ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿರ್ಮಿಸಿ, ನಟಿಸಿರುವ 777 ಚಾರ್ಲಿ ಸಿನಿಮಾ ತಂಡ ಈಗ ದುಬೈಗೆ ತೆರಳಿದೆ. ದುಬೈನ ಸಿಟಿ ಸೆಂಟರ್ ದೇರಾನಲ್ಲಿ ಈವತ್ತು ಸಂಜೆ 7 ಗಂಟೆಗೆ 777 ಚಾರ್ಲಿ ವಿಶೇಷ ಪ್ರದರ್ಶನ ಏರ್ಪಾಡಾಗಿದೆ. ಈ ಶೋನಲ್ಲಿ ಚಾರ್ಲಿ ತಂಡ ಅಭಿಮಾನಿಗಳ ಜೊತೆ ಕೂತು ಸಿನಿಮಾ ವೀಕ್ಷಿಸಲಿದೆ.ಇದಕ್ಕಾಗಿ ಇಡೀ ಚಿತ್ರತಂಡ ನಿನ್ನೆಯೇ ದುಬೈಗೆ ತೆರಳಿತ್ತು. ಕನ್ನಡ, ಹಿಂದಿ ಸೇರಿದಂತೆ ಬಹುಭಾಷೆಗಳಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗ ವಿದೇಶದಲ್ಲಿರುವ ಪ್ರೇಕ್ಷಕರನ್ನು ಭೇಟಿ ಮಾಡಲು ಚಿತ್ರತಂಡ ಮುಂದಾಗಿದೆ.
Previous Articleಸ್ಕೂಟರ್‌ನಲ್ಲಿ ಆಕಸ್ಮಿಕ ಬೆಂಕಿ ತಗುಲಿ ಇಬ್ಬರ ಸ್ಥಿತಿ ಚಿಂತಾಜನಕ
Next Article ಸಚಿವ ಆನಂದಸಿಂಗ್ ಕಚೇರಿಯಲ್ಲಿ ಪುನೀತ್ ರಾಜ್ ಕುಮಾರ್ ಜಾಕೆಟ್!