ಬೆಳಗಾವಿ,ಜು.9-ಜೂಜಾಟದ ವಿಚಾರವಾಗಿ ನಡೆದ ಗುಂಪು ಗಲಾಟೆಯಲ್ಲಿ ಬ್ಲೇಡ್ನಿಂದ ಇಬ್ಬರು ಯುವಕರ ಕತ್ತು ಕೊಯ್ದಿರುವ ದುರ್ಘಟನೆ ಸಂಕೇಶ್ವರದಲ್ಲಿ ನಡೆದಿದೆ.
ಕತ್ತು ಕೊಯ್ದಿರುವುದರಿಂದ ಗಂಭೀರವಾಗಿ ಗಾಯಗೊಂಡ ಸಂಕೇಶ್ವರ ಪಟ್ಟಣದ ವಡ್ಡರ ಗಲ್ಲಿಯ ಸಂತೋಷ ವಡ್ಡರ (25) ಹಾಗು ಪರಶುರಾಮ ವಡ್ಡರ (28) ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರಿಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಜೂಜಾಡುವ ವೇಳೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿದ್ದು, ಈ ಸಂದರ್ಭದಲ್ಲಿ ಒಂದು ಗುಂಪಿನವರು ಸಂತೋಷ ಮತ್ತು ಪರಶುರಾಮ ವಡ್ಡರ್ ಎಂಬುವವರ ಮೇಲೆ ದಾಳಿ ನಡೆಸಿ ಬ್ಲೇಡ್ನಿಂದ ಕತ್ತುಕೊಯ್ದು ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರು ಯುವಕರನ್ನು ಮೊದಲಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಘಟನಾ ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
Previous Articleಕನ್ನಂಬಾಡಿ ಭರ್ತಿಗೆ 3 ಅಡಿ ಬಾಕಿ
Next Article ನಿತ್ಯಾನಂದನನ್ನು ಮದುವೆಯಾಗುವೆ ಎಂದ ಖ್ಯಾತ ನಟಿ…!!