ಬೆಂಗಳೂರು,ಜು.7- ಟ್ರಾನ್ಸ್ಫಾರ್ಮರ್ ಮಂಜೂರಾತಿಗಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬೆಸ್ಕಾಂ ತಾಂತ್ರಿಕ ವಿಭಾಗದ ನಿರ್ದೇಶಕ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಬೆಸ್ಕಾಂ ತಾಂತ್ರಿಕ ವಿಭಾಗದ ನಿರ್ದೇಶಕ ಪಿ.ಎ.ಷಣ್ಮುಕ್ ಎಸಿಬಿ ಬಲೆಗೆ ಬಿದ್ದವರು. ಹೊಸಕೋಟೆಯ ಏಕರಾಜಪುರದ ಟ್ರಾನ್ಸ್ ಫಾರ್ಮಾರ್ ಮಂಜೂರಾತಿಗಾಗಿ ನಟರಾಜ್ ಎಂಬುವವರು ಅರ್ಜಿ ಹಾಕಿದ್ದರು. ಷಣ್ಮುಕ್ 4 ಟ್ರಾನ್ಸ್ಫಾರ್ಮರ್ ಮಂಜೂರಾತಿ ಮಾಡಲು 40 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ನಟರಾಜ್ ಈ ಬಗ್ಗೆ ಎಸಿಬಿಗೆ ದೂರು ನೀಡಿದ್ದರು. ಅದರಂತೆ ಇಂದು ಮುಂಗಡ ಹಣವಾಗಿ 5 ಸಾವಿರ ಸ್ವೀಕರಿಸುವಾಗ ರೆಡ್ ಹ್ಯಾಂಡಾಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ.