ಕಾಳಿ ಸಾಕ್ಷ್ಯಚಿತ್ರ ನಿರ್ದೇಶಕಿ ಲೀನಾ ಮಣಿಮೇಕಲ ಮತ್ತೊಂದು ವಿವಾದದ ಕಿಡಿ ಹೊತ್ತಿಸಿದ್ದಾರೆ. ಶಿವ ಹಾಗು ಪಾರ್ವತಿ ಪಾತ್ರಧಾರಿಗಳು ಧೂಮಪಾನ ಮಾಡುತ್ತಿರುವ ಫೋಟೋವನ್ನು ಲೀನಾ ತನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದ ಶೀರ್ಷಿಕೆಯೇ ಅವರು Elsewhere…. ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ಬಳಿಕ ಮತ್ತೆ ವಿವಾದ ಹುಟ್ಟಿಕೊಂಡಿದ್ದು ದ್ವೇಷ ಹರಡುವುದನ್ನು ನಿಲ್ಲಿಸಿ, ಧರ್ಮದ ಅವಹೇಳನ ನಿಲ್ಲಿಸಿ ಎಂದು ಹಲವು ಟ್ವಿಟ್ಟರ್ ಬಳಕೆದಾರರು ಲೀನಾ ಮಣಿಮೇಕಲ ಅವರನ್ನು ಆಗ್ರಹಿಸಿದ್ದಾರೆ.