ನವದೆಹಲಿ,ಅ.14-
ಖಚಿತ ಮಾಹಿತಿ ಮೇರೆಗೆ ದೆಹಲಿ ಪೊಲೀಸರು ಮತ್ತು ಗುಜರಾತ್ ಪೊಲೀಸರ ಜಂಟಿ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಬೃಹತ್ ಡ್ರಗ್ಸ್ ಮಾಫಿಯಾ ಜಾಲವನ್ನು ಭೇದಿಸಿದ್ದಾರೆ
ಗುಜರಾತ್‌ನ ಅಂಕಲೇಶ್ವರದಲ್ಲಿ 5 ಸಾವಿರ ಕೋಟಿ ಮೌಲ್ಯದ 518 ಕೆಜಿ ಕೊಕೇನ್ ನನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ
ಅಂಕಲೇಶ್ವರದಲ್ಲಿರುವ ಆವ್ಕಾರ್ ಡ್ರಗ್ಸ್ ಲಿಮಿಟೆಡ್ ಕಂಪನಿಯ ಆವರಣದ ಮೇಲೆ ದಾಳಿ ನಡೆಸಿದ್ದು, ಈ ವೇಳೆ 518 ಕೆಜಿ ಡ್ರಗ್ಸ್ ಪತ್ತೆಯಾಗಿದೆ. ದೆಹಲಿ ಪೊಲೀಸ್ ವಿಶೇಷ ಘಟಕವು ಇತ್ತೀಚೆಗೆ ದೆಹಲಿಯಲ್ಲಿ ನಡೆಸಿದ 2 ಕಾರ್ಯಾಚರಣೆಗಳಲ್ಲಿ 700 ಕೆಜಿಗೂ ಹೆಚ್ಚು ಕೊಕೇನ್ ಅನ್ನು ವಶಪಡಿಸಿಕೊಂಡಿತ್ತು. ಆ ಪೈಕಿ ಅ. 2 ರಂದು ದಕ್ಷಿಣ ದೆಹಲಿಯಲ್ಲಿ 500 ಕೆಜಿ ಕೊಕೇನ್ ವಶಪಡಿಸಿಕೊಂಡರೆ, ರಮೇಶ್ ನಗರ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ 200 ಕೆಜಿ ಕೊಕೇನ್ ಪತ್ತೆಯಾಗಿತ್ತು. ಇವುಗಳ ಮೌಲ್ಯ 5600 ಕೋಟಿ ರು. ಆಗಿತ್ತು.ಬಳಿಕ ಮಧ್ಯಪ್ರದೇಶದಲ್ಲೂ 2000 ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿತ್ತು. ನಿನ್ನೆಯ ದಾಳಿಯೂ ಸೇರಿದಂತೆ ಈ ತಿಂಗಳು ಒಟ್ಟು 1,289 ಕೆಜಿ ಕೊಕೇನ್ ಮತ್ತು 40 ಕೆಜಿ ಹೈಡ್ರೋಪೋನಿಕ್ ಥಾಯ್ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಒಟ್ಟು ಮೌಲ್ಯ 13,000 ಕೋಟಿ ರುಪಾಯಿ ಆಗಿದೆ ಎಂದು ತಿಳಿದುಬಂದಿದೆ.
Previous Articleಟೀಮ್ ಇಂಡಿಯಾದ ಬೌಲರ್ ಈಗ DSP ಅಧಿಕಾರಿ
Next Article ಬಳ್ಳಾರಿ ಚುನಾವಣೆಗೆ ಖರ್ಚಾದ ಹಣ.