ಕೊರೋನಾ ನಂತರ ಬಾಲಿವುಡ್ ನ ಎಷ್ಟೋ ದೊಡ್ಡ ಸ್ಟಾರ್ ನಟರ ಸಿನೆಮ ಕೂಡ ಕಲೆಕ್ಷನ್ ಇಲ್ಲದೇ ಮಕಾಡೆ ಮಲಗಿದ ಸ್ಥಿತಿ ಬಂದೊದಗಿರುವುದು ಗೊತ್ತೇ ಇದೆ. ಎಂಥಾ ಒಳ್ಳೆ ಸಿನೆಮ ಬಂದರೂ ಥಿಯೇಟರ್ ಹೋಗದೇ ಜನ OTTಯಲ್ಲಿ ಬಿಡುಗಡೆಯಾದ ಮೇಲೆ ನೋಡುತ್ತೇವೆ ಎಂದು ಕಾದು ಥಿಯೇಟರ್ ನಲ್ಲಿ ರಿಲೀಸ್ ಆಗಿ ಕಲೆಕ್ಷನ್ ಆಗದೇ ಒಂದೇ ತಿಂಗಳಲ್ಲಿ OTTಯಲ್ಲಿ ಬಿಡುಗಡೆಯಾದ ಮೇಲೆ ನೋಡುತ್ತಿದ್ದರು. ಆದರೆ, ಇನ್ನು ಮುಂದೆ ಥಿಯೇಟರನಲ್ಲಿ ರಿಲೀಸ್ ಆದ ಸಿನೆಮ OTTಯಲ್ಲಿ ರಿಲೀಸ್ ಆಗಲು ಪ್ರೇಕ್ಷಕರು 8 ವಾರಗಳು ಕಾಯಬೇಕು. ಈ ಹೊಸ ನಿಯಮ ಅಗಷ್ಟ್ 1ರಿಂದ ಜಾರಿಗೆ ಬರಲಿದೆ. ಕೆಲವು ರಾಜ್ಯಗಳಲ್ಲಿ 100% ಆಸನ ವ್ಯವಸ್ಥೆ ಮಾಡಿದ್ದಾರೆ. ಕೆಲವು ಸಿನೆಮಗಳು ಒಳ್ಳೆಯ ಕಲೆಕ್ಷನ್ ಕೂಡ ಮಾಡಿವೆ. ಆದರೆ OTTಯಲ್ಲಿ ರಿಲೀಸ್ ಆಗುತ್ತವೆ ಎನ್ನುವ ಕಾರಣಕ್ಕೆ ಸಿನೆಮ ಅಭಿಮಾನಿಗಳು ಥಿಯೇಟರ್ ಗೆ ಹೋಗುತ್ತಿಲ್ಲ. ಈ ಕಾರಣದಿಂದ 8 ವಾರಗಳ ನಂತರ OTTಯಲ್ಲಿ ಬಿಡುಗಡೆಯಾದರೆ ಒಂದಷ್ಟು ಮಂದಿ ಥಿಯೇಟರ್ ನತ್ತ ಹೆಜ್ಜೆ ಹಾಕುವ ಸಾಧ್ಯತೆ ಇದೆ.
ಥಿಯೇಟರನಲ್ಲಿ ಬಿಡುಗಡೆಯಾದ ಬಾಲಿವುಡ್ ಸಿನೆಮಾಗಳು OTTಗೆ ಬಂದ ಮೇಲೆ ನೋಡ್ತೀವಿ ಎನ್ನುವವರಿಗೆ ಕಾದಿದೆ ನಿರಾಶೆ!!
Previous Articleಕಡಿಮೆಯಾದ ಮಳೆ ಅಬ್ಬರ ನೆರೆ ಇಳಿಮುಖ, ಭತ್ತದ ಬೆಳೆ ದೇವರೆಗತಿ
Next Article ಕನ್ನಂಬಾಡಿ ಭರ್ತಿಗೆ 3 ಅಡಿ ಬಾಕಿ