ಪಾಟ್ನಾ(ಬಿಹಾರ): ಆರ್ ಜೆ ಡಿ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಮನೆಯ ಮೆಟ್ಟಿಲುಗಳ ಮೇಲೆ ಎಡವಿ ಬಿದ್ದು ಗಾಯಮಾಡಿಕೊಂಡಿದ್ದಾರೆ. ಅವರ ಭುಜ ಮುರಿದಿದೆ. ಬೆನ್ನಿಗೆ ಕೂಡ ಗಾಯವಾಗಿದೆ.
ಮೇವು ಹಗಹರಣದಲ್ಲಿ ಅಪರಾಧಿಯಾಗಿರುವ ಲಾಲೂ ಪ್ರಸಾದ್ ಯಾದವ್ ಇದೀಗ ಜಾಮೀನನ ಮೇಲೆ ಬಿಡುಗಡೆಯಾಗಿದ್ದರು. ಲಾಲೂ ಪ್ರಸಾದ್ ಯಾದವ್ ಹಲವು ರೋಗಗಳಿಂದ ಬಳಲುತ್ತಿದ್ದಾರೆ. ಚಿಕಿತ್ಸೆ ಪಡೆಯುವ ಸಲುವಾಗಿ ವಿದೇಶಕ್ಕೆ ತೆರಳಲು ಸಿದ್ಧತೆ ನಡೆಸಿದ್ದರು.
ಮಾಜಿ ಕೇಂದ್ರ ಸಚಿವರಾಗಿರುವ ಲಾಲೂ ಪ್ರಸಾದ್ ಯಾದವ್, ಇತ್ತೀಚಿನ ವರ್ಷಗಳಲ್ಲಿ ಕಾನೂನು ಸಮರ ಎದುರಿಸುತ್ತಿದ್ದಾರೆ.