಈತ ಈ ಹಿಂದೆ ಈಗಲ್ ಟನ್ ರೆಸಾರ್ಟ್‌ನಲ್ಲಿ ಬಂಧಿತನಾಗಿದ್ದ.ಇದೀಗ ಈತ ವಿಚಾರಣೆ ವೇಳೆ ನೀಡಿದ ಮಾಹಿತಿ ಆಧರಿಸಿ
ಪೆಡ್ಲರ್‌ನಿಂದ 3.5 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ, 1.5 ಕೋಟಿ ರೂ. ಮೌಲ್ಯದ ಸುಮಾರು 1ಕೆಜಿ ಎಂಡಿಎಂಎ ಹಾಗೂ 30 ಲಕ್ಷ ರೂ. ನಗದನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಅಧಿಕಾರಿಗಳು ಮಾದಕವಸ್ತು ಜಪ್ತಿ ಮಾಡಿ, ನಗರದ ಹಲವು ಕಾಲೇಜು ವಿದ್ಯಾರ್ಥಿಗಳ ಕೈ ಸೇರುವುದನ್ನು ತಪ್ಪಿಸಿದ್ದಾರೆ. ಈ ಸಂಬಂಧ ಪ್ರತ್ಯೇಕ ಪ್ರಕರಣಗಳಲ್ಲಿ ಮತ್ತಿಬ್ಬರನ್ನು ಬಂಧಿಸಲಾಗಿದ್ದು,ತನಿಖೆ ನಡೆಸಲಾಗುತ್ತಿದೆ
Previous Articleಪರಪ್ಪನ ಅಗ್ರಹಾರದಿಂದ ಬೆದರಿಕೆ ಕರೆ
Next Article ಜಾತಿ ಗಣತಿ ಅಲ್ಲ, ಸಿದ್ದ ಷಡ್ಯಂತ್ರ ಎಂದ ಕುಮಾರಸ್ವಾಮಿ.