ಬೆಂಗಳೂರು,ಜು. 4-ಪುಸ್ತಕದ ಅಂಗಡಿ( ಬುಕ್ ಸ್ಟಾಲ್)ಯಲ್ಲಿ ಡ್ರಗ್ಸ್ ಮಾರಾಟ ದಂದೆಯನ್ನು ಬೇಧಿಸಿರುವ
ಸದಾಶಿವನಗರ ಪೊಲೀಸರು ಖದೀಮನೊಬ್ಬನನ್ನು ಭೇದಿಸಿದ್ದಾರೆ. ಲೋಕೇಶ್ ಬಂಧಿತ ಆರೋಪಿಗಯಾಗಿದ್ದಾನೆ.
ಯಶವಂತಪುರ ಆರ್ ಟಿ ಓ ಕಚೇರಿ ಬಳಿ ಪುಟ್ಟಪ್ಪ ಬುಕ್ ಸ್ಟಾಲ್ ಇರಿಸಿಕೊಂಡಿದ್ದ ಆರೋಪಿ, ಅಲ್ಲಿಂದಲೇ ಡ್ರಗ್ಸ್ ಸಲ್ಯೂಷನ್‌ಗಳನ್ನು ಮಾರಾಟ ಮಾಡುತ್ತಿದ್ದ.
ಇತ್ತೀಚೆಗೆ ರಾಬರಿಗೆ ಯತ್ನಿಸಿ ಸದಾಶಿವನಗರ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ ತಬ್ರೇಜ್ ಹಾಗು ತೌಸಿಫ್‌ರನ್ನು ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು.
ಆರೋಪಿಗಳು ಜಡ್ಜ್ ಮುಂದೆಯೇ ಸಾರ್ವಜನಿಕರು ಥಳಿಸಿದ್ದರ ಬಗ್ಗೆ ಹೇಳಿದ್ದರು. ಆತನ ಹೇಳಿಕೆ ಹಿನ್ನೆಲೆ ಥಳಿಸಿದ್ದ ಸಾರ್ವಜನಿಕರ ಮೇಲೆಯೂ ದೂರು ದಾಖಲು ಮಾಡಲಾಗಿತ್ತು.
ಸರಿಯಾದ ಊಟ ತಿಂಡಿ ಕೂಡ ಮಾಡದೇ ಕಾಟ ಕೊಡ್ತಿದ್ದರು. ನೀರು ಕುಡಿದರೂ ಕೂಡ ವಾಂತಿ ಮಾಡಿಕೊಳ್ಳುತ್ತಿದ್ದರು. ವಾರ ಪೂರ್ತಿ ಊಟ ಮಾಡದೆ ಸೆಲ್ಯೂಷನ್ ನಶೆಯಲ್ಲೇ ಇರುತ್ತಿದ್ದರು. ಹಾಗಾಗಿ ಇವರ ಹಿನ್ನೆಲೆ ತಿಳಿದುಕೊಳ್ಳಲು ಸದಾಶಿವನಗರ ಪೊಲೀಸರು ಮುಂದಾದ ವೇಳೆ, ನಶೆಯಲ್ಲಿಯೇ ಇವರು ರಾಬರಿಗೆ ಇಳಿದಿದ್ದ ಬಗ್ಗೆ ಮಾಹಿತಿ ತಿಳಿದುಬಂದಿತ್ತು.
ಆರಂಭದಲ್ಲಿ ಪೊಲೀಸರು, ಖದೀಮರು ಗಾಂಜಾ ಮತ್ತಿನಲ್ಲಿ ರಾಬರಿಗೆ ಇಳಿದಿರಬಹುದು ಎಂದು ಅಂದಾಜಿಸಿದ್ದರು. ಸೂಕ್ತ ವಿಚಾರಣೆ ನಡೆಸಿದಾಗ ಸಲ್ಯೂಷನ್ ವಿಚಾರ ಬೆಳಕಿಗೆ ಬಂದಿತ್ತು. ಹಾಗಾಗಿ ಸಲ್ಯೂಷನ್ ಸಿಗುತ್ತಿದ್ದ ಮಳಿಗೆಯ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದರು.