ಬೆಂಗಳೂರು,ಜು.12-ಕೆಂಗೇರಿಯ ವಿಶ್ವೇಶ್ವರಯ್ಯ ಬಡಾವಣೆಯ ಧನನಾಯಕನಹಳ್ಳಿ ಬಳಿಯ ಪೊದೆಯಲ್ಲಿ
ಸುಟ್ಟು ಕರಕಲಾದ ಮಹಿಳೆಯ ಶವ ಪತ್ತೆಯಾಗಿದ್ದ ಪ್ರಕರಣವನ್ನು ಬೇಧಿಸಿರುವ ಕೆಂಗೇರಿ ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೇರೊಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿದ ಕಾರಣದಿಂದ ರೊಚ್ಚಿಗೆದ್ದು ಪತಿಯೇ ಪತ್ನಿಯನ್ನು ಕೊಲೆಗೈದು ಸುಟ್ಟು ಹಾಕಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಪ್ರಕರಣದಲ್ಲಿ ಸುಟ್ಟು ಕರಕಲಾದ ಮಹಿಳೆಯು ಕೆಂಗೇರಿಯ ಸನ್ ಸಿಟಿಯ ನಗೀನಾ ಎಂದು ಗುರುತಿಸಿ ಕೃತ್ಯ ನಡೆಸಿದ ಆಕೆಯ ಪತಿ ಕೆಂಗೇರಿಯ ಸನ್ ಸಿಟಿಯ ಮಹಮ್ಮದ್ ಮಂಜೂರ್ ಅಹಮದ್ ಹಣಗಿ ಅಲಿಯಾಸ್ ರಫೀಕ್ ಅಹಮದ್
(29) ಹಾಗು ಕೊಲೆಗೆ ಸಹಕರಿಸಿದ ಆತನ ಸ್ನೇಹಿತ ದೊಡ್ಡತುಮಕೂರಿನ ಕರೀಂ ಸೊಣ್ಣೆನಹಳ್ಳಿಯ ಪ್ರಜ್ವಲ್ (21)ನನ್ನು ಬಂಧಿಸಲಾಗಿದೆ.
ಜುಲೈ 3ರಂದು ಕೆಂಗೇರಿಯ ವಿಶ್ವೇಶ್ವರಯ್ಯ ಬಡಾವಣೆಯ ಧನನಾಯಕನಹಳ್ಳಿ ಬಳಿಯ ಪೊದೆಯಲ್ಲಿ ಮಹಿಳೆಯೊಬ್ಬರ ಸುಟ್ಟು ಕರಕಲಾದ ಶವ ಪತ್ತೆಯಾಗಿತ್ತು. ಗುರುತು ಪತ್ತೆ ಹಚ್ಚಲಾಗದಷ್ಟು ದೇಹ ಸುಟ್ಟು ಹೋಗಿದ್ದರಿಂದ ಪೊಲೀಸರಿಗೆ ಈ ಪ್ರಕರಣವನ್ನು ಭೇದಿಸುವುದು ಸವಾಲಾಗಿ ಪರಿಣಮಿಸಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರಚಿಸಲಾಗಿದ್ದ ವಿಶೇಷ ತಂಡಗಳು ಮೃತ ಮಹಿಳೆಯ ವಿಳಾಸವನ್ನು ಪತ್ತೆಮಾಡಿ ಆಕೆಯ ತಂದೆ ತಾಯಿಯಿಂದ ಖಚಿತ ಪಡಿಸಿಕೊಂಡು ತನಿಖೆ ಮುಂದುವರಿಸಿದ ವಿಜಯಪುರ ಜಿಲ್ಲೆಯಲ್ಲಿ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಲಾಗಿದೆ.
ಕೊಲೆಯಾದ ಮೊದಲೇ ವಿವಾಹವಾಗಿ ಎರಡು ಮಕ್ಕಳಿದ್ದು ಪತಿಯನ್ನು ತೊರೆದು ಸ್ವಚ್ಚತಾ ಕೆಲಸ ಮಾಡಿಕೊಂಡಿದ್ದು ಜೆಸಿಬಿ ಚಾಲಕನಾಗಿದ್ದ ಆರೋಪಿ ರಫೀಕ್ ಅಹಮದ್ ನನ್ನು ಎರಡನೇ ವಿವಾಹವಾಗಿದ್ದಳು.
ಇದಲ್ಲದೇ ಹಲವು ದಿನಗಳಿಂದ ತಾನು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಬೇರೊಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿದ್ದು ಇದನ್ನು ತಿಳಿದ ರಫೀಕ್ ಅಹಮದ್ ಜಗಳ ಮಾಡಿ ಬುದ್ದಿ ಹೇಳಿದ್ದ ಆದರೂ ಆಕೆಯ ವರ್ತನೆ ಸರಿಯಾಗದಿದ್ದರಿಂದ ರೊಚ್ಚಿಗೆದ್ದು ಕೊಲೆ ಮಾಡಿ ಸುಟ್ಟು ಹಾಕಿದ್ದನ್ನು ಬಾಯ್ಬಿಟ್ಟಿದ್ದಾನೆ ಎಂದರು.
ಪತ್ನಿಯನ್ನು ಕೊಂದು, ಪೊದೆಗೆಸೆದು ಸುಟ್ಟ ಪಾಪಿ ಪತಿರಾಯ..!
Previous Articleಬಾಲಕನ ನುಂಗಿದ ಮೊಸಳೆ
Next Article ತಿರುಪತಿಯಲ್ಲಿ ರಾಜ್ಯದ ಯಾತ್ರಿಕರಿಗೆ 236 ಕೋಟಿ ಯೋಜನೆ