ಮಣಿರತ್ನಂ ನಿರ್ದೇಶನದಲ್ಲಿ ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ ನಟಿಸುತ್ತಿರುವುದು ಗೊತ್ತಿದೆ. ಈ ಸಿನಿಮಾ ಬಗ್ಗೆ ಐಶ್ ಅಭಿಮಾನಿಗಳು ಸಹ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಿಂದಿ ಮನರಂಜನಾ ಉದ್ಯಮದಲ್ಲಿ ನಾವು ಹೊಂದಿರುವ ಅತ್ಯುತ್ತಮ ಮತ್ತು ಹೆಚ್ಚು ಮೆಚ್ಚುಗೆ ಪಡೆದ ವ್ಯಕ್ತಿಗಳಲ್ಲಿ ಐಶ್ವರ್ಯಾ ರೈ ಕೂಡ ಒಬ್ಬರು. ಇನ್ನು ಐಶ್ವರ್ಯ ರೈ ಬಚ್ಚನ್ ಕನ್ನಡದಲ್ಲಿ ನಟಿಸೋದು ಯಾವಾಗ ಎನ್ನುತ್ತಲೇ ಜಮಾನಾ ಕಳೆದು ಹೋದವು. ಆದರೀಗ ಮಣಿರತ್ನಂ ಅವರ ಹೊಸ ಚಿತ್ರ ರಿಲೀಸಿಗೆ ರೆಡಿಯಾಗಿದ್ದು ಐಶ್ವರ್ಯ ನಂದಿನಿಯಾಗಿ ಕನ್ನಡಕ್ಕೆ ಬರುತ್ತಿದ್ದಾರೆ. 1994 ರಲ್ಲಿ ಮಿಸ್ ವರ್ಲ್ಡ್ ಆಗಿ ಯಶಸ್ವಿಯಾದ ನಂತರ ಅವರು ಹಿಂದಿರುಗಿ ನೋಡಿಲ್ಲ. ಈ ಸುಂದರಿ ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ಅದ್ಭುತವಾಗಿ ಕಾಣಿಸುತ್ತಿರುವ ಪೋಸ್ಟರ್ ಒಂದು ಬಿಡುಗಡೆಯಾಗಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಈ ಸಿನಿಮಾದಲ್ಲಿ ಐಶ್ ಫಸ್ಟ್ ಲುಕ್‌ಗಾಗಿ ಅಭಿಮಾನಿಗಳು ಬಹಳ ದಿನಗಳಿಂದ ಕಾದು ಕುಳಿತಿದ್ದು. ಅಂತಿಮವಾಗಿ ಕೊನೆಗೊಂಡಿದೆ. ಲೈಕಾ ಪ್ರೊಡಕ್ಷನ್ಸ್ ಇಂದು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಐಶ್ವರ್ಯಾ ರೈ ಬಚ್ಚನ್ ಅವರ ಫಸ್ಟ್ ಲುಕ್ ಪಜುವೂರಿನ ರಾಣಿ ‘ನಂದಿನಿ’ ಎಂದು ಪೋಸ್ಟರ್ ಹಂಚಿಕೊಂಡಿದೆ. ಈ ಪೋಸ್ಟರ್ನಲ್ಲಿ ನಾವು ಅವರ ಸೌಂದರ್ಯ ನೋಡಿ ಮಾರುಹೋಗದೇ ಇರುವುದಿಲ್ಲ.
Previous Articleಅನಿತಾ ಭಟ್ ಚೊಚ್ಚಲ ನಿರ್ಮಾಣದ ಚಿತ್ರ ಇಂದಿರಾ OTTನಲ್ಲಿ ಬಿಡುಗಡೆ!
Next Article ಶಿವಕುಮಾರ್ ಶಕ್ತಿ ಪ್ರದರ್ಶನ