Bengaluru: ಬಾಕಿ ಬಿಲ್ ಕೊಡಿಸುವಂತೆ, ತೂಕದಲ್ಲಿ ಮೋಸ ನಿಲ್ಲಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಇಂದು ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಲು ನೂರಾರು ಕಬ್ಬು ಬೆಳೆಗಾರರನ್ನು
ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ರೈಲ್ವೆ ನಿಲ್ದಾಣದಿಂದ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕಲು ತೆರಳುತ್ತಿದ್ದ ಕಬ್ಬು ಬೆಳೆಗಾರರ ಜೊತೆಗೆ ರೈತರನ್ನು ಪೊಲೀಸರು ರೈಲ್ವೆ ನಿಲ್ದಾಣದಲ್ಲಿಯೇ ವಶಕ್ಕೆ ಪಡೆದಿದ್ದಾರೆ.
ಕಬ್ಬು ಬೆಳೆಗಾರರಿಗೆ ಬೆಲೆಯಲ್ಲಿ ಮೋಸ, ತೂಕದಲ್ಲಿ ವಂಚನೆ, ಪಾವತಿಯಲ್ಲಿ ವಿಳಂಬ ಖಂಡಿಸಿ ರಾಜ್ಯದ ನಾನಾ ಭಾಗಗಳಿಂದ ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಬಂದಿಳಿದ ಕಬ್ಬು ಬೆಳೆಗಾರರ ಜೊತೆಗೆ ರೈತರು ಸಮಾವೇಶಗೊಂಡು ಅಲ್ಲಿಂದ ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾದಾಗ ಪೊಲೀಸರು ವಶಕ್ಕೆ ತೆಗೆದುಕೊಂಡರು. ಪ್ರತಿಭಟನೆ ಆರಂಭಕ್ಕೂ ಮುನ್ನವೇ ಸಿಎಂ ಮನೆ ಮುತ್ತಿಗೆಗೆ ಕರೆ ನೀಡಿದ್ದ ರೈತರನ್ನು ಬಂಧಿಸಿ, ಕರೆದೊಯ್ದಿದ್ದಾರೆ.
CM ಮನೆ ಮುತ್ತಿಗೆ ಯತ್ನ, ಕಬ್ಬು ಬೆಳೆಗಾರರು ಪೊಲೀಸರ ವಶಕ್ಕೆ
Previous Articleನ್ಯಾಯಾಂಗ ನಿಂದನೆ: ವಿಜಯ್ ಮಲ್ಯಗೆ 4 ತಿಂಗಳು ಜೈಲು ಶಿಕ್ಷೆ
Next Article ಮನೆ ಕುಸಿತದಿಂದ ಕಂಗಾಲಾದ ಕುಟುಂಬ